IPL ಮಿನಿ ಹರಾಜು: 7 ಕನ್ನಡಿಗರು ಬಿಡುಗಡೆ, 19ನೇ ಆವೃತ್ತಿಗೆ ತಂಡಗಳ ರಿಟೇನ್ ಆಟಗಾರರ ಅಂತಿಮ ಪಟ್ಟಿ ಹೀಗಿದೆ!

ಮಯಾಂಕ್ ಅಗರ್ವಾಲ್,  ಮನೋಜ್ ಭಾಂಡಗೆ,ಆಂಡ್ರೆ ರಸೆಲ್, ಲವನೀತ್ ಸಿಸೋಡಿಯಾ
ಮಯಾಂಕ್ ಅಗರ್ವಾಲ್, ಮನೋಜ್ ಭಾಂಡಗೆ,ಆಂಡ್ರೆ ರಸೆಲ್, ಲವನೀತ್ ಸಿಸೋಡಿಯಾ
Published on

ಪ್ರಮುಖ ಮುಖ್ಯಾಂಶಗಳು

  • ಬಿಡ್ಡಿಂಗ್ ವಾರ್‌ಗೆ ಸಜ್ಜಾದ ಕೆಕೆಆರ್, ಸಿಎಸ್‌ಕೆ
  • ರಸೆಲ್, ವೆಂಕಟೇಶ್, ಪಥಿರಣ ರಿಲೀಸ್
  • ಜಡೇಜಾ-ಸ್ಯಾಮ್ಸನ್ ವರ್ಗಾವಣೆ
ಬೆಂಗಳೂರು: ಮುಂದಿನ ವರ್ಷದ ಐಪಿಎಲ್ 19ನೇ ಆವೃತ್ತಿಯ ಮಿನಿ ಹರಾಜು (IPL mini auction)  ಪ್ರಕ್ರಿಯೆಗೆ ಪೂರ್ವಭಾವಿಯಾಗಿ ಎಲ್ಲ 10 ತಂಡಗಳು ಆಟಗಾರರ ರಿಟೇನ್ ಪಟ್ಟಿಯನ್ನು ಅಂತಿಮಗೊಳಿಸಿವೆ. 3 ಬಾರಿಯ ಚಾಂಪಿಯನ್ ಕೆಕೆಆರ್ ಮತ್ತು 5 ಬಾರಿಯ ಚಾಂಪಿಯನ್ ಸಿಎಸ್‌ಕೆ ತಂಡಗಳು ಗರಿಷ್ಠ ಆಟಗಾರರನ್ನು ರಿಲೀಸ್ ಮಾಡಿದ್ದು, ದೊಡ್ಡ ಮೊತ್ತದೊಂದಿಗೆ ಹರಾಜಿನಲ್ಲಿ ಬಿಡ್ಡಿಂಗ್ ವಾರ್ ನಡೆಸಲು ಸಜ್ಜಾಗಿವೆ.
ಕೆಕೆಆರ್ ಸರ್ವಾಧಿಕ 64.30 ಕೋಟಿ ರೂ. ಮತ್ತು ಸಿಎಸ್‌ಕೆ 43.40 ಕೋಟಿ ರೂ. ಮೊತ್ತದೊಂದಿಗೆ ಹರಾಜಿನಲ್ಲಿ ಬಹುತೇಕ ಹೊಸ ತಂಡವನ್ನು ಕಟ್ಟಲು ಸಿದ್ಧವಾಗಿವೆ. ಕಳೆದ ಆವೃತ್ತಿಯ 3ನೇ ದುಬಾರಿ ಆಟಗಾರ ವೆಂಕಟೇಶ್ ಅಯ್ಯರ್ (₹23.75 ಕೋಟಿ) ಮತ್ತು ವಿಂಡೀಸ್ ಆಲ್ರೌಂಡರ್ ಆಂಡ್ರೆ ರಸೆಲ್ (₹12 ಕೋಟಿ) ಅವರನ್ನು ಕೆಕೆಆರ್ ತಂಡದಿಂದ ಬಿಡುಗಡೆಗೊಳಿಸಿದೆ. ಸಿಎಸ್‌ಕೆ ತಂಡ ಲಂಕಾ ವೇಗಿ ಮಥೀಶ ಪಥಿರಣ (₹13 ಕೋಟಿ) ಅವರನ್ನು ರಿಲೀಸ್ ಮಾಡಿರುವುದು ಅಚ್ಚರಿ ಎನಿಸಿದೆ. ರಿಟೇನ್, ವರ್ಗಾವಣೆಯ ಮೂಲಕ ಹೆಚ್ಚಿನ ಆಟಗಾರರನ್ನು ಉಳಿಸಿಕೊಂಡಿರುವ ಮುಂಬೈ ಇಂಡಿಯನ್ಸ್ ಅತ್ಯಂತ ಕನಿಷ್ಠ 2.75 ಕೋಟಿ ರೂ.ನೊಂದಿಗೆ ಹರಾಜಿನಲ್ಲಿ ಭಾಗವಹಿಸಲಿದೆ. 
