ಐಪಿಎಲ್​​​ ಮಿನಿ ಹರಾಜು: ಇಲ್ಲಿದೆ ಕ್ಯಾಪ್ಡ್​ ಪ್ಲೇಯರ್ಸ್ ಶಾರ್ಟ್‌ಲಿಸ್ಟ್‌... ಮೂಲ ಬೆಲೆ ಎಷ್ಟು? IPL 2026 Auction

ಐಪಿಎಲ್​​​ ಮಿನಿ ಹರಾಜಿಗೆ ಸಿದ್ಧತೆ
ಐಪಿಎಲ್​​​ ಮಿನಿ ಹರಾಜಿಗೆ ಸಿದ್ಧತೆ
Published on

ಪ್ರಮುಖ ಮುಖ್ಯಾಂಶಗಳು

  • ಡಿಸೆಂಬರ್ 16 ರಂದು ಅಬುಧಾಬಿಯಲ್ಲಿ ನಡೆಯಲಿದೆ ಐಪಿಎಲ್​ ಮಿನಿ ಹರಾಜು
  • 350 ಆಟಗಾರರನ್ನು ಮಾತ್ರ ಬಿಸಿಸಿಐ ಹರಾಜಿಗೆ ಶಾರ್ಟ್‌ಲಿಸ್ಟ್ ಮಾಡಿದೆ
  • ಇದರಲ್ಲಿ 240 ಭಾರತೀಯ ಆಟಗಾರರು ಮತ್ತು 110 ವಿದೇಶಿ ಆಟಗಾರರು
  • ಗರಿಷ್ಠ ಮೂಲ ಬೆಲೆ 2 ಕೋಟಿ ರೂಪಾಯಿಯೊಂದಿಗೆ ಹರಾಜಿಗಿಳಿದ 40 ಆಟಗಾರರು
IPL 2026 Auction : ಇಂಡಿಯನ್​ ಪ್ರೀಮಿಯರ್​ ಲೀಗ್​ (ಐಪಿಎಲ್​) ಮಿನಿ ಹರಾಜು ಡಿಸೆಂಬರ್ 16 ರಂದು ಅಬುಧಾಬಿಯಲ್ಲಿ ನಡೆಯಲಿದೆ. ಒಟ್ಟು 1390 ಆಟಗಾರರು ಹರಾಜಿಗೆ ತಮ್ಮ ಹೆಸರುಗಳನ್ನು ನೋಂದಾಯಿಸಿಕೊಂಡಿದ್ದರು. ಈ ಪೈಕಿ ಕೇವಲ 350 ಆಟಗಾರರನ್ನು ಮಾತ್ರ ಬಿಸಿಸಿಐ ಹರಾಜಿಗೆ ಶಾರ್ಟ್‌ಲಿಸ್ಟ್ ಮಾಡಿದೆ. ಇದರಲ್ಲಿ 240 ಭಾರತೀಯ ಆಟಗಾರರು ಮತ್ತು 110 ವಿದೇಶಿ ಆಟಗಾರರಿದ್ದಾರೆ. ಒಟ್ಟು ಆಟಗಾರರಲ್ಲಿ 224 ಭಾರತೀಯ ಅನ್​ಕ್ಯಾಪ್ಡ್​ ಆಟಗಾರರು ಮತ್ತು 14 ವಿದೇಶಿ ಅನ್​ಕ್ಯಾಪ್ಡ್​ ಆಟಗಾರರಿದ್ದಾರೆ.
ಎಲ್ಲ 10 ಫ್ರಾಂಚೈಸಿಗಳಲ್ಲಿ ಒಟ್ಟು 77 ಸ್ಥಾನಗಳು ಖಾಲಿ ಇದ್ದು, ಅವುಗಳಲ್ಲಿ 31 ಸ್ಥಾನಗಳು ವಿದೇಶಿ ಆಟಗಾರರಿಗೆ ಮೀಸಲಾಗಿವೆ. 40 ಆಟಗಾರರು ಗರಿಷ್ಠ ಮೂಲ ಬೆಲೆ 2 ಕೋಟಿ ರೂಪಾಯಿಯೊಂದಿಗೆ ಹರಾಜಿನಲ್ಲಿ ಭಾಗವಹಿಸಲಿದ್ದಾರೆ. ಡಿಸೆಂಬರ್ 16 ರಂದು ಮಧ್ಯಾಹ್ನ 2.30 ಕ್ಕೆ ಹರಾಜು ಆರಂಭವಾಗಲಿದೆ. ಅಂದಹಾಗೆ, ಅಂತಾರಾಷ್ಟ್ರೀಯ ಮಟ್ಟದಲ್ಲಿ ದೇಶವನ್ನು ಪ್ರತಿನಿಧಿಸಿದ ಕ್ರಿಕೆಟಿಗರನ್ನು ಕ್ಯಾಪ್ಡ್​ ಪ್ಲೇಯರ್ಸ್​ ಹಾಗೂ ದೇಶೀಯ ಕ್ರಿಕೆಟಿಗರನ್ನು (ಇನ್ನೂ ಅಂತಾರಾಷ್ಟ್ರೀಯ ಕ್ರಿಕೆಟ್ ಆಡದವರು) ಅನ್​ಕ್ಯಾಪ್ಡ್​ ಪ್ಲೇಯರ್ಸ್​ ಎಂದು ಕರೆಯಲಾಗುತ್ತದೆ.

