ಚಿನ್ನಸ್ವಾಮಿಯಲ್ಲಿ ಐಪಿಎಲ್ ಉದ್ಘಾಟನಾ, ಫೈನಲ್ ಪಂದ್ಯ: ಈ ಬಾರಿಯೂ ಆರ್​ಸಿಬಿ 'ಅನ್​ಬಾಕ್ಸ್' ಈವೆಂಟ್ ಆಯೋಜನೆ?

ಚಿನ್ನಸ್ವಾಮಿಯಲ್ಲಿ ಐಪಿಎಲ್ ಉದ್ಘಾಟನಾ, ಫೈನಲ್ ಪಂದ್ಯ: ಈ ಬಾರಿಯೂ ಆರ್​ಸಿಬಿ ಅನ್​ಬಾಕ್ಸ್ ಈವೆಂಟ್ ಆಯೋಜನೆ?
ಚಿನ್ನಸ್ವಾಮಿಯಲ್ಲಿ ಐಪಿಎಲ್ ಉದ್ಘಾಟನಾ, ಫೈನಲ್ ಪಂದ್ಯ: ಈ ಬಾರಿಯೂ ಆರ್​ಸಿಬಿ ಅನ್​ಬಾಕ್ಸ್ ಈವೆಂಟ್ ಆಯೋಜನೆ?
Published on
ಬೆಂಗಳೂರು: ವಿಶ್ವದ ಶ್ರೀಮಂತ ಕ್ರಿಕೆಟ್ ಲೀಗ್ ಐಪಿಎಲ್ (IPL) ಟೂರ್ನಿಯ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡ (rcb) ತನ್ನ ತವರು ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮರಳಿ ಕಣಕ್ಕಿಳಿಯುವುದಾಗಿ ಮಂಗಳವಾರ ಘೋಷಿಸಿದೆ. ಮುಂಬರುವ 19ನೇ ಆವೃತ್ತಿಯ ಉದ್ಘಾಟನಾ, ಪ್ಲೇಆ್ ಹಾಗೂ ಫೈನಲ್ ಪಂದ್ಯ ಸಹಿತ ಒಟ್ಟು ಏಳು ಪಂದ್ಯಗಳು ಬೆಂಗಳೂರಿನಲ್ಲಿ ನಡೆಯಲಿವೆ ಎಂದು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್‌ಸಿಎ) ಅಧ್ಯಕ್ಷ ವೆಂಕಟೇಶ್ ಪ್ರಸಾದ್ ಅಧಿಕೃತ ಪಡಿಸಿದ್ದಾರೆ.
ಮಾರ್ಚ್ 28 ಅಥವಾ 29ರಂದು ಆರಂಭವಾಗಲಿರುವ 19ನೇ ಆವೃತ್ತಿಯಲ್ಲಿ ಆರ್‌ಸಿಬಿ ತಂಡ ತನ್ನ ತವರಿನ ಏಳು ಲೀಗ್ ಪಂದ್ಯಗಳ ಪೈಕಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ 5 ಪಂದ್ಯಗಳನ್ನು ಆಡಲಿದೆ. ಬಾಕಿ ಉಳಿದ 2 ಪಂದ್ಯಗಳನ್ನು ಛತ್ತೀಸ್‌ಗಢದ ರಾಯ್ಪುರದ ಶಹೀದ್ ವೀರನಾರಾಯಣ್ ಕ್ರೀಡಾಂಗಣದಲ್ಲಿ ಆಡುವುದಾಗಿ ಆರ್‌ಸಿಬಿ ಸಿಇಒ ರಾಜೇಶ್ ಮೆನನ್ ತಿಳಿಸಿದ್ದಾರೆ. ಆದರೆ, ಯಾವ ಪಂದ್ಯಗಳು ಬೆಂಗಳೂರು ಹಾಗೂ ರಾಯ್ಪುರದಲ್ಲಿ ನಡೆಯಲಿವೆ ಎಂಬುದು ಕುತೂಹಲವಾಗಿ ಉಳಿದಿದೆ. ಐಪಿಎಲ್ ನಿಯಮಗಳ ಅನ್ವಯ ಹಾಲಿ ಚಾಂಪಿಯನ್ ತಂಡದ ತವರು ಮೈದಾನದಲ್ಲಿಯೇ ಉದ್ಘಾಟನಾ, ಪ್ಲೇಆ್ (ಕ್ವಾಲಿಫೈಯರ್-2) ಹಾಗೂ ಫೈನಲ್ ಪಂದ್ಯ ನಡೆಯಲಿದ್ದು, ಬಿಸಿಸಿಐ ವೇಳಾಪಟ್ಟಿಯನ್ನು ಇನ್ನಷ್ಟೇ ಅಧಿಕೃತಪಡಿಸಬೇಕಿದೆ.
ಕಳೆದ ಆವೃತ್ತಿಯ ಟ್ರೋಫಿ ಗೆದ್ದ ಬಳಿಕ ವಿಜಯೋತ್ಸವದ ವೇಳೆ ಸಂಭವಿಸಿದ ಕಾಲ್ತುಳಿತದಲ್ಲಿ 11 ಮಂದಿ ಸಾವನ್ನಪ್ಪಿದ ನಂತರ ಘಟನೆಯ ನಂತರ ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಹಿಡಿದಿದ್ದ ಗ್ರಹಣ ಬಿಟ್ಟಿದ್ದು, ಐಪಿಎಲ್‌ನೊಂದಿಗೆ ಉದ್ಯಾನ ನಗರಿಗೆ ಕ್ರಿಕೆಟ್ ಮರಳಲಿದೆ. ಕಾಲ್ತುಳಿತ ದುರಂತದ ನಂತರ ಸರ್ಕಾರ, ಕೆಎಸ್‌ಸಿಎ ಜತೆಗಿನ ತಿಕ್ಕಾಟದಿಂದಾಗಿ ತವರು ಮೈದಾನ ಬದಲಾಯಿಸಲು ಕೂಡ ್ರಾಂಚೈಸಿ ಮುಂದಾಗಿತ್ತು. ಆದರೆ, ಕೆಎಸ್‌ಸಿಎ ಹಾಲಿ ಆಡಳಿತ ಮಂಡಳಿಯು, ಆರ್‌ಸಿಬಿ ಬೆಂಗಳೂರಿನಲ್ಲಿ ಆಡುವಂತೆ ಮನವೊಲಿಸುವಲ್ಲಿ ಯಶಸ್ವಿಯಾಗಿದೆ.
"

