ಫೈನಲ್​ ಆಯ್ತು 8 ತಂಡದ ನಾಯಕರಗಳ ಹೆಸರು... ಆ ಎರಡು ತಂಡಕ್ಕೆ ಕ್ಯಾಪ್ಟನ್ ಯಾರು​? IPL 2026

ಇಂಡಿಯನ್ ಪ್ರೀಮಿಯರ್ ಲೀಗ್-2026
ಇಂಡಿಯನ್ ಪ್ರೀಮಿಯರ್ ಲೀಗ್-2026
Published on

ಪ್ರಮುಖ ಮುಖ್ಯಾಂಶಗಳು

  • ಇಂಡಿಯನ್ ಪ್ರೀಮಿಯರ್ ಲೀಗ್​ನ 19ನೇ ಸೀಸನ್‌ಗಾಗಿ ಫ್ರಾಂಚೈಸಿಗಳು ರೆಡಿ
  • ಈಗಾಗಲೇ ತಂಡದಲ್ಲಿ ಉಳಿಸಿಕೊಳ್ಳುವ ಮತ್ತು ಬಿಡುಗಡೆ ಮಾಡುವ ಆಟಗಾರರ ಪಟ್ಟಿ ರಿಲೀಸ್​
  • IPL-2026 ಮಿನಿ ಹರಾಜು ಡಿಸೆಂಬರ್ 16 ರಂದು ಅಬುಧಾಬಿಯಲ್ಲಿ ನಡೆಯಲಿದೆ
ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್ ( IPL 2026 ) ನ 19ನೇ ಸೀಸನ್‌ಗಾಗಿ ಫ್ರಾಂಚೈಸಿಗಳು ತಮ್ಮ ಅಸ್ತ್ರಗಳನ್ನು ಸಿದ್ಧಪಡಿಸಿಕೊಳ್ಳುತ್ತಿವೆ. ತಮ್ಮ ತಂಡದಲ್ಲಿ ಉಳಿಸಿಕೊಳ್ಳುವ​ ಮತ್ತು ಬಿಡುಗಡೆ ಮಾಡುವ ಆಟಗಾರರ ಪಟ್ಟಿಯನ್ನು ಈಗಾಗಲೇ ಘೋಷಿಸಿರುವ ಹತ್ತು ತಂಡಗಳು ಹರಾಜಿಗೆ ಸಿದ್ಧತೆ ಮಾಡಿಕೊಳ್ಳುತ್ತಿವೆ.
ಕೆಲವು ಫ್ರಾಂಚೈಸಿಗಳು ದುಬಾರಿ ಆಟಗಾರರನ್ನು ಬಿಡುಗಡೆ ಮಾಡಿ, ಹರಾಜಿನಲ್ಲಿ ಕಡಿಮೆ ಬೆಲೆಗೆ ಮರಳಿ ಖರೀದಿಸಲು ಯೋಜಿಸುತ್ತಿದ್ದರೆ, ಇನ್ನು ಕೆಲವು ಫ್ರಾಂಚೈಸಿಗಳು ತಾವು ಹೊರೆಯೆಂದು ಪರಿಗಣಿಸುವ ಆಟಗಾರರನ್ನು ಈಗಾಗಲೇ ವಿನಿಮಯ ಮಾಡಿಕೊಂಡಿವೆ.
ಚೆನ್ನೈ ಸೂಪರ್ ಕಿಂಗ್ಸ್ (CSK) ಮತ್ತು ರಾಜಸ್ಥಾನ ರಾಯಲ್ಸ್ (RR) ನಡುವೆ ನಡೆದ ಒಪ್ಪಂದದ ಪ್ರಕಾರ, ಆಲ್‌ರೌಂಡರ್ ರವೀಂದ್ರ ಜಡೇಜಾ ಅವರನ್ನು ರಾಜಸ್ಥಾನಕ್ಕೆ ನೀಡಿರುವ CSK, ಆ ತಂಡದ ನಾಯಕ ಸಂಜು ಸ್ಯಾಮ್ಸನ್ ಅವರನ್ನು ತಮ್ಮ ಫ್ರಾಂಚೈಸಿಗೆ ಆಹ್ವಾನಿಸಿದೆ. ಸಂಜು ಅವರಿಗೆ 18 ಕೋಟಿ ರೂ. ನೀಡಿ ವಿನಿಮಯ ಮಾಡಿಕೊಂಡಿದೆ.
ಇನ್ನು ಸಂಜು ಅವರಿಗೆ ಚೆನ್ನೈ ತಂಡದ ನಾಯಕತ್ವ ವಹಿಸಲಾಗುವುದು ಎಂಬ ಪ್ರಚಾರ ನಡೆದಿತ್ತು. ಆದರೆ, ಚೆನ್ನೈ ತಂಡ ರುತುರಾಜ್ ಗಾಯಕ್ವಾಡ್ ಅವರಿಗೆ ಮಣೆ ಹಾಕಿದೆ. ಉಳಿಸಿಕೊಳ್ಳುವಿಕೆ ಮತ್ತು ಬಿಡುಗಡೆ ಪಟ್ಟಿ ಬಿಡುಗಡೆಯಾದ ಕೂಡಲೇ ರುತುರಾಜ್​ ಅವರು ತಮ್ಮ ತಂಡದ ನಾಯಕನಾಗಿ ಮುಂದುವರಿಯುತ್ತಾರೆ ಎಂದು ಸಿಎಸ್​ಕೆ ಘೋಷಣೆ ಮಾಡಿತು.
ಸನ್‌ರೈಸರ್ಸ್ ಹೈದರಾಬಾದ್, ಡೆಲ್ಲಿ ಕ್ಯಾಪಿಟಲ್ಸ್, ಗುಜರಾತ್ ಟೈಟಾನ್ಸ್, ಲಖನೌ ಸೂಪರ್ ಜೈಂಟ್ಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು, ಪಂಜಾಬ್ ಕಿಂಗ್ಸ್ ಮತ್ತು ಮುಂಬೈ ಇಂಡಿಯನ್ಸ್‌ನಂತಹ ಫ್ರಾಂಚೈಸಿಗಳು ಸಹ 2026 ರಲ್ಲಿ ತಮ್ಮ ಹಳೆಯ ನಾಯಕರೊಂದಿಗೆ ಮುಂದುವರಿಯುವುದಾಗಿ ಸ್ಪಷ್ಟಪಡಿಸಿವೆ.

