ಐಪಿಎಲ್ ಅಚ್ಚರಿ: ಕೇವಲ ಎರಡು ಎಸೆತಗಳಲ್ಲಿ ಹ್ಯಾಟ್ರಿಕ್ ವಿಕೆಟ್; ಈ ವಿಶಿಷ್ಟ ದಾಖಲೆ ಸಾಧ್ಯವಾದದ್ದು ಹೇಗೆ? IPL Hat Trick

2014 ರಲ್ಲಿ ಪ್ರವೀಣ್​ ತಾಂಬೆ ಮಾಡಿದ್ದ ವಿಶಿಷ್ಟ ಸಾಧನೆ
2014 ರಲ್ಲಿ ಪ್ರವೀಣ್​ ತಾಂಬೆ ಮಾಡಿದ್ದ ವಿಶಿಷ್ಟ ಸಾಧನೆ
Published on

ಪ್ರಮುಖ ಮುಖ್ಯಾಂಶಗಳು

  • ಇನ್ನೇನು ಕೆಲವೇ ದಿನಗಳಲ್ಲಿ ಆರಂಭವಾಗಲಿರುವ ಐಪಿಎಲ್​
  • 2014 ರಲ್ಲಿ ಪ್ರವೀಣ್​ ತಾಂಬೆ ಮಾಡಿದ್ದ ವಿಶಿಷ್ಟ ಸಾಧನೆ
  • ಕೇವಲ ಎರಡೇ ಬಾಲಿಗೆ ಹ್ಯಾಟ್ರಿಕ್​ ಪಡೆದಿದ್ದ ಸ್ಪಿನ್​ ಬೌಲರ್​
IPL Hat Trick: ಇನ್ನೇನು ಕೆಲವೇ ದಿನಗಳಲ್ಲಿ ಐಪಿಎಲ್​ ಜ್ವರ ಭಾರತದಲ್ಲಿ ಪ್ರಾರಂಭವಾಗಲಿದೆ. ಮಾರ್ಚ್​ 28 ರಂದು ನಡೆಯಲಿರುವ ಮೊದಲ ಪಂದ್ಯದಲ್ಲಿ ಕಳೆದ ಸಿಸನ್​ ಚಾಂಪಿಯನ್ಸ್​ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ಮತ್ತು ಸನ್​ರೈಸರ್ಸ ಹೈದರಾಬಾದ್​ ತಂಡಗಳು ಮುಖಾಮುಖಿಯಾಗಲಿವೆ.
ಈ ಐಪಿಎಲ್​ ಎನ್ನುವ ಚುಟುಕು ಕ್ರಿಕೆಟ್​ ಟೂರ್ನಾಮೆಂಟ್​ ಕೇವಲ ಭಾರತದಷ್ಟೇ ಅಲ್ಲ ಜಗತ್ತಿನ ಕ್ರಿಕೆಟ್​ ಇತಿಹಾಸದಲ್ಲಿ ಸುವರ್ಣಾಕ್ಷರದಲ್ಲಿ ಬೆರೆದಿಡಲೇ ಬೇಕಾದ ಟೂರ್ನಾಮೆಂಟ್ ಎಂದು ಹೇಳಿದರೂ ತಪ್ಪಾಗದು.
ಐಪಿಎಲ್​ ಕೇವಲ ಹಣದ ಹೊಳೆಹರಿಸಲಷ್ಟೇ ಅಲ್ಲದೇ, ಅನೇಕ ವಿಶಿಷ್ಟ ರೆಕಾರ್ಡ್​ಗಳನ್ನು ನಿರ್ಮಿಸಿ ಕೂಡ ತನ್ನ ಹೆಸರನ್ನ ಖಾಯಂಗೊಳಿಸಿದೆ. ಅದು ವಿಶ್ವದ ಅತೀ ಶ್ರೀಮಂತ ಟೂರ್ನಿಯಾವುದರ ಜೊತೆಗೆ ಟಿ-20 ಮಾದರಿಯ ಕ್ರಿಕೆಟ್​ನಲ್ಲಿ ಒಂದು ಪಂದ್ಯದಲ್ಲಿ ಅತ್ಯಧಿಕ ರನ್​ ಹೊಡೆದ ದಾಖಲೆ ಸಹ ಇದೇ ಐಪಿಎಲ್​ನಲ್ಲಿ ಸಂಭವಿಸಿದೆ. ಹಾಗೆಯೇ ಬೌಲಿಂಗ್​ ವಿಭಾಗದಲ್ಲಿ ಒಂದು ವಿಶಿಷ್ಟ ದಾಖಲೆ ಸಹ ಇದೇ ಐಪಿಎಲ್​ನಲ್ಲಿ ಸಂಭವಿಸಿದೆ.
ಕ್ರಿಕೆಟ್​ ಭಾಷೆಯಲ್ಲಿ ಹ್ಯಾಟ್ರಿಕ್​ (IPL Hat Trick) ಎಂದರೆ ಒಬ್ಬ ಬೌಲರ್​ ಸತತ ಮೂರು ಬಾಲ್​ನಲ್ಲಿ ಮೂರು ವಿಕೆಟ್​ ಪಡೆದರೆ ಅದನ್ನು ಹ್ಯಾಟ್ರಿಕ್​ ಎಂದು ಕರೆಯುತ್ತಾರೆ. ಅಂದರೆ ಈ ಹ್ಯಾಟ್ರಿಕ್​ ಪೂರ್ಣಗೊಳ್ಳಲು ಕನಿಷ್ಟ ಮೂರು ಬಾಲ್​ಗಳ ಅಗತ್ಯವಿರುತ್ತದೆ. ಆದರೆ 2014 ರ ಐಪಿಎಲ್​ನಲ್ಲಿ ಭಾರತದ ಬೌಲರ್​ವೊಬ್ಬ ಕೇಲವ ಎರಡೇ ಬಾಲಿನಲ್ಲಿ ಹ್ಯಾಟ್ರಿಕ್ ಪಡೆದಿದ್ದ ಎಂದರೆ ನೀವು ನಂಬಲೇ ಬೇಕು.