ಇತರ ಪ್ರಮುಖ ರಿಲೀಸ್: ಆರ್‌ಸಿಬಿ: ಲಿಯಾಮ್ ಲಿವಿಂಗ್‌ಸ್ಟೋನ್, ಲುಂಗಿ ಎನ್‌ಗಿಡಿ; ಕೆಕೆಆರ್: ಕ್ವಿಂಟನ್ ಡಿಕಾಕ್, ಮೊಯಿನ್ ಅಲಿ, ಅನ್ರಿಚ್ ನೋಕಿಯಾ, ರಹಮಾನುಲ್ಲ ಗುರ್ಬಜ್; ಡೆಲ್ಲಿ: ಡು ಪ್ಲೆಸಿಸ್, ಜೇಕ್  ಮೆಕ್‌ಗುರ್ಕ್, ಮೋಹಿತ್ ಶರ್ಮ; ಗುಜರಾತ್: ಗೆರಾಲ್ಡ್ ಕೋಟ್‌ಜೀ, ದಸುನ್ ಶನಕ; ಸಿಎಸ್‌ಕೆ: ಡೆವೊನ್ ಕಾನ್‌ವೇ, ರಚಿನ್ ರವೀಂದ್ರ, ದೀಪಕ್ ಹೂಡಾ; ಸನ್‌ರೈಸರ್ಸ್‌: ಆಡಂ ಜಂಪಾ, ರಾಹುಲ್ ಚಹರ್, ವಿಯಾನ್ ಮುಲ್ಡರ್; ಪಂಜಾಬ್ ಕಿಂಗ್ಸ್: ಗ್ಲೆನ್ ಮ್ಯಾಕ್ಸ್‌ವೆಲ್, ಜೋಶ್ ಇಂಗ್ಲಿಸ್; ಮುಂಬೈ: ರೀಸ್ ಟಾಪ್ಲೆ, ಕರ್ಣ್ ಶರ್ಮ, ಮುಜೀಬ್ ಉರ್ ರೆಹಮಾನ್, ಪುತ್ತೂರು; ಲಖನೌ: ಆಕಾಶ್‌ದೀಪ್, ರವಿ ಬಿಷ್ಣೋಯಿ, ಡೇವಿಡ್ ಮಿಲ್ಲರ್; ರಾಜಸ್ಥಾನ: ಮಹೀಶ್ ತೀಕ್ಷಣ, ವಾನಿಂದು ಹಸರಂಗ.
ತಂಡಗಳ ರಿಟೇನ್ ಪಟ್ಟಿ: 
ಆರ್‌ಸಿಬಿ: ವಿರಾಟ್ ಕೊಹ್ಲಿ, ರಜತ್ ಪಾಟೀದಾರ್, ಯಶ್ ದಯಾಳ್, ದೇವದತ್ ಪಡಿಕ್ಕಲ್, ಅಭಿನಂದ್ ಸಿಂಗ್, ನುವಾನ್ ತುಷಾರ, ಟಿಮ್ ಡೇವಿಡ್, ಭುವನೇಶ್ವರ್ ಕುಮಾರ್, ಫಿಲ್ ಸಾಲ್ಟ್, ಜೇಕಬ್ ಬೆಥೆಲ್, ರಸಿಕ್ ದಾರ್, ಜಿತೇಶ್ ಶರ್ಮ, ರೊಮಾರಿಯೊ ಶೆರ್ಡ್, ಜೋಶ್ ಹ್ಯಾಸಲ್‌ವುಡ್, ಸುಯಶ್ ಶರ್ಮ, ಕೃನಾಲ್ ಪಾಂಡ್ಯ, ಸ್ವಪ್ನಿಲ್ ಸಿಂಗ್. ರಿಟೇನ್ 17 (6 ವಿದೇಶಿ); ಬಾಕಿ ಹಣ: ₹16.40 ಕೋಟಿ; ಬಾಕಿ ಸ್ಲಾಟ್: 8 (2 ವಿದೇಶಿ).
