ಅಹಮದಾಬಾದ್: ಐಪಿಎಲ್ (IPL) 19ನೇ ಆವೃತ್ತಿಯ ಫೈನಲ್ ಪಂದ್ಯಕ್ಕೆ ಅಹಮದಾಬಾದ್ನಲ್ಲಿ ಮಳೆ ಅಡಚಣೆಯ ಭೀತಿ ಇಲ್ಲ. ಆದರೆ ಒಂದು ವೇಳೆ ಮಳೆ ಅಡ್ಡಿಪಡಿಸಿದರೆ, ಭಾನುವಾರವೇ ಫೈನಲ್ ಪೂರ್ಣಗೊಳಿಸಲು ಎರಡು ಗಂಟೆ ಹೆಚ್ಚುವರಿ ಅವಧಿ ಕಾಯಲಾಗುವುದು. ಈ ವೇಳೆ ಕನಿಷ್ಠ 5 ಓವರ್ಗಳ ಪಂದ್ಯ ಅಥವಾ ಸೂಪರ್ ಓವರ್ ಆಡಿಸಲು ಪ್ರಯತ್ನಿಸಲಾಗುವುದು. ಇದು ಸಾಧ್ಯವಾಗದಿದ್ದರೆ, ಮೀಸಲು ದಿನವಾದ ಸೋಮವಾರಕ್ಕೆ (ಜೂನ್ 1) ಫೈನಲ್ ಪಂದ್ಯ ಮುಂದೂಡಲ್ಪಡಲಿದೆ. ಮೀಸಲು ದಿನವೂ ಮಳೆ ಅಡಚಣೆಯಿಂದ ಫಲಿತಾಂಶ ಬಾರದಿದ್ದರೆ, ಲೀಗ್ ಹಂತದ ಅಂಕಪಟ್ಟಿಯಲ್ಲಿ ಮೇಲಿನ ಸ್ಥಾನದಲ್ಲಿದ್ದ ತಂಡಕ್ಕೆ ಅಂದರೆ ಈ ಬಾರಿ ಅಗ್ರಸ್ಥಾನ ಅಲಂಕರಿಸಿದ್ದ ಆರ್ಸಿಬಿಗೆ (RCB) ಟ್ರೋಫಿ ವಿತರಿಸಲಾಗುವುದು.