ಒಂದೆಡೆ, ಪಾಕಿಸ್ತಾನ ಟಿ20 ವಿಶ್ವಕಪ್ ಟೂರ್ನಿಯಿಂದ ಹೊರಬಿದ್ದರೆ, ವಿಂಡೀಸ್ ವಿರುದ್ಧ ಗೆದ್ದ ಭಾರತ ನೇರವಾಗಿ ಸೆಮಿಫೈನಲ್ಗೆ ಲಗ್ಗೆಯಿಟ್ಟಿದೆ. ಇದನ್ನು ಸಹಿಸಲಾರದ ಪಾಕೀಗಳು, ಒಂದಲ್ಲ ಒಂದು ಆರೋಪವನ್ನು ಹೊರಿಸುತ್ತಿದ್ದಾರೆ. ಕೆಲವರು ಈ ಪಂದ್ಯದಲ್ಲಿ ಫಿಕ್ಸಿಂಗ್ ಆಗಿದೆ. ಭಾರತ ಎದುರು ವೆಸ್ಟ್ ಇಂಡೀಸ್ ಗೆಲ್ಲದಂತೆ ಮಾಡಲಾಗಿದೆ ಎಂದೆಲ್ಲ ಆರೋಪಿಸಲಾಗಿದೆ. ಈ ಪೈಕಿ ಇಂಜಮಾಮ್ ಆಡಿರುವ ಮಾತುಗಳು ಭಾರತೀಯ ಕ್ರಿಕೆಟ್ ಪ್ರಿಯರ ಪಿತ್ತವನ್ನು ನೆತ್ತಿಗೇರಿಸಿದೆ.