ಕಡೆಗೂ ಕ್ರಿಕೆಟ್​ ಪ್ರಿಯರ ಆಸೆಯಂತೆಯೇ... ಈ 2 ಬಲಿಷ್ಠ ತಂಡಗಳ ಪಂದ್ಯದಿಂದಲೇ ಐಪಿಎಲ್ ಕಿಕ್​ಸ್ಟಾರ್ಟ್​! IPL 2026

ಐಪಿಎಲ್​ 2026
ಐಪಿಎಲ್​ 2026
Published on

ಪ್ರಮುಖ ಮುಖ್ಯಾಂಶಗಳು

  • ಕ್ರೀಡಾಭಿಮಾನಿಗಳ ಗಮನ ಐಪಿಎಲ್​ 2026ರ ಮೇಲೆ
  • 19ನೇ ಆವೃತ್ತಿಗೆ ಶುರುವಾಗಿದೆ ದಿನಗಣನೆ
  • ಈ ತಂಡಗಳ ನಡುವೆ ಐಪಿಎಲ್​ 2026ರ ಶುಭಾರಂಭ ಪಂದ್ಯ
IPL 2026: ಇತ್ತೀಚೆಗಷ್ಟೇ ನ್ಯೂಜಿಲೆಂಡ್​ ವಿರುದ್ಧ ಭಾರತ ಟಿ20 ವಿಶ್ವಕಪ್ ಗೆದ್ದು ಸಂಭ್ರಮಿಸಿತು. ಪ್ರಸ್ತುತ, ಟಿ20 ವಿಶ್ವಕಪ್ ಟೂರ್ನಿ ಮುಕ್ತಾಯಗೊಂಡಿದ್ದು, ಟೀಮ್​ ಇಂಡಿಯಾ ಮೂರನೇ ಬಾರಿ ವಿಶ್ವ ಚಾಂಪಿಯನ್ ಆಗಿ ಹೊರಹೊಮ್ಮಿದೆ. ವಿಶ್ವಕಪ್​ ಏನೋ ಮುಗಿಯಿತು ಇದೀಗ ಕ್ರೀಡಾಭಿಮಾನಿಗಳ ಗಮನ ಇಂಡಿಯನ್ ಪ್ರೀಮಿಯರ್ ಲೀಗ್ (IPL 2026) ಮೇಲೆ ಮೂಡಿದೆ. ಇದು ಇನ್ನೂ ಒಂದೆರೆಡು ತಿಂಗಳ ಕಾಲ ಕ್ರಿಕೆಟ್​ ಪ್ರಿಯರಿಗೆ ಭರಪೂರ ಮನರಂಜನೆಯನ್ನು ನೀಡಲಿದೆ.
ಮೂಲಗಳ ಪ್ರಕಾರ, ಐಪಿಎಲ್‌ನ ಸಂಪೂರ್ಣ ವೇಳಾಪಟ್ಟಿಯನ್ನು ಶೀಘ್ರವೇ ಹೊರಬೀಳಲಿದೆ. ಮಾ.13 ರೊಳಗೆ ಮೊದಲ ಹಂತದ ವೇಳಾಪಟ್ಟಿ ಬಿಡುಗಡೆಯಾಗುವ ಸಾಧ್ಯತೆಯಿದೆ ಎಂದು ಕ್ರಿಕ್‌ಬಜ್ ವರದಿ ಉಲ್ಲೇಖಿಸಿದೆ. ಇದಲ್ಲದೆ, ಯಾವ ಎರಡು ತಂಡಗಳ ಮಧ್ಯೆ ಓಪನಿಂಗ್ ಪಂದ್ಯ ಇರಲಿದೆ ಎಂಬ ಪ್ರಶ್ನೆ ಕಳೆದ ಕೆಲವು ದಿನಗಳಿಂದ ಕ್ರಿಕೆಟ್​ ಅಭಿಮಾನಿಗಳಲ್ಲಿ ಕಾಡತೊಡಗಿದೆ. ಹಲವರು, ಹಾಲಿ ಚಾಂಪಿಯನ್​ಗಳಾದ ರಾಯಲ್ ಚಾಲೆಂಜರ್ಸ್​ ಬೆಂಗಳೂರು ತಂಡದಿಂದ ಶುಭಾರಂಭ ಪಂದ್ಯ ನಡೆಯಲಿ ಎಂದು ಬಯಸಿದ್ದಾರೆ.

