IPL 2026: ನಿಮ್ಮ ಟಿಕೆಟ್ ಯಾವ ಗೇಟ್? ಗೊಂದಲ ಬೇಡ, ಚಿನ್ನಸ್ವಾಮಿ ಕ್ರೀಡಾಂಗಣದ ಎಂಟ್ರಿ ಪಾಯಿಂಟ್ಸ್ ಪಟ್ಟಿ ಇಲ್ಲಿದೆ!

IPL 2026
IPL 2026
Published on

ಪ್ರಮುಖ ಮುಖ್ಯಾಂಶಗಳು

  • ಕ್ರಿಕೆಟ್ ಕ್ರೇಜ್ ನಡುವೆ ಟ್ರಾಫಿಕ್ ಟೆನ್ಶನ್: ಮಾರ್ಚ್ 28 ಮತ್ತು ಏಪ್ರಿಲ್ 5ರಂದು ಈ ರಸ್ತೆಗಳಲ್ಲಿ ಸಂಚರಿಸುವ ಮುನ್ನ ಎಚ್ಚರ!
  • ಐಪಿಎಲ್ ಹಬ್ಬ: ಪಂದ್ಯ ನೋಡಲು ಹೋಗುವ ಮುನ್ನ ಈ ಪಾರ್ಕಿಂಗ್ ರೂಲ್ಸ್ ಓದಿಕೊಳ್ಳಿ!
  • ನಮ್ಮ ಬೆಂಗಳೂರು ಐಪಿಎಲ್ ಗೈಡ್: ಪಾರ್ಕಿಂಗ್, ಎಂಟ್ರಿ ಗೇಟ್ ಮತ್ತು ಟ್ಯಾಕ್ಸಿ ಪಾಯಿಂಟ್‌ಗಳ ಸಮಗ್ರ ಮಾಹಿತಿ.
ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಐಪಿಎಲ್ 19ನೇ ಆವೃತ್ತಿಯ(IPL 2026) ಸಂಭ್ರಮ ಮುಗಿಲು ಮುಟ್ಟಿದೆ. ಮಾರ್ಚ್ 28 ಮತ್ತು ಏಪ್ರಿಲ್ 5 ರಂದು ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಹೈವೋಲ್ಟೇಜ್ ಪಂದ್ಯಗಳು ನಡೆಯಲಿವೆ.
ಈ ಹಿನ್ನೆಲೆಯಲ್ಲಿ ನಗರದಲ್ಲಿ ಸಂಚಾರ ದಟ್ಟಣೆಯನ್ನು ನಿಯಂತ್ರಿಸಲು ಮತ್ತು ಸಾರ್ವಜನಿಕರ ಸುಗಮ ಸಂಚಾರಕ್ಕಾಗಿ ಬೆಂಗಳೂರು ಸಂಚಾರ ಪೊಲೀಸರು ಕಠಿಣ ನಿಯಮಗಳನ್ನು ಜಾರಿಗೆ ತಂದಿದ್ದಾರೆ. ಪಂದ್ಯ ನೋಡಲು ಹೋಗುವವರು ಅಥವಾ ಆ ಪ್ರದೇಶದಲ್ಲಿ ಸಂಚರಿಸುವವರು ಸಂಚಾರ ಪೊಲೀಸರು ನೀಡಿರುವ ಹೊಸ ಗೈಡ್​ಲೈನ್ಸ್​ನ ಮಾಹಿತಿಯನ್ನು ಗಮನಿಸುವುದು ಅತ್ಯಗತ್ಯ.