ಹರಾಜಿನಲ್ಲಿರುವ ಆಟಗಾರರ ಸಂಪೂರ್ಣ ಪಟ್ಟಿ

2 ಕೋಟಿ ರೂ. ಮೂಲ ಬೆಲೆಯ ಕ್ಯಾಪ್ಡ್​ ಪ್ಲೇಯರ್ಸ್​

ಡೆವೊನ್ ಕಾನ್ವೇ (ನ್ಯೂಜಿಲೆಂಡ್), ಜೇಕ್ ಫ್ರೇಸರ್-ಮೆಕ್‌ಗುರ್ಕ್ (ಆಸ್ಟ್ರೇಲಿಯಾ), ಕ್ಯಾಮರೂನ್ ಗ್ರೀನ್ (ಆಸ್ಟ್ರೇಲಿಯಾ), ಡೇವಿಡ್ ಮಿಲ್ಲರ್ (ದಕ್ಷಿಣ ಆಫ್ರಿಕಾ), ಗಸ್ ಅಟ್ಕಿನ್ಸನ್ (ಇಂಗ್ಲೆಂಡ್), ವನಿಂದು ಹಸರಂಗ (ಶ್ರೀಲಂಕಾ), ವೆಂಕಟೇಶ್ ಅಯ್ಯರ್ (ಭಾರತ), ಲಿಯಾಮ್ ಲಿವಿಂಗ್‌ಸ್ಟೋನ್ (ಇಂಗ್ಲೆಂಡ್), ಬೆನ್ ಡಕೆಟ್ (ಇಂಗ್ಲೆಂಡ್), ಜೇಮಿ ಸ್ಮಿತ್ (ಇಂಗ್ಲೆಂಡ್), ಜೆರಾಲ್ಡ್ ಕೋಟ್ಜೀ (ದಕ್ಷಿಣ ಆಫ್ರಿಕಾ), ಜಾಕೋಬ್ ಡಫಿ (ನ್ಯೂಜಿಲೆಂಡ್), ಅನ್ರಿಚ್ ನಾರ್ಟ್ಜೆ (ದಕ್ಷಿಣ ಆಫ್ರಿಕಾ), ಮತಿಶಾ ಪತಿರಾನ (ಶ್ರೀಲಂಕಾ), ರವಿ ಬಿಷ್ಣೋಯ್ (ಭಾರತ), ಅಕೀಲ್ ಹೊಸೈನ್ (ವೆಸ್ಟ್ ಇಂಡೀಸ್), ಮುಜೀಬ್ ರೆಹಮಾನ್ (ಅಫ್ಘಾನಿಸ್ತಾನ), ಮಹೇಶ್ ತೀಕ್ಷಣ್​ (ಶ್ರೀಲಂಕಾ), ಸ್ಟೀವ್ ಸ್ಮಿತ್ (ಆಸ್ಟ್ರೇಲಿಯಾ), ಸೀನ್ ಅಬಾಟ್ (ಆಸ್ಟ್ರೇಲಿಯಾ), ಮೈಕೆಲ್ ಬ್ರೇಸ್‌ವೆಲ್ (ನ್ಯೂಜಿಲೆಂಡ್), ಜೇಸನ್ ಹೋಲ್ಡರ್ (ವೆಸ್ಟ್ ಇಂಡೀಸ್), ಡರೈಲ್​ ಮಿಚೆಲ್ (ನ್ಯೂಜಿಲೆಂಡ್), ಟಾಮ್ ಬ್ಯಾಂಟನ್ (ಇಂಗ್ಲೆಂಡ್), ಶಾಯ್​ ಹೋಪ್ (ವೆಸ್ಟ್ ಇಂಡೀಸ್), ಜೋಶ್ ಇಂಗ್ಲಿಸ್ (ಆಸ್ಟ್ರೇಲಿಯಾ), ಕೈಲ್ ಜೇಮಿಸನ್ (ನ್ಯೂಜಿಲೆಂಡ್), ಆಡಮ್ ಮಿಲ್ನೆ (ನ್ಯೂಜಿಲೆಂಡ್), ಲುಂಗಿ ಎನ್‌ಗಿಡಿ (ದಕ್ಷಿಣ ಆಫ್ರಿಕಾ), ವಿಲಿಯಂ ಒ'ರೂರ್ಕೆ (ನ್ಯೂಜಿಲೆಂಡ್), ಮುಸ್ತಾಫಿಜುರ್ ರೆಹಮಾನ್ (ಬಾಂಗ್ಲಾದೇಶ), ಕೂಪರ್ ಕಾನೊಲಿ (ಆಸ್ಟ್ರೇಲಿಯಾ), ಟಾಮ್ ಕರನ್ (ಇಂಗ್ಲೆಂಡ್), ಡೇನಿಯಲ್ ಲಾರೆನ್ಸ್ (ಇಂಗ್ಲೆಂಡ್), ಅಲ್ಜಾರಿ ಜೋಸೆಫ್ (ವೆಸ್ಟ್ ಇಂಡೀಸ್), ನವೀನ್-ಉಲ್-ಹಕ್ (ಅಫ್ಘಾನಿಸ್ತಾನ) ಹಾಗೂ ಲಿಯಾಮ್ ಡಾಸನ್ (ಇಂಗ್ಲೆಂಡ್).

