IPL 2026 Auction : ಕ್ರಿಕೆಟ್ ಅಭಿಮಾನಿಗಳು ಬಹಳ ಕುತೂಹಲದಿಂದ ಎದುರು ನೋಡುತ್ತಿರುವ ಬಹುನಿರೀಕ್ಷಿತ ಐಪಿಎಲ್ ಮಿನಿ ಹರಾಜಿಗೆ ಸಮಯ ಹತ್ತಿರ ಬರುತ್ತಿದೆ. ಡಿಸೆಂಬರ್ 16 ರಂದು ದುಬೈನಲ್ಲಿ ಈ ಈವೆಂಟ್ ನಡೆಯಲಿದ್ದು, ಹರಾಜಿಗೆ ನೋಂದಣಿ ಮಾಡಿಕೊಂಡಿರುವ ಆಟಗಾರರ ಪಟ್ಟಿಯಿಂದ ಬಿಸಿಸಿಐ 1005 ಆಟಗಾರರ ಹೆಸರುಗಳನ್ನು ತೆಗೆದುಹಾಕಿದೆ. ಅದೇ ಸಮಯದಲ್ಲಿ, 35 ಹೊಸ ಆಟಗಾರರ ಹೆಸರುಗಳನ್ನು ಬಿಸಿಸಿಐ ಸೇರಿಸಿದೆ.