ಈ ರಸ್ತೆಗಳಲ್ಲಿ ಪಾರ್ಕಿಂಗ್ ಸಂಪೂರ್ಣ ನಿಷೇಧ

ಪಂದ್ಯ ನಡೆಯುವ ದಿನಗಳಂದು ಕ್ರೀಡಾಂಗಣದ ಸುತ್ತಮುತ್ತಲಿನ ಪ್ರಮುಖ ರಸ್ತೆಗಳಲ್ಲಿ ವಾಹನ ನಿಲುಗಡೆಯನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ
ಕ್ವೀನ್ಸ್ ರಸ್ತೆ: ಬಾಲೇಕುಂದ್ರಿ ಸರ್ಕಲ್‌ನಿಂದ ಕ್ವೀನ್ಸ್ ಸರ್ಕಲ್‌ವರೆಗೆ ಮತ್ತು ಸಿಟಿಐ ಜಂಕ್ಷನ್ ವರೆಗೆ.
ಎಂ.ಜಿ. ರಸ್ತೆ: ಅನಿಲ್ ಕುಂಬ್ಳೆ ಸರ್ಕಲ್‌ನಿಂದ ಕ್ವೀನ್ಸ್ ಸರ್ಕಲ್‌ವರೆಗೆ (ರಸ್ತೆಯ ಎರಡೂ ಬದಿ).
ಕಬ್ಬನ್ ರಸ್ತೆ: ಸಿಟಿಐ ಸರ್ಕಲ್‌ನಿಂದ ಡಿಕನ್ಸನ್ ರಸ್ತೆ ಜಂಕ್ಷನ್ ವರೆಗೆ (ಬಿಎಂಟಿಸಿ ಬಸ್‌ಗಳನ್ನು ಹೊರತುಪಡಿಸಿ).
ಇತರೆ ರಸ್ತೆಗಳು: ರಾಜಭವನ ರಸ್ತೆ, ಟಿ. ಚೌಡಯ್ಯ ರಸ್ತೆ, ರೇಸ್ ಕೋರ್ಸ್ ರಸ್ತೆ ಮತ್ತು ಲಿಂಕ್ ರಸ್ತೆ.
ಮ್ಯೂಸಿಯಂ ರಸ್ತೆ, ಕಸ್ತೂರಿಬಾ ರಸ್ತೆ, ಲ್ಯಾವೆಲ್ಲೆ ರಸ್ತೆ, ವಿಠ್ಠಲ್ ಮಲ್ಯ ರಸ್ತೆ ಮತ್ತು ಸೆಂಟ್ ಮಾರ್ಕ್ಸ್ ರಸ್ತೆಯ ಕೆಲವು ಭಾಗಗಳಲ್ಲಿ ಪಾರ್ಕಿಂಗ್ ಇರುವುದಿಲ್ಲ.
ಕಬ್ಬನ್ ಪಾರ್ಕ್ ಒಳಗೂ ನಿರ್ಬಂಧ!
ಕಬ್ಬನ್ ಪಾರ್ಕ್ ಆವರಣದ ಕಿಂಗ್ ರಸ್ತೆ, ಪ್ರೆಸ್ ಕ್ಲಬ್ ಮುಂಭಾಗ, ಬಾಲಭವನ ಮುಂಭಾಗ ಮತ್ತು ಫೌಂಟೇನ್ ರಸ್ತೆಗಳಲ್ಲಿ ವಾಹನ ನಿಲುಗಡೆಯನ್ನು ನಿಷೇಧಿಸಲಾಗಿದೆ.
ವಾಹನ ಸವಾರರಿಗೆ ನಿಗದಿಪಡಿಸಿದ ಪಾರ್ಕಿಂಗ್ ಸ್ಥಳಗಳು
ಸಾರ್ವಜನಿಕರು ತಮ್ಮ ವಾಹನಗಳನ್ನು ನಿಲುಗಡೆ ಮಾಡಲು ಪೊಲೀಸರು ಈ ಕೆಳಗಿನ ಸ್ಥಳಗಳನ್ನು ಗುರುತಿಸಿದ್ದಾರೆ:
ಸೆಂಟ್ ಜೋಸೆಫ್ ಇಂಡಿಯನ್ ಹೈಸ್ಕೂಲ್ ಮೈದಾನ: ಸಿದ್ದಲಿಂಗಯ್ಯ ಸರ್ಕಲ್.
ಸೆಂಟ್ ಜೋಸೆಫ್ ಯುರೋಪಿಯನ್ ಸ್ಕೂಲ್ ಮೈದಾನ: ಮ್ಯೂಸಿಯಂ ರಸ್ತೆ.
ಫ್ರೀಡಂ ಪಾರ್ಕ್: ಎಂಎಲ್‌ಸಿಪಿ ಪಾರ್ಕಿಂಗ್ ಏರಿಯಾ.
ಗರುಡಾ ಮಾಲ್ ಮತ್ತು ಯುಬಿ ಸಿಟಿ: ಪಾರ್ಕಿಂಗ್ ಪ್ರದೇಶಗಳು.
ಶಿವಾಜಿನಗರ ಬಸ್ ನಿಲ್ದಾಣದ ಮೊದಲ ಮಹಡಿ.

