"ಉದಾಹರಣೆಗೆ, ಒಬ್ಬರು, ನಾವು ರಿಸಲ್ಟ್ ಬಯಸುವ ಕಾರಣ ಈ ಇದೇ ತಂಡವನ್ನು ಕಣಕ್ಕಿಳಿಸಬೇಕು ಎಂದರೆ, ಮತ್ತೊಬ್ಬ ಮಾಲೀಕರು, ನಾವು ಒಂದಷ್ಟು ಕಾಂಬಿನೇಷನ್ ಇಟ್ಟುಕೊಂಡು ಆಡುವುದೇ ಉತ್ತಮ ಎನ್ನುತ್ತಿದ್ದರು. ಅದೇ ತಮ್ಮ ಲೆಕ್ಕಾಚಾರಗಳು ಮೈದಾನದಲ್ಲಿ ಕೆಲಸ ಮಾಡದಿದ್ದಾಗ, ದೊಡ್ಡ ವ್ಯತ್ಯಾಸಕ್ಕೆ ಕಾರಣವಾಗುತ್ತಿತ್ತು. ಪ್ರಸ್ತುತ ಪರಿಸ್ಥಿತಿಯನ್ನು ನೋಡಿದರೆ, ವಿಷಯಗಳು ಬಹಳಷ್ಟು ಬದಲಾಗಿವೆ ಎಂದು ತೋರುತ್ತೆ. 18 ವರ್ಷಗಳಲ್ಲಿ ಹನ್ನೆರಡು ನಾಯಕರು ಬದಲಾಗಿದ್ದಾರೆ ಎಂದು ಹೇಳಿದರು.