ಅದೆಂದರೆ, ಬದಲಿಗರಾಗಿ ಸೇರಿಸಿಕೊಂಡ ಈ ಆಟಗಾರರನ್ನು ಮುಂದಿನ ಆವೃತ್ತಿಗೆ ರಿಟೇನ್ (retention) ಮಾಡಿಕೊಳ್ಳುವ ಅವಕಾಶವೂ ಈ ತಂಡಗಳಿಗೆ ಲಭಿಸಿದೆ. ಐಪಿಎಲ್ ನಿಯಮಾವಳಿ ಪ್ರಕಾರ, ತಂಡವೊಂದು ತನ್ನ 12ನೇ ಪಂದ್ಯದವರೆಗೆ ಗಾಯಗೊಂಡ ಆಟಗಾರರಿಗೆ ಬದಲಿಗರನ್ನಾಗಿ ಸೇರಿಸಿಕೊಂಡವರನ್ನು ಮತ್ತು ಗಾಯದಿಂದ ಹೊರಬಿದ್ದ ಇಬ್ಬರನ್ನೂ ಮುಂದಿನ ಆವೃತ್ತಿಗೂ ರಿಟೇನ್ ಮಾಡಿಕೊಳ್ಳಬಹುದು. ಹೀಗಾಗಿ ತಂಡಗಳು ಕೊನೇ ಲೀಗ್ ಪಂದ್ಯಕ್ಕೆ ಅಗತ್ಯವಿಲ್ಲದಿದ್ದರೂ, ಬದಲಿ ಆಟಗಾರರನ್ನು ಸೇರಿಸಿಕೊಂಡು, ಆಟಗಾರರ ರಿಟೇನ್ ಆಯ್ಕೆಯ ಅವಕಾಶ ಸೃಷ್ಟಿಸಿಕೊಂಡಿವೆ.