ಪಂಜಾಬ್ ಕಿಂಗ್ಸ್: ಶ್ರೇಯಸ್ ಅಯ್ಯರ್, ಅರ್ಷದೀಪ್ ಸಿಂಗ್, ಮಿಚ್ ಓವನ್, ಅಜ್ಮತ್‌ಉಲ್ಲಾ ಒಮರ್ಜಾಯಿ, ಮುಶೀರ್ ಖಾನ್, ಸೂರ್ಯಾಂಶ್ ಶೆಡ್ಗೆ, ಹರ್‌ನೂರ್ ಪನ್ನು, ನೇಹಲ್ ವಧೇರ, ವಿಷ್ಣು ವಿನೋದ್, ಹರ್‌ಪ್ರೀತ್ ಬ್ರಾರ್, ಪ್ರಭ್‌ಸಿಮ್ರನ್ ಸಿಂಗ್, ವೈಶಾಕ್ ವಿಜಯ್‌ಕುಮಾರ್, ಲಾಕಿ ರ್ಗ್ಯುಸನ್, ಪ್ರಿಯಾಂಶ್ ಆರ್ಯ, ಕ್ಸೇವಿಯರ್ ಬಾರ್ಟ್ಲೆಟ್, ಮಾರ್ಕೋ ಜಾನ್ಸೆನ್, ಪಿ. ಅವಿನಾಶ್, ಯಶ್ ಠಾಕೂರ್, ಮಾರ್ಕಸ್ ಸ್ಟೋಯಿನಿಸ್, ಶಶಾಂಕ್ ಸಿಂಗ್, ಯಜುವೇಂದ್ರ ಚಾಹಲ್. ರಿಟೇನ್: 21 (6 ವಿದೇಶಿ); ಬಾಕಿ ಹಣ: ₹11.50 ಕೋಟಿ; ಬಾಕಿ ಸ್ಲಾಟ್: 4 (2 ವಿದೇಶಿ)
ರಾಜಸ್ಥಾನ ರಾಯಲ್ಸ್: ಧ್ರುವ ಜುರೆಲ್, ಯಶಸ್ವಿ ಜೈಸ್ವಾಲ್, ವೈಭವ್ ಸೂರ್ಯವಂಶಿ, ರಿಯಾನ್ ಪರಾಗ್, ಯಧ್ವೀರ್ ಚರಕ್, ಆರ್ಚರ್, ಸಂದೀಪ್ ಶರ್ಮ, ಕ್ವೇನ ಮಕ, ಶಿಮ್ರೋನ್ ಹೆಟ್ಮೆಯರ್, ಡ್ರಿ ಪ್ರಿಟೋರಿಯಸ್, ಶುಭಂ ದುಬೆ, ನಾಂಡ್ರೆ ಬರ್ಗರ್, ತುಷಾರ್ ದೇಶಪಾಂಡೆ. ರಿಟೇನ್: 16 (7 ವಿದೇಶಿ); ಬಾಕಿ ಹಣ: ₹16.05 ಕೋಟಿ; ಬಾಕಿ ಸ್ಲಾಟ್: 9 (1 ವಿದೇಶಿ).