ಸ್ಟೇಡಿಯಂ ಪ್ರವೇಶಕ್ಕೆ ಸೂಚನೆ

ನಿಮ್ಮ ಟಿಕೆಟ್ ಸಂಖ್ಯೆಗೆ ಅನುಗುಣವಾಗಿ ಪ್ರವೇಶ ದ್ವಾರಗಳನ್ನು (Gates) ಬಳಸಬೇಕಾಗುತ್ತದೆ:
ಗೇಟ್ 1-3 ಮತ್ತು 18-23: ಕಬ್ಬನ್ ರಸ್ತೆ ಮೂಲಕ ಪ್ರವೇಶ.
ಗೇಟ್ 11-17: ಲಿಂಕ್ ರಸ್ತೆ (ಅನಿಲ್ ಕುಂಬ್ಳೆ ಸರ್ಕಲ್ ಮತ್ತು ಬಿಆರ್‌ವಿ ಸರ್ಕಲ್) ಮೂಲಕ ಪ್ರವೇಶ.
ಗೇಟ್ 5 ಮತ್ತು 8: ಕ್ವೀನ್ಸ್ ರಸ್ತೆ ಮೂಲಕ ಪ್ರವೇಶ.
ಗಮನಿಸಿ: ಗೇಟ್ 10 ಕೇವಲ ಆಟಗಾರರು ಮತ್ತು ವಿಐಪಿಗಳಿಗೆ ಮೀಸಲಾಗಿದೆ. ಗೇಟ್ 9 ಮತ್ತು 9A ಕೇವಲ ಹೊರಹೋಗಲು ಮಾತ್ರ ಬಳಸಬಹುದು.

ಟ್ಯಾಕ್ಸಿ ಮತ್ತು ಆಟೋ ಪಿಕಪ್ ಪಾಯಿಂಟ್‌ಗಳು

ಓಲಾ, ಉಬರ್ ಅಥವಾ ಆಟೋಗಳಲ್ಲಿ ಬರುವವರಿಗಾಗಿ ಪ್ರತ್ಯೇಕ ಪಿಕಪ್ ಮತ್ತು ಡ್ರಾಪ್ ಪಾಯಿಂಟ್‌ಗಳನ್ನು ನಿಗದಿಪಡಿಸಲಾಗಿದೆ:
ಬಿಆರ್‌ವಿ ಮೈದಾನ: ಗೇಟ್ 6 ರ ಹತ್ತಿರ.
ಮಾಣಿಕ್ ಶಾ ಪರೇಡ್ ಮೈದಾನ: ಗೇಟ್ 3 ರ ಹತ್ತಿರ.
ಪಂದ್ಯದ ದಿನದಂದು ಸಂಚಾರ ದಟ್ಟಣೆ ತಪ್ಪಿಸಲು ವೈಯಕ್ತಿಕ ವಾಹನಗಳ ಬದಲಿಗೆ ಮೆಟ್ರೋ ಅಥವಾ ಬಿಎಂಟಿಸಿ ಬಸ್ ಸೇವೆಗಳನ್ನು ಬಳಸುವಂತೆ ಸಂಚಾರ ಪೊಲೀಸರು ಮನವಿ ಮಾಡಿದ್ದಾರೆ. ಮೆಟ್ರೋ ಸಂಚಾರದ ಅವಧಿಯನ್ನು ಕೂಡ ಪಂದ್ಯದ ದಿನಗಳಂದು ವಿಸ್ತರಿಸುವ ಸಾಧ್ಯತೆಯಿದೆ,(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net