ಆಸ್ಟ್ರೇಲಿಯಾ ಔಟ್, ಜಿಂಬಾಬ್ವೆ ಇನ್! ಭಾರತದ ಸೂಪರ್-8 ಹಾದಿಯಲ್ಲಿರುವ ಆ ಮೂವರು ಎದುರಾಳಿಗಳು ಯಾರು? T20 World cup

T20 World cup (ಚಿತ್ರ Instagram)
T20 World cup (ಚಿತ್ರ Instagram)
Published on

ಪ್ರಮುಖ ಮುಖ್ಯಾಂಶಗಳು

  • ಐಸಿಸಿ ಟಿ20 ವಿಶ್ವಕಪ್ ನಿರ್ಣಾಯಕ ಘಟ್ಟ ತಲುಪಿದ್ದು, ಸೂಪರ್​ 8 ಹಂತಕ್ಕೆ ಅರ್ಹತೆ ಪಡೆದ ತಂಡಗಳ ಪಟ್ಟಿ ಇಲ್ಲಿದೆ
  • ಮಂಗಳವಾರ ಶ್ರೀಲಂಕಾದ ಪಲ್ಲೆಕೆಲೆಯಲ್ಲಿ ನಡೆಯಬೇಕಿದ್ದ ಐರ್ಲೆಂಡ್ ಮತ್ತು ಜಿಂಬಾಬ್ವೆ ನಡುವಿನ ಪಂದ್ಯ ರದ್ದಾಗಿದೆ
  • ಭಾರತವು ಫೆಬ್ರವರಿ 22 ರಂದು ಅಹಮದಾಬಾದ್​ನಲ್ಲಿ ದಕ್ಷಿಣ ಆಫ್ರಿಕಾವನ್ನು ಎದುರಿಸಲಿದೆ
  • ಭಾನುವಾರ ಕೊಲಂಬೊದಲ್ಲಿ ಪಾಕಿಸ್ತಾನವನ್ನು 61 ರನ್​ಗಳಿಂದ ಮಣ್ಣು ಮುಕ್ಕಿಸುವ ಮೂಲಕ ಜಯ ಸಾಧಿಸಿದೆ
T20 World cup2026ರ ಐಸಿಸಿ ಟಿ20 ವಿಶ್ವಕಪ್ ನಿರ್ಣಾಯಕ ಘಟ್ಟ ತಲುಪಿದ್ದು, ಲೀಗ್ ಹಂತದ ರೋಚಕ ಪಂದ್ಯಗಳ ಬಳಿಕ ಸೂಪರ್​ 8 ಹಂತಕ್ಕೆ ಅರ್ಹತೆ ಪಡೆದ ತಂಡಗಳ ಪಟ್ಟಿ ಮತ್ತು ಟೀಮ್ ಇಂಡಿಯಾದ ಸಂಪೂರ್ಣ ವೇಳಾಪಟ್ಟಿ ಅಧಿಕೃತವಾಗಿ ಪ್ರಕಟವಾಗಿದೆ.
ಮಂಗಳವಾರ ಶ್ರೀಲಂಕಾದ ಪಲ್ಲೆಕೆಲೆಯಲ್ಲಿ ನಡೆಯಬೇಕಿದ್ದ ಐರ್ಲೆಂಡ್ ಮತ್ತು ಜಿಂಬಾಬ್ವೆ ನಡುವಿನ ಪಂದ್ಯವು ಮಳೆಯಿಂದಾಗಿ ರದ್ದಾದ ಕಾರಣ, ಜಿಂಬಾಬ್ವೆ ತಂಡವು ಸೂಪರ್ 8 ಹಂತಕ್ಕೆ ಅರ್ಹತೆ ಪಡೆದ ಕೊನೆಯ ತಂಡವಾಗಿದೆ. ಈ ನಡುವೆ ಬಲಿಷ್ಠ ಆಸ್ಟ್ರೇಲಿಯಾ ತಂಡವು ಟೂರ್ನಿಯಿಂದ ಹೊರಬಿದ್ದಿರುವುದು ಈ ವಿಶ್ವಕಪ್‌ನ ದೊಡ್ಡ ಅಚ್ಚರಿಗಳಲ್ಲಿ ಒಂದಾಗಿದೆ. 

ಭಾರತದ ಸೂಪರ್ 8 ವೇಳಾಪಟ್ಟಿ

ಭಾರತವು ಫೆಬ್ರವರಿ 22 ರಂದು ಅಹಮದಾಬಾದ್​ನಲ್ಲಿ ದಕ್ಷಿಣ ಆಫ್ರಿಕಾವನ್ನು ಎದುರಿಸಲಿದ್ದು, ಇದಾದ ಬಳಿಕ ಫೆಬ್ರವರಿ 26  ಚೆನ್ನೈನಲ್ಲಿ ಜಿಂಬಾಬ್ವೆ ನಡುವೆ ಹಣಾಹಣಿ ನಡೆಸಲಿದೆ.  ಮಾರ್ಚ್ 1 ರಂದು ಕೋಲ್ಕತ್ತಾದಲ್ಲಿ ತಮ್ಮ ಸೂಪರ್ 8 ಅಭಿಯಾನವನ್ನು ಮುಕ್ತಗೊಳಿಸುವ ಮುನ್ನ ಟೀಮ್ ಇಂಡಿಯಾ ವೆಸ್ಟ್​ ಇಂಡೀಸ್​ ವಿರುದ್ಧ ಹೋರಾಡಲಿದೆ.
ಭಾನುವಾರ ಕೊಲಂಬೊದಲ್ಲಿ ಪಾಕಿಸ್ತಾನವನ್ನು 61 ರನ್​ಗಳಿಂದ ಮಣ್ಣು ಮುಕ್ಕಿಸುವ ಮೂಲಕ ಭಾರತ ಸೂಪರ್ 8 ಹಂತಕ್ಕೆ ಪ್ರವೇಶ ಪಡೆದಿದೆ. ಪ್ರಸ್ತುತ ಮೂರು ಪಂದ್ಯಗಳಲ್ಲಿ ಗೆಲುವು ಸಾಧಿಸಿ ಗ್ರೂಪ್​ ಎ ನಲ್ಲಿ ಅಗ್ರಸ್ಥಾನ ಪಡೆದಿದೆ.
ಭಾರತ ತಂಡವು ಬುಧವಾರ ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನೆದರ್‌ಲ್ಯಾಂಡ್ಸ್ ವಿರುದ್ಧ ತನ್ನ ಕೊನೆಯ ಗುಂಪು ಹಂತದ ಪಂದ್ಯವನ್ನು ಆಡಲಿದೆ.
ಈ ಎರಡೂ ದೇಶಗಳು ಟಿ20 ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಹಿಂದೆ ಒಮ್ಮೆ ಮಾತ್ರ ಮುಖಾಮುಖಿಯಾಗಿದ್ದು, ಭಾರತವು ಸಿಡ್ನಿಯಲ್ಲಿ ನಡೆದ 2022 ರ ಟಿ20 ವಿಶ್ವಕಪ್​ನಲ್ಲಿ ಗೆಲುವನ್ನು ಸಾಧಿಸಿತ್ತು.
ಸೂರ್ಯಕುಮಾರ್ ಯಾದವ್ ನಾಯಕತ್ವದ ಭಾರತ ತಂಡವು ಅಮೆರಿಕ, ನಮೀಬಿಯಾ ಮತ್ತು ಪಾಕಿಸ್ತಾನ ವಿರುದ್ಧ ಗೆದ್ದ ನಂತರ ಸತತ ನಾಲ್ಕನೇ ಗೆಲುವಿನ ಮೇಲೆ ಕಣ್ಣಿಟ್ಟಿದೆ.
ಪಾಕಿಸ್ತಾನದ ವಿರುದ್ಧದ ಪಂದ್ಯದಲ್ಲಿ ಹೋರಾಡಿ ಸೋತ ನೆದರ್ಲ್ಯಾಂಡ್ಸ್, ಅಮೆರಿಕ ವಿರುದ್ಧದ ಪಂದ್ಯದಲ್ಲಿ ಹೀನಾಯವಾಗಿ ಪರಾಭವಗೊಂಡಿತು. ಈ ಎರಡು ಪ್ರಮುಖ ಸೋಲುಗಳಿಂದಾಗಿ ಸೂಪರ್ 8 ಹಂತಕ್ಕೆ ಅರ್ಹತೆ ಪಡೆಯುವ ಆಸೆಗೆ ನೀರೆರೆಚಿದೆ.
ಭಾರತ ತಂಡದದಲ್ಲಿ ಸೂರ್ಯಕುಮಾರ್ ಯಾದವ್, ಅಭಿಷೇಕ್ ಶರ್ಮಾ , ತಿಲಕ್ ವರ್ಮಾ , ಸಂಜು ಸ್ಯಾಮ್ಸನ್ , ಶಿವಂ ದುಬೆ , ಇಶಾನ್ ಕಿಶನ್ , ಹಾರ್ದಿಕ್ ಪಾಂಡ್ಯ , ಅರ್ಷದೀಪ್ ಸಿಂಗ್, ಜಸ್ಪ್ರೀತ್ ಬುಮ್ರಾ , ಹರ್ಷಿತ್ ರಾಣಾ , ವರುಣ್ ಚಕ್ರವರ್ತಿ , ಕುಲದೀಪ್ ಯಾದವ್, ಆರ್.ಎಸ್ ಆಡಲಿದ್ದಾರೆ (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net