1.5 ಕೋಟಿ ರೂ. ಮೂಲ ಬೆಲೆಯ ಕ್ಯಾಪ್ಡ್​ ಪ್ಲೇಯರ್ಸ್​

ಸ್ಪೆನ್ಸರ್ ಜಾನ್ಸನ್ (ಆಸ್ಟ್ರೇಲಿಯಾ), ಮ್ಯಾಟ್ ಹೆನ್ರಿ (ನ್ಯೂಜಿಲೆಂಡ್), ಮ್ಯಾಥ್ಯೂ ಶಾರ್ಟ್ (ಆಸ್ಟ್ರೇಲಿಯಾ), ಸಾಕಿಬ್ ಮಹಮೂದ್ (ಇಂಗ್ಲೆಂಡ್), ರಿಲೇ ಮೆರೆಡಿತ್ (ಆಸ್ಟ್ರೇಲಿಯಾ), ಜೇ ರಿಚರ್ಡ್ಸನ್ (ಆಸ್ಟ್ರೇಲಿಯಾ), ಟಿಮ್ ಸೀಫರ್ಟ್ (ನ್ಯೂಜಿಲೆಂಡ್).

1.2 ಕೋಟಿ ರೂ. ಮೂಲ ಬೆಲೆಯ ಕ್ಯಾಪ್ಡ್​ ಪ್ಲೇಯರ್ಸ್​

ಬ್ಯೂ ವೆಬ್‌ಸ್ಟರ್ (ಆಸ್ಟ್ರೇಲಿಯಾ), ರೋಸ್ಟನ್ ಚೇಸ್ (ವೆಸ್ಟ್ ಇಂಡೀಸ್), ಕೈಲ್ ಮೇಯರ್ಸ್ (ವೆಸ್ಟ್ ಇಂಡೀಸ್) ಹಾಗೂ ಆಲಿ ಸ್ಟೋನ್ (ಇಂಗ್ಲೆಂಡ್).

