IPL-2026: ಫೈನಲ್​ ವೇಳೆ ಆರೆಂಜ್​, ಪರ್ಪಲ್​ ಕ್ಯಾಪ್​ ವಿಜೇತರ ಕುತೂಹಲ

IPL-2026: ಫೈನಲ್​ ವೇಳೆ ಆರೆಂಜ್​, ಪರ್ಪಲ್​ ಕ್ಯಾಪ್​ ವಿಜೇತರ ಕುತೂಹಲ
IPL-2026: ಫೈನಲ್​ ವೇಳೆ ಆರೆಂಜ್​, ಪರ್ಪಲ್​ ಕ್ಯಾಪ್​ ವಿಜೇತರ ಕುತೂಹಲ
Published on
ಅಹಮದಾಬಾದ್: ಈ ಬಾರಿ ಟೂರ್ನಿಯ ಗರಿಷ್ಠ ರನ್​ ಮತ್ತು ವಿಕೆಟ್​ ಸಾಧಕರಿಗೆ ನೀಡಲಾಗುವ ಆರೆಂಜ್​ ಮತ್ತು ಪರ್ಪಲ್​ ಕ್ಯಾಪ್​ ಯಾರಿಗೆ ಒಲಿಯಲಿದೆ ಎಂಬುದು ಐಪಿಎಲ್​ (IPL) ಫೈನಲ್​ ಪಂದ್ಯದವರೆಗೂ ಕುತೂಹಲ ಉಳಿಸಿಕೊಂಡಿದೆ.

ಸದ್ಯ ರಾಜಸ್ಥಾನ ರಾಯಲ್ಸ್​ ಬ್ಯಾಟಿಂಗ್​ ಸೆನ್ಸೇಶನ್​ ವೈಭವ್​ ಸೂರ್ಯವಂಶಿ (776) ಬಳಿ ಆರೆಂಜ್​ ಕ್ಯಾಪ್​ ಇದೆ. ಆದರೆ ಫೈನಲ್​ನಲ್ಲಿ ಆಡಲಿರುವ ಗುಜರಾತ್​ ತಂಡದ ಶುಭಮಾನ್​ ಗಿಲ್​ (722) ಮತ್ತು ಸಾಯಿ ಸುದರ್ಶನ್​ (710) ಇದನ್ನು ಕಿತ್ತುಕೊಳ್ಳುವ ಅವಕಾಶ ಹೊಂದಿದ್ದಾರೆ. ಫೈನಲ್​ನಲ್ಲಿ ಗಿಲ್​ 55 ಮತ್ತು ಸುದರ್ಶನ್​ 67 ರನ್​ ಗಳಿಸಿದರೆ ವೈಭವ್​ರನ್ನು ಹಿಂದಿಕ್ಕಲಿದ್ದಾರೆ. ಅಲ್ಲದೆ ಗಿಲ್​-ಸುದರ್ಶನ್​ ನಡುವೆಯೇ ಫೈನಲ್​ನಲ್ಲಿ ಆರೆಂಜ್​ ಕ್ಯಾಪ್​ಗೆ ಪೈಪೋಟಿ ಏರ್ಪಡಬಹುದು.

ಆರ್​ಸಿಬಿ ತಂಡದ ಗರಿಷ್ಠ ರನ್​ ಸ್ಕೋರರ್​ ವಿರಾಟ್​ ಕೊಹ್ಲಿ (600) ವೈಭವ್​ಗಿಂತ 176 ರನ್​ ಹಿಂದಿದ್ದಾರೆ. ಹೀಗಾಗಿ ಅವರಿಗೆ ಆರೆಂಜ್​ ಕ್ಯಾಪ್​ ಒಲಿಯುವುದು ಕಠಿಣ. ಇನ್ನು ಪರ್ಪಲ್​ ಕ್ಯಾಪ್​ ರೇಸ್​ನಲ್ಲಿ ಕಗಿಸೊ ರಬಾಡ (28) ಮತ್ತು ಭುವನೇಶ್ವರ್​ ಕುಮಾರ್​ (26) ನಡುವೆ ಫೈನಲ್​ನಲ್ಲಿ ನಿಕಟ ಪೈಪೋಟಿ ನಡೆಯಲಿದೆ. ರಬಾಡರಿಂದ ಪರ್ಪಪ್​ ಕ್ಯಾಪ್​ ಕಸಿದುಕೊಳ್ಳಲು ಭುವಿ ಫೈನಲ್​ನಲ್ಲಿ ಅವರಿಗಿಂತ 2 ವಿಕೆಟ್​ ಅಧಿಕ ಪಡೆಯಬೇಕಾಗಿದೆ. ಆಗ ವಿಕೆಟ್​ ಬೇಟೆ ಸಮಬಲವಾದರೂ, ಉತ್ತಮ ಸರಾಸರಿ ಆಧಾರದಲ್ಲಿ ಭುವಿಗೆ ಪರ್ಪಲ್​ ಕ್ಯಾಪ್​ ಒಲಿಯಲಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net