ಇನ್ನೂ ನಾಯಕನನ್ನು ಘೋಷಿಸದ ಎರಡು ತಂಡಗಳು

ನಾಯಕ ಸಂಜು ಅವರನ್ನು ಸಿಎಸ್​ಕೆಗೆ ವರ್ಗಾಯಿಸಿದ ರಾಜಸ್ಥಾನ ರಾಯಲ್ಸ್, ಹೊಸ ನಾಯಕನ ಹೆಸರನ್ನು ಇನ್ನೂ ಘೋಷಿಸಿಲ್ಲ. ಮತ್ತೊಂದೆಡೆ, ಕೋಲ್ಕತ ನೈಟ್ ರೈಡರ್ಸ್ ಕೂಡ ಅಜಿಂಜ್ಯ ರಹಾನೆ ಅವರನ್ನು ತಮ್ಮ ನಾಯಕನಾಗಿ ಮುಂದುವರಿಸುತ್ತದೆಯೇ ಎಂದು ಸ್ಪಷ್ಟಪಡಿಸಿಲ್ಲ.
ಅಂದಹಾಗೆ, IPL-2026 ಮಿನಿ ಹರಾಜು ಡಿಸೆಂಬರ್ 16 ರಂದು ಅಬುಧಾಬಿಯಲ್ಲಿ ನಡೆಯಲಿದೆ.

IPL-2026 ರಲ್ಲಿ 8 ತಂಡಗಳ ನಾಯಕರು ಈ ಕೆಳಕಂಡಂತಿದೆ

* ಚೆನ್ನೈ ಸೂಪರ್ ಕಿಂಗ್ಸ್- ರುತುರಾಜ್ ಗಾಯಕ್ವಾಡ್
* ಸನ್‌ರೈಸರ್ಸ್ ಹೈದರಾಬಾದ್- ಪ್ಯಾಟ್ ಕಮ್ಮಿನ್ಸ್
* ಗುಜರಾತ್ ಟೈಟಾನ್ಸ್- ಶುಭಮಾನ್​ ಗಿಲ್
* ಲಖನೌ ಸೂಪರ್ ಜೈಂಟ್ಸ್- ರಿಷಭ್ ಪಂತ್
* ರಾಯಲ್ ಚಾಲೆಂಜರ್ಸ್ ಬೆಂಗಳೂರು- ರಜತ್ ಪಾಟಿದಾರ್
* ದೆಹಲಿ ಕ್ಯಾಪಿಟಲ್ಸ್- ಅಕ್ಷರ್ ಪಟೇಲ್
* ಪಂಜಾಬ್ ಕಿಂಗ್ಸ್- ಶ್ರೇಯಸ್ ಅಯ್ಯರ್
* ಮುಂಬೈ ಇಂಡಿಯನ್ಸ್- ಹಾರ್ದಿಕ್ ಪಾಂಡ್ಯ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net