ಎರಡು ಬಾಲಲ್ಲಿ ಹ್ಯಾಟ್ರಿಕ್​; ತಾಂಬೆ ವಿಶಿಷ್ಟ ಸಾಧನೆ!

2014 ರ ಐಪಿಎಲ್​ನ 25 ನೇ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್​ ಹಾಗೂ ಕಲ್ಕತ್ತಾ ನೈಟ್​ ರೈಡರ್ಸ್ ತಂಡಗಳು ಮುಖಾಮುಖಿಯಾಗಿದ್ದವು. ಮೊದಲು ಬ್ಯಾಟ್​ ಮಾಡಿದ ರಾಜಸ್ಥಾನ ರಾಯಲ್ಸ್​ ತಂಡ 170 ರನ್​ಗಳ ಟಾರ್ಗೆಟನ್ನು ಕೆಕೆಆರ್​ಗೆ ನೀಡಿತು.
ಆದರೆ 16 ನೇ ಓವರ್​ಗೆ ಬೌಲ್ ಮಾಡಲು ಬಂದ ಪ್ರವೀಣ್ ತಾಂಬೆ, ಈ ವಿಶಿಷ್ಟ ಸಾಧನೆಯನ್ನು ಮಾಡಿದರು. ತಾಂಬೆ ಎಸೆದ ಮೊದಲ ಡೆಲವರಿಗೆ ಮುನ್ನುಗ್ಗಿ ಹೊಡೆಯಲು ಹೋದ ಮನೀಶ್ ಪಾಂಡೆ, ವೀಕೆಟ್​ ಕೀಪರ್​ ಸಂಜು ಸ್ಯಾಮ್ಸನ್ ಅವರಿಂದ ಸ್ಟಂಪ್ ಔಟ್​ ಆದರು. ಆದರೆ ಈ ಬಾಲ್​ ವಡ್​ ಆಗಿದ್ದ ಕಾರಣ ಬಾಲ್​ನ್ನು ಲೆಕ್ಕಕ್ಕೆ ಹಿಡಿಯಲಿಲ್ಲ.
ಎರಡನೇ ಎಸೆತವನ್ನು ಎದುರಿಸಿದ ಯೂಸುಫ್ ಪಠಾಣ್ ಪ್ರವೀಣ್​ ತಾಂಬೆ ಅವರಿಗೇ ಕ್ಯಾಚ್​ ಕೊಟ್ಟು ತಮ್ಮ ವಿಕೆಟ್​ ಒಪ್ಪಿಸಿದರು. ಇನ್ನು ಮೂರನೇ ಎಸೆತ (ಕಾನೂನುಬದ್ಧ ಎರಡನೇ ಎಸೆತ) ಎದುರಿಸಿದ ರಯಾನ್ ಟೆನ್ ಡೋಸ್ಚೇಟ್ ಎಲ್ಬಿಡಬ್ಲ್ಯೂಆಗುವ ಮೂಲಕ ಔಟ್​ ಆದರು. ಈ ಮೂಲಕ ಪ್ರವೀಣ್​ ತಾಂಬೆ ಕೇವಲ ಎರಡೇ ಎಸೆತಗಳಲ್ಲಿ ಹ್ಯಾಟ್ರಿಕ್​ ಪಡೆದ ಮೊದಲ ಬೌಲರ್​ ಆಗಿ ಹೊರಹೊಮ್ಮಿದರು,(ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net