

ಬೆಂಗಳೂರು: ಇನ್‌ಸ್ಪೈರ್ ಇನ್‌ಸ್ಟಿಟ್ಯೂಟ್ ಆಫ್ ಸ್ಪೋರ್ಟ್ಸ್ (IIS) ತನ್ನ 8ನೇ ಸಂಸ್ಥಾಪನಾ ದಿನ ಹಾಗೂ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮದ ಅಂಗವಾಗಿ ವಿಜಯನಗರ ಕ್ಯಾಂಪಸ್‌ನಲ್ಲಿ 'ಇನ್‌ಸ್ಪೈರ್ ಮ್ಯೂಸಿಯಂ' ಅನ್ನು ಲೋಕಾರ್ಪಣೆ ಮಾಡಿದೆ. ಕಳೆದ ಕೆಲವು ವರ್ಷಗಳಲ್ಲಿ ಸಂಸ್ಥೆಯ ಯಶಸ್ಸಿಗೆ ಕಾರಣರಾದ ಕ್ರೀಡಾಪಟುಗಳು, ತರಬೇತುದಾರರು ಮತ್ತು ಅವರ ಕ್ರೀಡಾ ಸಾಧನೆಗಳಿಗೆ ಇದು ಸಮರ್ಪಿತವಾದ ಗೌರವವಾಗಿದೆ. ಈ ಮ್ಯೂಸಿಯಂ IIS ನ ಇದುವರೆಗಿನ ಪಯಣವನ್ನು ಕೊಂಡಾಡುವುದರ ಜೊತೆಗೆ, ಇಲ್ಲಿ ತರಬೇತಿ ಪಡೆದು ಬೆಳೆದ ಕ್ರೀಡಾಪಟುಗಳ ಸಾಧನೆಗಳು, ಮೈಲಿಗಲ್ಲುಗಳು ಮತ್ತು ಅವರ ಸ್ಫೂರ್ತಿದಾಯಕ ಕಥೆಗಳನ್ನು ಪರಿಚಯಿಸುತ್ತದೆ.
ಮುಂಬರುವ ಪೀಳಿಗೆಯ ಕ್ರೀಡಾಪಟುಗಳಿಗೆ ಸ್ಫೂರ್ತಿ ತುಂಬಲು ಹಾಗೂ ಮತ್ತಷ್ಟು ದೊಡ್ಡ ಕನಸುಗಳನ್ನು ಕಾಣುವಂತೆ ಪ್ರೇರೇಪಿಸಲು ಈ ಮ್ಯೂಸಿಯಂ ಅನ್ನು ನಿರ್ಮಿಸಲಾಗಿದೆ. ನಾವು ಎಂಟು ವರ್ಷಗಳನ್ನು ಪೂರೈಸುತ್ತಿರುವ ಈ ಸಂದರ್ಭದಲ್ಲಿ, ಭಾರತೀಯ ಕ್ರೀಡಾಪಟುಗಳು ಉನ್ನತ ಮಟ್ಟದಲ್ಲಿ ಯಶಸ್ಸು ಸಾಧಿಸಲು ಅಗತ್ಯವಿರುವ ಬೆಂಬಲ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸುವುದೇ ನಮ್ಮ ಪ್ರಮುಖ ಗುರಿಯಾಗಿದೆ" ಎಂದು ತಿಳಿಸಿದರು.