ಸಿಎಸ್‌ಕೆ: ಎಂಎಸ್ ಧೋನಿ, ಋತುರಾಜ್ ಗಾಯಕ್ವಾಡ್, ಶಿವಂ ದುಬೆ, ಶ್ರೇಯಸ್ ಗೋಪಾಲ್, ಅಂಶುಲ್ ಕಾಂಬೋಜ್, ಡಿವಾಲ್ಡ್ ಬ್ರೆವಿಸ್, ಊರ್ವಿಲ್ ಪಟೇಲ್, ಗುರುಜಪ್‌ನೀತ್ ಸಿಂಗ್, ಜೇಮಿ ಓವರ್ಟನ್, ಮುಕೇಶ್ ಚೌಧರಿ, ನಾಥನ್ ಎಲ್ಲಿಸ್, ನೂರ್ ಅಹ್ಮದ್, ರಾಮಕೃಷ್ಣ, ಖಲೀಲ್ ಅಹ್ಮದ್, ಆಯುಷ್ ಮಹಾತ್ರೆ. ರಿಟೇನ್: 18 (4 ವಿದೇಶಿ), ಬಾಕಿ ಹಣ: ₹43.40 ಕೋಟಿ; ಬಾಕಿ ಸ್ಲಾಟ್: 9 (4 ವಿದೇಶಿ).
ಡೆಲ್ಲಿ ಕ್ಯಾಪಿಟಲ್ಸ್: ಕೆಎಲ್ ರಾಹುಲ್, ಅಕ್ಷರ್ ಪಟೇಲ್, ಕರುಣ್ ನಾಯರ್, ಅಭಿಷೇಕ್ ಪೊರೆಲ್, ಕುಲದೀಪ್ ಯಾದವ್, ತ್ರಿಪುರಣ ವಿಜಯ್, ಅಜಯ್ ಮಂಡಲ್, ಮಾಧವ್ ತಿವಾರಿ, ಟ್ರಿಸ್ಟಾನ್ ಸ್ಟಬ್ಸ್, ಆಶುತೋಷ್ ಶರ್ಮ, ಮಿಚೆಲ್ ಸ್ಟಾರ್ಕ್, ವಿಪ್ರಜ್ ನಿಗಮ್, ಮುಕೇಶ್ ಕುಮಾರ್, ದುಶ್ಮಂತ ಚಮೀರ, ಸಮೀರ್ ರಿಜ್ವಿ, ಟಿ. ನಟರಾಜನ್. ರಿಟೇನ್: 17 (3 ವಿದೇಶಿ); ಬಾಕಿ ಹಣ: ₹21.8 ಕೋಟಿ; ಬಾಕಿ ಸ್ಲಾಟ್: 8 (5 ವಿದೇಶಿ).
ಗುಜರಾತ್ ಟೈಟಾನ್ಸ್: ಶುಭಮಾನ್ ಗಿಲ್, ವಾಷಿಂಗ್ಟನ್ ಸುಂದರ್, ಪ್ರಸಿದ್ಧಕೃಷ್ಣ, ಮೊಹಮದ್ ಸಿರಾಜ್, ಜೋಸ್ ಬಟ್ಲರ್, ಅನುಜ್ ರಾವತ್, ಗ್ಲೆನ್ ಫಿಲಿಪ್ಸ್, ಕುಮಾರ್ ಕುಶಾಗ್ರ, ರಾಹುಲ್ ತೆವಾಟಿಯಾ, ಮಾನವ್ ಸುಥರ್, ರಶೀದ್ ಖಾನ್, ಗುರ್‌ನೂರ್ ಸಿಂಗ್, ಸಾಯಿ ಸುದರ್ಶನ್, ಇಶಾಂತ್ ಶರ್ಮ, ಅರ್ಷದ್ ಖಾನ್, ಶಾರುಖ್ ಖಾನ್, ಜಯಂತ್ ಯಾದವ್, ನಿಶಾಂತ್ ಸಿಂಧು, ಕಗಿಸೊ ರಬಾಡ, ಸಾಯಿ ಕಿಶೋರ್. ರಿಟೇನ್: 20 (4 ವಿದೇಶಿ); ಬಾಕಿ ಹಣ: ₹12.9 ಕೋಟಿ; ಬಾಕಿ ಸ್ಲಾಟ್: 5 (4 ವಿದೇಶಿ).