1 ಕೋಟಿ ರೂ. ಮೂಲ ಬೆಲೆಯ ಕ್ಯಾಪ್ಡ್​ ಪ್ಲೇಯರ್ಸ್​

ವಿಯಾನ್ ಮುಲ್ಡರ್ (ದಕ್ಷಿಣ ಆಫ್ರಿಕಾ), ಫಿನ್ ಅಲೆನ್ (ನ್ಯೂಜಿಲೆಂಡ್), ಜಾನಿ ಬೈರ್‌ಸ್ಟೋವ್ (ಇಂಗ್ಲೆಂಡ್), ಕ್ವಿಂಟನ್ ಡಿ ಕಾಕ್ (ದಕ್ಷಿಣ ಆಫ್ರಿಕಾ), ಆಕಾಶ್ ದೀಪ್ (ಭಾರತ), ಫಜಲ್‌ಹಕ್ ಫಾರೂಕಿ (ಅಫ್ಘಾನಿಸ್ತಾನ), ರಾಹುಲ್ ಚಾಹರ್ (ಭಾರತ), ತಬ್ರೈಜ್ ಶಮ್ಸಿ (ದಕ್ಷಿಣ ಆಫ್ರಿಕಾ), ರೀಜಾ ಹೆಂಡ್ರಿಕ್ಸ್ (ದಕ್ಷಿಣ ಆಫ್ರಿಕಾ), ಡೇನಿಯಲ್ ಸ್ಯಾಮ್ಸ್ (ಆಸ್ಟ್ರೇಲಿಯಾ), ಬೆನ್ ದ್ವಾರಶುಯಿಸ್ (ಆಸ್ಟ್ರೇಲಿಯಾ), ಕುಶಾಲ್​ ಪೆರೇರಾ (ಶ್ರೀಲಂಕಾ), ಉಮೇಶ್ ಯಾದವ್ (ಭಾರತ), ಮೊಹಮ್ಮದ್ ವಕಾರ್ ಸಲಾಂಖೈಲ್ (ಅಫ್ಘಾನಿಸ್ತಾನ), ಜಾರ್ಜ್ ಲಿಂಡೆ (ದಕ್ಷಿಣ ಆಫ್ರಿಕಾ), ಗುಲ್ಬಾದಿನ್ ನೈಬ್ (ಅಫ್ಘಾನಿಸ್ತಾನ), ವಿಲಿಯಂ ಸದರ್ಲ್ಯಾಂಡ್ (ಆಸ್ಟ್ರೇಲಿಯಾ), ಜೋಶುವಾ ಟಾಂಗ್ (ಇಂಗ್ಲೆಂಡ್), ಡ್ವೇನ್ ಪ್ರಿಟೋರಿಯಸ್ (ದಕ್ಷಿಣ ಆಫ್ರಿಕಾ) ಹಾಗೂ ಚರಿತ್ ಅಸಲಂಕಾ (ಶ್ರೀಲಂಕಾ).