ಐಪಿಎಲ್​ ಇತಿಹಾಸದ ಬೆಸ್ಟ್ ತಂಡಗಳು

ಮತ್ತೊಂದೆಡೆ, ಐಪಿಎಲ್​ ಇತಿಹಾಸದಲ್ಲಿ ಐದು ಬಾರಿ ಚಾಂಪಿಯನ್​ ಪಟ್ಟ ಅಲಂಕರಿಸುವ ಬಲಿಷ್ಠ ತಂಡ ಎಂದೇ ಗುರುತಿಸಿಕೊಂಡಿರುವ ಚೆನ್ನೈ ಸೂಪರ್ ಕಿಂಗ್ಸ್​ ಹೆಸರು ಕೇಳಿಬಂದಿದೆ. ಆಸಕ್ತಿದಾಯಕ ಎಂದರೆ, ಇತ್ತೀಚಿನ ವರದಿ ಪ್ರಕಾರ, ಮಾ.28ರಂದು ಐಪಿಎಲ್​ ಕಿಕ್​ಸ್ಟಾರ್ಟ್​ ಪಂದ್ಯ ಆರ್‌ಸಿಬಿ ಮತ್ತು ಸಿಎಸ್‌ಕೆ ತಂಡಗಳ ನಡುವೆಯೇ ನಡೆಯಲಿದೆ ಎಂದು ಕ್ರಿಕ್​ಬಜ್​ ವರದಿ ತಿಳಿಸಿದೆ. ಇದು ಎರಡೂ ಫ್ರಾಂಚೈಸಿಗಳ ಅಭಿಮಾನಿಗಳಲ್ಲಿ ಖುಷಿ ತಂದಿದ್ದೇ ಆದರೂ ಅಧಿಕೃತ ವೇಳಾಪಟ್ಟಿ ಹೊರಬೀಳುವವರೆಗೂ ಕಾದು ನೋಡಬೇಕಿದೆ.

ಲಾಭದ ಲೆಕ್ಕಾಚಾರ

'ಸೌತ್ ಇಂಡಿಯನ್ ಡರ್ಬಿ' ಎಂದು ಕರೆಯಲ್ಪಡುವ ಆರ್‌ಸಿಬಿ-ಸಿಎಸ್‌ಕೆ ಪಂದ್ಯವು ಜಾಗತಿಕ ಮಾರುಕಟ್ಟೆಯಲ್ಲಿ ಭಾರಿ ಬೇಡಿಕೆಯನ್ನು ಹೊಂದಿದೆ. ಹೀಗಾಗಿಯೇ, ಈ ಹೈವೋಲ್ಟೇಜ್ ಪಂದ್ಯದೊಂದಿಗೆ 19ನೇ ಐಪಿಎಲ್​ ಆವೃತ್ತಿ ಆರಂಭಿಸುವುದು ಒಳ್ಳೆಯದು ಎಂದು ಆಯೋಜಕರು ನಿರ್ಧರಿಸಿದ್ದಾರೆ ಎನ್ನಲಾಗಿದೆ. ಮತ್ತೊಂದೆಡೆ, 2025ರಲ್ಲಿ ರನ್ನರ್ ಅಪ್ ಪಂಜಾಬ್ ಕಿಂಗ್ಸ್ ತಂಡವು ಮರುದಿನ ಅಂದರೆ ಮಾರ್ಚ್ 29ರಂದು ಮುಲ್ಲನ್ಪುರದಲ್ಲಿ ಗುಜರಾತ್ ಟೈಟಾನ್ಸ್ ವಿರುದ್ಧ ತನ್ನ ಮೊದಲ ಪಂದ್ಯವನ್ನು ಆಡಲಿದೆ ಎಂದು ತಿಳಿಸಲಾಗಿದೆ,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net