ಕೆಕೆಆರ್: ಅಜಿಂಕ್ಯ ರಹಾನೆ, ರಿಂಕು ಸಿಂಗ್, ರೋವ್ಮನ್ ಪೊವೆಲ್, ಅಂಗಕೃಷ್ ರಘುವಂಶಿ, ಸುನೀಲ್ ನಾರಾಯಣ್, ಅನುಕೂಲ್ ರಾಯ್, ಉಮ್ರಾನ್ ಮಲಿಕ್, ಹರ್ಷಿತ್ ರಾಣಾ, ವೈಭವ್ ಅರೋರ, ಮನೀಷ್ ಪಾಂಡೆ, ವರುಣ್ ಚಕ್ರವರ್ತಿ, ರಮಣ್‌ದೀಪ್ ಸಿಂಗ್. ರಿಟೇನ್: 12 (2 ವಿದೇಶಿ); ಬಾಕಿ ಹಣ: 64.3 ಕೋಟಿ; ಬಾಕಿ ಸ್ಲಾಟ್: 13 (6 ವಿದೇಶಿ).
ಲಖನೌ ಸೂಪರ್‌ಜೈಂಟ್ಸ್: ರಿಷಭ್ ಪಂತ್, ನಿಕೋಲಸ್ ಪೂರನ್, ಅಬ್ದುಲ್ ಸಮದ್, ದಿಗ್ವೇಶ್ ರಾಥಿ, ಮೊಹ್ಸಿನ್ ಖಾನ್, ಏಡನ್ ಮಾರ್ಕ್ರಮ್, ಹಿಮ್ಮತ್ ಸಿಂಗ್, ಆಕಾಶ್ ಸಿಂಗ್, ಎಂ. ಸಿದ್ಧಾರ್ಥ್, ಪ್ರಿನ್ಸ್ ಯಾದವ್, ಮ್ಯಾಥ್ಯೂ ಬ್ರಿಟ್ಜ್‌ಕೆ, ಅರ್ಷಿನ್ ಕುಲಕರ್ಣಿ, ಮಯಾಂಕ್ ಯಾದವ್, ಶಾಬಾಜ್ ನದೀಂ, ಆವೇಶ್ ಖಾನ್, ಆಯುಷ್ ಬಡೋನಿ, ಮಿಚೆಲ್ ಮಾರ್ಷ್. ರಿಟೇನ್: 19 (4 ವಿದೇಶಿ); ಬಾಕಿ ಹಣ: ₹22.95 ಕೋಟಿ; ಬಾಕಿ ಸ್ಲಾಟ್: 6 (4 ವಿದೇಶಿ).
ಮುಂಬೈ ಇಂಡಿಯನ್ಸ್: ಹಾರ್ದಿಕ್ ಪಾಂಡ್ಯ, ಸೂರ್ಯಕುಮಾರ್ ಯಾದವ್, ಜಸ್‌ಪ್ರೀತ್ ಬುಮ್ರಾ, ರೋಹಿತ್ ಶರ್ಮ, ತಿಲಕ್ ವರ್ಮ, ಅಲ್ಲಾ ಘಜನ್‌ರ್, ಮಿಚೆಲ್ ಸ್ಯಾಂಟ್ನರ್, ಅಶ್ವನಿ ಕುಮಾರ್, ನಮನ್ ಧೀರ್, ಕಾರ್ಬಿನ್ ಬಾಷ್, ರಘು ಶರ್ಮ, ದೀಪಕ್ ಚಹರ್, ರಾಜ್‌ಅಂಗದ್ ಬಾವಾ, ರಾಬಿನ್ ಮಿಂಜ್, ಟ್ರೆಂಟ್ ಬೌಲ್ಟ್, ವಿಲ್ ಜಾಕ್ಸ್, ರ‌್ಯಾನ್ ರಿಕೆಲ್‌ಟನ್. ರಿಟೇನ್: 20 (7ವಿದೇಶಿ); ಬಾಕಿ ಹಣ: ₹2.75 ಕೋಟಿ; ಬಾಕಿ ಸ್ಲಾಟ್: 5 (1 ವಿದೇಶಿ).