ಕರ್ನಾಟಕ ಕ್ರಿಕೆಟ್ ಅಭಿಮಾನಿಗಳಿಗೆ ಇದು ಅತ್ಯಂತ ಸಂತೋಷದ ವಿಷಯವಾಗಿದೆ. ಚಿನ್ನಸ್ವಾಮಿಗೆ ಕ್ರಿಕೆಟ್ ಅನ್ನು ಮರಳಿ ತಂದಿರುವುದು ಲಾರ್ಡ್ಸ್‌ನಲ್ಲಿ ನಾನು 5 ವಿಕೆಟ್ ಪಡೆದಿದ್ದಕ್ಕಿಂತ ಉತ್ತಮ ಸಾಧನೆ ಎನಿಸಿದೆ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕ್ರಿಕೆಟ್ ಪಂದ್ಯಗಳು ಸುಗಮವಾಗಿ ಸಾಗಲು ಆರ್‌ಸಿಬಿ ಹಾಗೂ ಕೆಎಸ್‌ಸಿಎ ಒಟ್ಟಾಗಿ ಕಾರ್ಯನಿರ್ವಹಿಸಬೇಕಿದೆ.

15ರಿಂದ ಆರ್‌ಸಿಬಿ ಅಭ್ಯಾಸ
ಅಭಿಮಾನಿಗಳಿಗಾಗಿ ಕಳೆದ ಮೂರು ವರ್ಷಗಳಿಂದ ಅನ್‌ಬಾಕ್ಸ್ (unbox) ಎಂಬ ವಿಶೇಷ ಕಾರ್ಯಕ್ರಮ ಆಯೋಜಿಸುತ್ತಿರುವ ಆರ್‌ಸಿಬಿ ಫ್ರಾಂಚೈಸಿ , ಈ ಬಾರಿಯೂ ಮಾರ್ಚ್ 20 ಅಥವಾ 22ಕ್ಕೆ ಕಾರ್ಯಕ್ರಮ ನಡೆಸಲು ಸಿದ್ಧತೆ ನಡೆಸಿದೆ. ಟೂರ್ನಿ ಆರಂಭಕ್ಕೆ ಒಂದು ವಾರ ಮುನ್ನ ಕಾರ್ಯಕ್ರಮ ಬೆಂಗಳೂರಿನಲ್ಲಿ ನಡೆಯಲಿದ್ದು, ತರಬೇತಿ ಬಳಗ, ಆರ್‌ಸಿಬಿ ಆಟಗಾರರು ಮಾರ್ಚ್ 15ರಿಂದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಅಭ್ಯಾಸ ಆರಂಭಿಸಲಿದ್ದಾರೆ ಎಂದು ಮಾಜಿ ಕ್ರಿಕೆಟಿಗ ವೆಂಕಟೇಶ್ ಪ್ರಸಾದ್ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು. ಅಗತ್ಯ ಅನುಮತಿಗಳ ಕುರಿತ ಪ್ರಕ್ರಿಯೆ ಪೂರ್ಣಗೊಳಿಸಲು ಬೆಂಬಲ ನೀಡಿದ ಕರ್ನಾಟಕ ಸರ್ಕಾರ, ಕೆಎಸ್‌ಸಿಎ ಮತ್ತು ಪೊಲೀಸರಿಗೆ ಕೆಎಸ್‌ಸಿಎ ಮತ್ತು ಫ್ರಾಂಚೈಸಿ ಧನ್ಯವಾದ ತಿಳಿಸಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net