ಪ್ರಶಸ್ತಿ ಪ್ರದಾನ ಸಮಾರಂಭದ ನಂತರ, ಐಸಿಸಿ ಆಹ್ವಾನಿತ ಸೋಶಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ ಪ್ರಿನ್ಸ್ ಪಾರಿಖ್, ಮಿಲ್ಲರ್ ಜೊತೆ ರೀಲ್ಸ್ ಮಾಡಿದರು. ಮಿಲ್ಲರ್ ಸುತ್ತಲೂ ನಡೆಯುತ್ತಾ ವ್ಯಂಗ್ಯವಾಗಿ ಚಪ್ಪಾಳೆ ತಟ್ಟುವ ವಿಡಿಯೋವನ್ನು ತಮ್ಮ ಸಾಮಾಜಿಕ ಜಾಲತಾಣ ಖಾತೆಗಳಲ್ಲಿ ಪಾರಿಖ್ ಪೋಸ್ಟ್ ಮಾಡಿದರು. ಈ ರೀಲ್ಸ್ ವೈರಲ್ ಆಗಿ, ಮಿಶ್ರ ಪ್ರತಿಕ್ರಿಯೆಗಳನ್ನು ಪಡೆದುಕೊಂಡಿತು. ಅನೇಕರಿಗೆ ಈ ವಿಡಿಯೋ ತಮಾಷೆಯೆನಿಸಿದರೆ, ಕೆಲವರಿಗೆ ಈ ವಿಡಿಯೋ ಕೊಂಚವೂ ಇಷ್ಟವಾಗಲಿಲ್ಲ. ಹೀಗಾಗಿ, ಪಾರಿಖ್ ಮೇಲೆ ಆನ್‌ಲೈನ್‌ನಲ್ಲಿ ವಾಗ್ದಾಳಿ ಮಾಡಲಾಯಿತು. ಅಲ್ಲದೇ. ರೇಪ್ ಬೆದರಿಕೆ ಹಾಕಲಾಗಿದೆ ಮತ್ತು ಬಾಡಿ ಶೇಮಿಂಗ್ ಮಾಡುವ ಕಾಮೆಂಟ್‌ಗಳನ್ನು ಫೇಸ್‌ಬುಕ್‌ನಲ್ಲಿ ಮಾಡಲಾಗಿದೆ.