2025ರ ಐಪಿಎಲ್‌ನಲ್ಲಿ ಕೋಲ್ಕತ್ತಾದ ಈಡನ್ ಗಾರ್ಡನ್ಸ್‌ನಲ್ಲಿ ನಡೆದ ಉದ್ಘಾಟನಾ ಸಮಾರಂಭದಲ್ಲಿ ಶಾರುಖ್ ಖಾನ್, ಶ್ರೇಯಾ ಘೋಷಾಲ್, ಕರಣ್ ಔಜ್ಲಾ ಮತ್ತು ದಿಶಾ ಪಟಾನಿ ಅವರಂತಹ ತಾರೆಯರು ಮಿನುಗಿದ್ದರು. ಆದರೆ ಈ ಬಾರಿ ಬೆಂಗಳೂರಿನ ಅಭಿಮಾನಿಗಳು ಅಂತಹ ಯಾವುದೇ ಬಾಲಿವುಡ್ ಹಂಗಾಮಾವನ್ನು ಕಾಣಲು ಸಾಧ್ಯವಿಲ್ಲ. ಕೇವಲ ಕ್ರಿಕೆಟ್ ಪಂದ್ಯ ಮಾತ್ರ ನಡೆಯಲಿದೆ.