ಆರ್​ಸಿಬಿ, ಸಿಎಸ್​ಕೆ... ಈ ವರ್ಷ ಬಲಿಷ್ಠ ತಂಡಗಳ ಪಾಲಿಗೆ ಈತ ಪಕ್ಕಾ ಡೇಂಜರೆಸ್!​ ಬೌಲರ್​ಗಳಿಗೆ ಸವಾಲು ತಪ್ಪಿದ್ದಲ್ಲ

ಐಪಿಎಲ್​ 2026
ಐಪಿಎಲ್​ 2026
Published on

ಪ್ರಮುಖ ಮುಖ್ಯಾಂಶಗಳು

  • ಮಾ.28ರಿಂದ ಐಪಿಎಲ್​ 19ನೇ ಆವೃತ್ತಿ ಆರಂಭ
  • 10 ತಂಡಗಳು ಟ್ರೋಫಿ ಎತ್ತಿಹಿಡಿಯಲು ಭರ್ಜರಿ ಪೈಪೋಟಿಗೆ ಸಿದ್ಧ
  • ಸ್ಟಾರ್​ ಯುವ ಬ್ಯಾಟರ್​ ಸಿಡಿದೆದ್ದರೆ ಖಂಡಿತ ಎದುರಾಳಿ ತಂಡದ ಬೌಲರ್​ಗಳಿಗೆ ಸವಾಲು​ ಖಚಿತ
ಚೆನ್ನೈ: ಮಾ.28ರಿಂದ ಶುರುವಾಗಲಿರುವ ಐಪಿಎಲ್​ 19ನೇ ಆವೃತ್ತಿಗೆ ಈಗಾಗಲೇ ದಿನಗಣನೆ ಆರಂಭಗೊಂಡಿದ್ದು, 10 ತಂಡಗಳು ಮೈದಾನದಲ್ಲಿ ಭಾರೀ ಕಸರತ್ತು ನಡೆಸುತ್ತಿವೆ. 5 ಬಾರಿ ಚಾಂಪಿಯನ್ಸ್​ಗಳಾದ ಮುಂಬೈ ಇಂಡಿಯನ್ಸ್, ಚೆನ್ನೈ ಸೂಪರ್​ ಕಿಂಗ್ಸ್ ಮತ್ತು ಕಳೆದ ಬಾರಿ ಚೊಚ್ಚಲ ಐಪಿಎಲ್​ ಪ್ರಶಸ್ತಿ ಮುಡಿಗೇರಿಸಿಕೊಂಡ ರಾಯಲ್ ಚಾಲೆಂಜರ್ಸ್​ ಬೆಂಗಳೂರು ತಂಡಗಳು 19ನೇ ಸೀಸನ್​ ಟ್ರೋಫಿಗಾಗಿ ಭಾರೀ ಪೈಪೋಟಿ ಕೊಡಲು ಸಜ್ಜಾಗಿವೆ. ಅದಕ್ಕೆ ತಕ್ಕಂತೆ, ಹರಾಜಿನಲ್ಲಿ ಅತ್ಯುತ್ತಮ ಆಟಗಾರರನ್ನೇ ಆಯ್ದುಕೊಂಡಿದೆ.
ಕಳೆದ ಸೀಸನ್​ನಲ್ಲಿ ತಮ್ಮ ತಂಡದ ಪರ ಉತ್ತಮ ಪ್ರದರ್ಶನ ನೀಡಲು ವಿಫಲರಾದ ಆಟಗಾರರನ್ನು ಕೈಬಿಟ್ಟಿರುವ ಒಂದಷ್ಟು ತಂಡಗಳು, ಅವರ ಬದಲಿಗೆ ಆಲ್​ರೌಂಡ್ ಹಾಗೂ ಯುವ ಆಟಗಾರರಿಗೆ ಹೆಚ್ಚು ಅವಕಾಶ ನೀಡಲು ಮುಂದಾಗಿವೆ. 18ನೇ ಆವೃತ್ತಿಯಲ್ಲಿ ತಮಗೆ ಕೊಟ್ಟ ಅವಕಾಶಗಳನ್ನು ಸದ್ಭಳಕೆ ಮಾಡಿಕೊಂಡ ಯುವ ಪ್ಲೇಯರ್​ಗಳ ಪೈಕಿ ಕೆಲವೇ ಕೆಲವರು ಮಾತ್ರ ಬಹಳ ಡೇಂಜರೆಸ್​ ಆಗಿ ಕಂಡರು. ಅದರಲ್ಲಿ, ಸಿಎಸ್​ಕೆ ತಂಡದ ಆಯುಷ್​ ಮಾತ್ರೆ ಮತ್ತು ರಾಜಸ್ಥಾನ ರಾಯಲ್ಸ್ ಪಡೆಯ 'ಬೇಬಿ ಬಾಸ್' ವೈಭವ್ ಸೂರ್ಯವಂಶಿ.
