ಮುಂಬರುವ ವರ್ಷಗಳಲ್ಲಿ ಟೂರ್ನಿಯ ಮೊದಲ ಹಂತವನ್ನು ಫೆಬ್ರವರಿ-ಏಪ್ರಿಲ್ ಹಾಗೂ ಎರಡನೇ ಹಂತವನ್ನು ಸೆಪ್ಟೆಂಬರ್-ಅಕ್ಟೋಬರ್‌ನಲ್ಲಿ ನಡೆಸುವ ಸುಳಿವನ್ನು ಐಪಿಎಲ್ ಅಧ್ಯಕ್ಷ ಅರುಣ್ ಧುಮಾಲ್ (Arun Dhumal) ಸಂದರ್ಶನವೊಂದರಲ್ಲಿ ಬಿಟ್ಟುಕೊಟ್ಟಿದ್ದಾರೆ. ಪ್ರಸ್ತುತ ಐಪಿಎಲ್, ಕ್ರಿಕೆಟ್ ಕ್ಯಾಲೆಂಡರ್‌ನಲ್ಲಿ ಸುಮಾರು ಎರಡು ತಿಂಗಳುಗಳನ್ನು ತೆಗೆದುಕೊಳ್ಳುತ್ತದೆ. ಮುಂಬರುವ ವರ್ಷಗಳಲ್ಲಿ ಟೂರ್ನಿಯನ್ನು ಒಟ್ಟು 94 ಪಂದ್ಯಗಳಿಗೆ ಹೆಚ್ಚಿಸಿದರೆ, ಇನ್ನೂ ದೀರ್ಘವಾಗಲಿದೆ.