ಮುಂಬೈ: ಭಾರತೀಯ ಪ್ರೀಮಿಯರ್ ಲೀಗ್ (IPL) ಎಂದರೆ ಕೇವಲ ಕ್ರಿಕೆಟ್ ಟೂರ್ನಿ ಮಾತ್ರವಲ್ಲ, ಅದು ಅಭಿಮಾನಿಗಳ ಭಾವನೆಗಳ ಹಬ್ಬ. ಪ್ರತೀ ಸೀಸನ್‌ನಲ್ಲಿ ತಂಡಗಳ ಪ್ರದರ್ಶನ, ಪ್ಲೇಆಫ್(IPL Playoffs) ಹೋರಾಟ ಮತ್ತು ಟ್ರೋಫಿ ಕನಸುಗಳು ಅಭಿಮಾನಿಗಳಲ್ಲಿ ಭಾರೀ ಕುತೂಹಲ ಹುಟ್ಟಿಸುತ್ತವೆ. ಈ ನಡುವೆ ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ಬಾರಿ ಪ್ಲೇಆಫ್‌ಗೆ ಪ್ರವೇಶ ಪಡೆದ ತಂಡಗಳ ಪಟ್ಟಿಯಲ್ಲಿ Chennai Super Kings ಮತ್ತೆ ಅಗ್ರಸ್ಥಾನದಲ್ಲಿದ್ದು, Sunrisers Hyderabad ಇದೀಗ ಎಲೈಟ್ ಕ್ಲಬ್‌ಗೆ ಸೇರ್ಪಡೆಯಾಗಿದೆ.