ಅಂಡರ್​-19 ವಿಶ್ವಕಪ್​ ಚಾಂಪಿಯನ್ಸ್ ಆಗಿ ಹೊರಹೊಮ್ಮಿದ ತಂಡದಲ್ಲಿ ವೈಭವ್ ಸೂರ್ಯವಂಶಿ ನೀಡಿದ ಪ್ರದರ್ಶನ ನೋಡುಗರನ್ನು ಬೆರಗುಗೊಳಿಸಿತು. 15ನೇ ವಯಸ್ಸಿಗೆ ದೊಡ್ಡ ಸಾಧನೆಗೈದಿರುವ ಈ ಯುವ ಬ್ಯಾಟರ್​, ಎದುರಾಳಿ ತಂಡದ ಬೌಲರ್​ಗಳಿಗೆ ಬೆವರಿಳಿಸುವ ಪರಿ ನಿಜಕ್ಕೂ ಅನೇಕ ದಿಗ್ಗಜ ಕ್ರಿಕೆಟಿಗರಿಗೆ ಅಚ್ಚರಿ ತಂದಿದೆ. ಇಷ್ಟು ಚಿಕ್ಕ ವಯಸ್ಸಿನಲ್ಲಿ, ಅದು ಅಂತಾರಾಷ್ಟ್ರೀಯ ಬೌಲರ್​ಗಳ ಎಸೆತಕ್ಕೆ ಮೈದಾನದ ಪೂರ ಬಾರಿಸುವ ವೈಭವ್​ನ ವೈಭವದ ಆಟಕ್ಕೆ ಮನಸೋಲದವರೇ ಇಲ್ಲ.
ಇನ್ನು ಈ ಬಾರಿಯ ಐಪಿಎಲ್​ನಲ್ಲಿ ಆಡಲು ತನ್ನ 10ನೇ ತರಗತಿ ಪರೀಕ್ಷೆಯನ್ನು ಕೈಬಿಟ್ಟಿರುವ ಸೂರ್ಯವಂಶಿ, ಸಂಪೂರ್ಣ ಸಮಯವನ್ನು ಕ್ರಿಕೆಟ್​ಗೆ ಮೀಸಲಿಟ್ಟಿರುವುದು ಅಚ್ಚರಿಯ ನಡೆ. ಎಂದಿನಂತೆ 19ನೇ ಆವೃತ್ತಿಯಲ್ಲಿಯೂ ರಾಜಸ್ಥಾನ ರಾಯಲ್ಸ್ ಪರ ಆಡಲಿರುವ ಬೇಬಿ ಬಾಸ್​, ಕಳೆದ ಇನ್ನಿಂಗ್ಸ್​ಗಳಲ್ಲಿ ನೀಡಿರುವ ಸ್ಫೋಟಕ ಬ್ಯಾಟಿಂಗ್​ ಇಲ್ಲಿಯೂ ರಿಪೀಟ್​ ಮಾಡುವ ಲಕ್ಷಣಗಳು ಹೆಚ್ಚಿವೆ ಎಂದೇ ಹೇಳಲಾಗಿದೆ. ಅನೇಕರು, ವೈಭವ್​ ಖಂಡಿತ ಈ ಬಾರಿಯೂ ಅದ್ಭುತ ಬ್ಯಾಟಿಂಗ್ ಪ್ರದರ್ಶನ ನೀಡುತ್ತಾರೆ. ಎದುರಾಳಿ ತಂಡದ ಬೌಲರ್​​ಗಳಿಗೆ ಶಾಪವಾಗ್ತಾರೆ ಎಂದು ಜಾಲತಾಣಗಳಲ್ಲಿ ಅಭಿಪ್ರಾಯಿಸಿದ್ದಾರೆ.
ಅಸಲಿಗೆ, ವೈಭವ್ ಏನಾದರೂ ಕಳೆದ ಬಾರಿ ಆಡಿದ ರೀತಿಯೇ ಈ ವರ್ಷವು ಸ್ಫೋಟಕ ಇನ್ನಿಂಗ್ಸ್ ನೀಡಿದರೆ, ಖಂಡಿತ 9 ಫ್ರಾಂಚೈಸಿಗಳಿಗೆ ದೊಡ್ಡ ಸಂಕಷ್ಟ ಎದುರಾಯಿತು ಎಂದೇ ಅರ್ಥ. ತಾನು ಯಾವ ಹಿರಿಯ ಹಾಗೂ ಅನುಭವಿ ಆಟಗಾರನಿಗೆ ಕಡಿಮೆ ಇಲ್ಲ ಎನ್ನುವಂತೆ ಡೇಂಜರೆಸ್​ ಆಗಿ ಬ್ಯಾಟಿಂಗ್ ಮಾಡುವ ವೈಭವ್​, ತಮ್ಮ ತಂಡದ ಪರ 19ನೇ ಆವೃತ್ತಿಯಲ್ಲಿಯೂ ಅದ್ಭುತ ಇನ್ನಿಂಗ್ಸ್ ನೀಡಲು ಎದುರುನೋಡುತ್ತಿದ್ದಾರೆ. ಅಂದುಕೊಂಡಂತೆ ತಂಡಕ್ಕೆ ಆಸೆರೆಯಾಗುವುದರ ಜೊತೆಗೆ ಐಪಿಎಲ್​ 2026ರಲ್ಲಿ ಅತ್ಯಧಿಕ ರನ್​ ಗಳಿಸಿದ ಬ್ಯಾಟರ್ ಆಗಿ ಹೊರಹೊಮ್ಮಲಿದ್ದಾರೆ ಎಂಬುದನ್ನು ಮುಂದಿನ ದಿನಗಳಲ್ಲಿ ಕಾದು ನೋಡಬೇಕಿದೆ,(ಏಜೆನ್ಸೀಸ್).
​ ​
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net