ಸನ್‌ರೈಸರ್ಸ್‌ ಹೈದರಾಬಾದ್: ಅಭಿಷೇಕ್ ಶರ್ಮ, ಪ್ಯಾಟ್ ಕಮ್ಮಿನ್ಸ್, ಇಶಾನ್ ಕಿಶನ್, ಜೀಶನ್ ಅನ್ಸಾರಿ, ಅನಿಕೇತ್ ವರ್ಮ, ಜೈದೇವ್ ಉನಾದ್ಕತ್, ಬ್ರೈಡನ್ ಕರ್ಸ್, ಕಮಿಂಡು ಮೆಂಡಿಸ್, ಇಶಾನ್ ಮಾಲಿಂಗ, ನಿತೀಶ್ ಕುಮಾರ್ ರೆಡ್ಡಿ, ಹರ್ಷ್ ದುಬೆ, ಹರ್ಷಲ್ ಪಟೇಲ್, ಆರ್. ಸ್ಮರಣ್, ಹೆನ್ರಿಚ್ ಕ್ಲಾಸೆನ್, ಟ್ರಾವಿಸ್ ಹೆಡ್. ರಿಟೇನ್: 15 (6 ವಿದೇಶಿ); ಬಾಕಿ ಹಣ: ₹25.50 ಕೋಟಿ; ಬಾಕಿ ಸ್ಲಾಟ್: 10 (2 ವಿದೇಶಿ).
7 ಕನ್ನಡಿಗರು ಬಿಡುಗಡೆ
ಮಯಾಂಕ್ ಅಗರ್ವಾಲ್, ಮನೋಜ್ ಭಾಂಡಗೆ (ಆರ್‌ಸಿಬಿ), ಪ್ರವೀಣ್ ದುಬೆ (ಪಂಜಾಬ್), ಅಭಿನವ್ ಮನೋಹರ್ (ಸನ್‌ರೈಸರ್ಸ್‌), ಕೆಎಲ್ ಶ್ರೀಜಿತ್ (ಮುಂಬೈ), ಮನ್ವಂತ್ ಕುಮಾರ್ (ಡೆಲ್ಲಿ), ಲವನೀತ್ ಸಿಸೋಡಿಯಾ (ಕೆಕೆಆರ್).
ವರ್ಗಾವಣೆಗಳು
*ರವೀಂದ್ರ ಜಡೇಜಾ: ₹14 ಕೋಟಿ (ಸಿಎಸ್‌ಕೆಯಿಂದ ರಾಜಸ್ಥಾನಕ್ಕೆ)
*ಸಂಜು ಸ್ಯಾಮ್ಸನ್: ₹18 ಕೋಟಿ (ರಾಜಸ್ಥಾನದಿಂದ ಸಿಎಸ್‌ಕೆಗೆ)
*ಸ್ಯಾಮ್ ಕರ‌್ರನ್: ₹2.4 ಕೋಟಿ (ಸಿಎಸ್‌ಕೆಯಿಂದ ರಾಜಸ್ಥಾನಕ್ಕೆ)
*ಮೊಹಮದ್ ಶಮಿ: ₹10 ಕೋಟಿ (ಸನ್‌ರೈಸರ್ಸ್‌ನಿಂದ ಲಖನೌಗೆ)
*ಮಯಾಂಕ್ ಮಾರ್ಕಂಡೆ: ₹30 ಲಕ್ಷ (ಕೆಕೆಆರ್‌ನಿಂದ ಮುಂಬೈಗೆ)
*ಅರ್ಜುನ್ ತೆಂಡುಲ್ಕರ್: ₹30 ಲಕ್ಷ (ಮುಂಬೈನಿಂದ ಲಖನೌಗೆ)
*ನಿತೀಶ್ ರಾಣಾ: ₹4.2 ಕೋಟಿ (ರಾಜಸ್ಥಾನದಿಂದ ಡೆಲ್ಲಿಗೆ)
*ಡೊನೊವನ್ರೀರಾ: ₹1 ಕೋಟಿ (ಡೆಲ್ಲಿಯಿಂದ ರಾಜಸ್ಥಾನಕ್ಕೆ)
*ಶಾರ್ದೂಲ್ ಠಾಕೂರ್: ₹2 ಕೋಟಿ (ಲಖನೌನಿಂದ ಮುಂಬೈಗೆ)
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net