75 ಲಕ್ಷ ಮೂಲ ಬೆಲೆಯ ಕ್ಯಾಪ್ಡ್​ ಪ್ಲೇಯರ್ಸ್​

ಸರ್ಫರಾಜ್ ಖಾನ್ (ಭಾರತ), ಪೃಥ್ವಿ ಶಾ (ಭಾರತ), ದೀಪಕ್ ಹೂಡಾ (ಭಾರತ), ಕೆ.ಎಸ್. ಭರತ್ (ಭಾರತ), ಶಿವಂ ಮಾವಿ (ಭಾರತ), ಮಾಯಾಂಕ್ ಅಗರ್ವಾಲ್ (ಭಾರತ), ಸೆಡಿಕುಲ್ಲಾ ಅಟಲ್ (ಅಫ್ಘಾನಿಸ್ತಾನ್), ಅಕೀಮ್ ಆಗಸ್ಟೆ (ವೆಸ್ಟ್ ಇಂಡೀಸ್), ಪಾತುಮ್ ನಿಸ್ಸಾಂಕ (ಶ್ರೀಲಂಕಾ), ಟಿಮ್ ರಾಬಿನ್ಸನ್ (ನ್ಯೂಜಿಲೆಂಡ್), ರಾಹುಲ್ ತ್ರಿಪಾಠಿ (ಭಾರತ), ಜೋರ್ಡಾನ್ ಕಾಕ್ಸ್ (ಇಂಗ್ಲೆಂಡ್), ಬೆಂಜಮಿನ್ ಮೆಕ್‌ಡರ್ಮಾಟ್ (ಆಸ್ಟ್ರೇಲಿಯಾ), ಕುಶಾಲ್ ಮೆಂಡಿಸ್ (ಶ್ರೀಲಂಕಾ), ಚೇತನ್ ಸಕಾರಿಯಾ (ಭಾರತ), ಕುಲದೀಪ್ ಸೇನ್ (ಭಾರತ), ಖೈಸ್ ಅಹ್ಮದ್ (ಅಫ್ಘಾನಿಸ್ತಾನ್), ರಿಷದ್ ಹೊಸೈನ್ (ಬಾಂಗ್ಲಾದೇಶ), ವಿಯಸ್ಕಾಂತ್ ವಿಜಯಕಾಂತ್ (ಶ್ರೀಲಂಕಾ), ರೆಹಾನ್ ಅಹ್ಮದ್ (ಇಂಗ್ಲೆಂಡ್), ತಸ್ಕಿನ್ ಅಹ್ಮದ್ (ಬಾಂಗ್ಲಾದೇಶ), ರಿಚರ್ಡ್ ಗ್ಲೀಸನ್ (ಇಂಗ್ಲೆಂಡ್), ಶಮರ್ ಜೋಸೆಫ್ (ವೆಸ್ಟ್ ಇಂಡೀಸ್), ನವದೀಪ್ ಸೈನಿ (ಭಾರತ), ಲ್ಯೂಕ್ ವುಡ್ (ಇಂಗ್ಲೆಂಡ್), ಮುಹಮ್ಮದ್ ಅಬ್ಬಾಸ್ (ನ್ಯೂಜಿಲೆಂಡ್), ಜಾರ್ಜ್ ಗಾರ್ಟನ್ (ಇಂಗ್ಲೆಂಡ್), ನಾಥನ್ ಸ್ಮಿತ್ (ನ್ಯೂಜಿಲೆಂಡ್), ಡುನಿತ್ ವೆಲ್ಲಾಲಗೆ (ಶ್ರೀಲಂಕಾ), ತಂಜಿಮ್ ಹಸನ್ ಸಕಿಬ್ (ಬಾಂಗ್ಲಾದೇಶ), ಮ್ಯಾಥ್ಯೂ ಪಾಟ್ಸ್ (ಇಂಗ್ಲೆಂಡ್), ನಹಿದ್ ರಾಣಾ (ಬಾಂಗ್ಲಾದೇಶ), ಸಂದೀಪ್ ವಾರಿಯರ್ (ಭಾರತ), ವೆಸ್ಲಿ ಅಗರ್ (ಆಸ್ಟ್ರೇಲಿಯಾ), ಬಿನುರಾ ಫೆರ್ನಾಂಡೊ (ಶ್ರೀಲಂಕಾ), ಮೊಹಮ್ಮದ್ ಶೋರಿಫುಲ್ ಇಸ್ಲಾಂ (ಬಾಂಗ್ಲಾದೇಶ), ಜೋಶುವಾ ಲಿಟಲ್ (ಐರ್ಲೆಂಡ್), ಒಬೆದ್ ಮೆಕಾಯ್ (ವೆಸ್ಟ್ ಇಂಡೀಸ್), ಬಿಲ್ಲಿ ಸ್ಟಾನ್ಲೇಕ್ (ಆಸ್ಟ್ರೇಲಿಯಾ), ಜ್ಯಾಕ್ ಫೌಲ್ಕ್ಸ್ (ನ್ಯೂಜಿಲೆಂಡ್), ದಾಸುನ್ ಶನಕ (ಶ್ರೀಲಂಕಾ) ಹಾಗೂ ಬೆವನ್ ಜಾನ್ ಜೇಕಬ್ಸ್ (ನ್ಯೂಜಿಲೆಂಡ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net