ಐಪಿಎಲ್​ ಒಂದು... ಪಾಕಿಸ್ತಾನ ಸೂಪರ್​ ಲೀಗ್​ ಕೊಂಡಾಡುವ ಭರದಲ್ಲಿ ನಾಲಿಗೆ ಹರಿಬಿಟ್ಟ ದ.ಆಫ್ರಿಕಾ ಬ್ಯಾಟರ್

ದ.ಆಫ್ರಿಕಾ ಆಟಗಾರ ರಿಲೀ ರೊಸ್ಸೌ
ದ.ಆಫ್ರಿಕಾ ಆಟಗಾರ ರಿಲೀ ರೊಸ್ಸೌ
Published on

ಪ್ರಮುಖ ಮುಖ್ಯಾಂಶಗಳು

  • ಐಪಿಎಲ್​ಗೆ ಇರುವ ಕ್ರೇಜ್​ ಜಗತ್ತಿನಲ್ಲಿ ಇನ್ಯಾವ ಲೀಗ್​ಗೂ ಇಲ್ಲ
  • ಪಿಎಸ್​ಎಲ್​ಗೆ ಐಪಿಎಲ್​ ಹೋಲಿಕೆ ಮಾಡಿ ಮಾತನಾಡಿದ ದ.ಆಫ್ರಿಕಾ ಬ್ಯಾಟರ್​
Rilee Rossouw: ಪ್ರಸ್ತುತ, ಭಾರತದ ಐಪಿಎಲ್​ ಮತ್ತು ಪಾಕಿಸ್ತಾನ ಪಿಎಸ್​ಎಲ್​ ಟಿ20 ಕ್ರಿಕೆಟ್​ ಲೀಗ್​ಗಳು ಏಕಕಾಲಕ್ಕೆ ನಡೆಯುತ್ತಿವೆ. ಭಾರತಕ್ಕೆ ಟಕ್ಕರ್​ ಕೊಡಬೇಕೆಂದೇ, ಅದೇ ಸಮಯದಲ್ಲಿ ಪಾಕ್​ ಸೂಪರ್​ ಲೀಗ್​ ಆರಂಭಿಸಿದ ವೈರಿ ರಾಷ್ಟ್ರ, ಕ್ರೀಡಾಭಿಮಾನಿಗಳನ್ನು ಸ್ಟೇಡಿಯಂನೊಳಗೆ ಬಿಡದೆ, ಕೇವಲ ಆಟಗಾರರ ಸಮ್ಮುಖದಲ್ಲಿ ಆಡಿಸುತ್ತಿರುವುದು ದುರಾದೃಷ್ಟ. ಜಗತ್ತಿನಲ್ಲಿ ಇಂಡಿಯನ್​ ಪ್ರೀಮಿಯರ್​ ಲೀಗ್​ಗೆ ಇರುವ ಕ್ರೇಜ್​ ಇನ್ಯಾವ ಲೀಗ್​ಗೂ ಇಲ್ಲ ಎಂಬುದು ಇಡೀ ಜಗತ್ತಿಗೆ ತಿಳಿದಿದೆ. ಹೀಗಿರುವಾಗ, ಕೆಲವರು ಇನ್ಯಾರನ್ನೋ ಮೆಚ್ಚಿಸಲು ಹೋಗಿ ಮನಸ್ಸಿಗೆ ಬಂದ ಹೇಳಿಕೆ ನೀಡೋದು ತೀರ ಸಾಮಾನ್ಯ. ಅದರಲ್ಲಿ ಇದೂ ಒಂದು.     
ಐಪಿಎಲ್​ ಬಗ್ಗೆ ಕ್ರಿಕೆಟ್​ ಗೊತ್ತಿಲ್ಲದವರೂ ಕೂಡ ಹೇಳುತ್ತಾರೆ. ಆದರೆ, ಅದೇ ಪಾಕಿಸ್ತಾನ ನಡೆಸುತ್ತಿರುವ ಪಿಎಸ್ಎಲ್ ಕುರಿತು ಹೆಚ್ಚು ಮಂದಿಗೆ ತಿಳಿದಿಲ್ಲ. ಐಪಿಎಲ್‌ನಲ್ಲಿ ಒಂದು ತಂಡದ ವೆಚ್ಚವು ಪಿಎಸ್ಎಲ್‌ನ ಎಲ್ಲಾ ತಂಡಗಳ ವೆಚ್ಚಕ್ಕೆ ಸಮ. ಪ್ರಸ್ತುತ ಐಪಿಎಲ್‌ನಲ್ಲಿ ಕೆಲವು ಆಟಗಾರರಿಗೆ ನೀಡಲಾಗುತ್ತಿರುವ ಹಣವನ್ನು ಆ ದೇಶದ ಕ್ರಿಕೆಟ್ ಮಂಡಳಿಗೆ ಭರಿಸಲು ಸಾಧ್ಯವಾಗುತ್ತಿಲ್ಲ. ಇಷ್ಟಿದ್ದರೂ ದುರಹಂಕಾರದ ಮಾತುಗಳಿಗೇನು ಕಡಿಮೆಯಿಲ್ಲ. ಪಿಎಸ್‌ಎಲ್​ನಲ್ಲಿ ಕ್ವೆಟ್ಟಾ ಗ್ಲಾಡಿಯೇಟರ್ಸ್ ತಂಡದ ಪರ ಆಡುತ್ತಿರುವ ದಕ್ಷಿಣ ಆಫ್ರಿಕಾ ಬ್ಯಾಟರ್​ ರಿಲೀ ರೊಸ್ಸೌ, ಐಪಿಎಲ್​ ಒಂದು ಸಿನಿಮಾ ಇದ್ದಂತೆ ಎಂದಿದ್ದಾರೆ. 
ಐಪಿಎಲ್ ಮತ್ತು ಪಿಎಸ್‌ಎಲ್ ಅನ್ನು ಹೋಲಿಕೆ ಮಾಡಿ ಮಾತನಾಡಿರುವ ರಿಲೀ, ಐಪಿಎಲ್​ಗಿಂತ ಪಿಎಸ್‌ಎಲ್ ಹೆಚ್ಚು ಸ್ಪರ್ಧಾತ್ಮಕವಾಗಿದೆ ಮತ್ತು ಅಲ್ಲಿ ಕ್ರಿಕೆಟ್‌ಗಿಂತ ಸಿನಿಮಾದಂತೆ ಡ್ರಾಮಾ ಜಾಸ್ತಿಯಿದೆ. ಅದೊಂದು ದೀರ್ಘ ಕಾಲ ನಡೆಯುವ ಟೂರ್ನಮೆಂಟ್. ಆದರೆ, ಪಿಎಸ್‌ಎಲ್ ಹಾಗಲ್ಲ. ಇದು ಬಹಳ ಕಡಿಮೆ ಅವಧಿಯಲ್ಲಿ ಮುಕ್ತಾಯಗೊಳ್ಳುತ್ತದೆ. ಇಲ್ಲಿ ಸ್ಪರ್ಧೆಯು ತುಂಬಾ ಪೈಪೋಟಿಯಿಂದ ಕೂಡಿರುತ್ತದೆ" ಎಂದರು.
ಹಾಗೆ ನೋಡಿದರೆ, ಬಾಲ್​ ಟಾಂಪರಿಂಗ್​, ವೈಟ್​ ಟು ಪಿಂಕ್​ ಬಾಲ್​, ಅಂಪೈರ್‌ಗಳ ತಪ್ಪು ನಿರ್ಧಾರಗಳು ಸೇರಿದಂತೆ ಹಲವು ಮೋಸದಾಟಗಳು ಪಿಎಸ್​ಎಲ್​ನಲ್ಲಿ ನಡೆದಿವೆ. ಇದಕ್ಕೆ ವಿಡಿಯೋ, ಫೋಟೋಗಳೇ ಜ್ವಲಂತ ಸಾಕ್ಷಿ. ಈ ರೀತಿ ಹಲವಾರು ಇವೆ. ಐಪಿಎಲ್ ಮತ್ತು ಪಿಎಸ್‌ಎಲ್ ಅನ್ನು ಹೋಲಿಸುವುದು ಹುಲಿಯನ್ನು ನಾಯಿಗೆ ಹೋಲಿಸಿದಂತೆ ಅನ್ನೋದು ರಿಲೇ ರೊಸ್ಸೌವ್‌ಗೆ ತಿಳಿದಿಲ್ಲ ಎಂದು ಕಾಣಿಸುತ್ತೆ,(ಏಜೆನ್ಸೀಸ್) 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net