ಈ ಮೈಲಿಗಲ್ಲಿನ ಕುರಿತು ಮಾತನಾಡಿದ ಹೀರೋ ಮೋಟೋಕಾರ್ಪ್‌ನ ಕಾರ್ಯನಿರ್ವಾಹಕ ಅಧ್ಯಕ್ಷರಾದ ಡಾ. ಪವನ್ ಮುಂಜಾಲ್ ಅವರು , "ಕಳೆದ ಒಂದು ದಶಕದಲ್ಲಿ, ಹೀರೋ ಮೋಟೋಸ್ಪೋರ್ಟ್ಸ್ ಟೀಮ್ ರ‍್ಯಾಲಿಯು ಮಹತ್ವಾಕಾಂಕ್ಷೆಯಿಂದ ಜಾಗತಿಕವಾಗಿ ಗೌರವಿಸಲ್ಪಡುವ ರ‍್ಯಾಲಿ ರೇಸಿಂಗ್ ತಂಡವಾಗಿ ಬೆಳೆದಿದೆ ಮತ್ತು ಜಾಗತಿಕ ಮಟ್ಟದಲ್ಲಿ ಭಾರತವನ್ನು ಹೆಮ್ಮೆಯಿಂದ ಪ್ರತಿನಿಧಿಸುತ್ತಿದೆ. ಈ ಮೈಲಿಗಲ್ಲು ನಮ್ಮ ಹಿಂದಿನ ಸಾಧನೆಗಳನ್ನು ಆಚರಿಸುವ ಜೊತೆಗೆ ಭವಿಷ್ಯದ ನಮ್ಮ ದೃಷ್ಟಿಕೋನವನ್ನು ತೋರಿಸುತ್ತದೆ. ಎಎಸ್ಓ ಜೊತೆಗಿನ ನಮ್ಮ ಪಾಲುದಾರಿಕೆಯ ನವೀಕರಣವು ಜಾಗತಿಕ ರ‍್ಯಾಲಿ ರೇಸಿಂಗ್ ಕಡೆಗಿನ ನಮ್ಮ ದೀರ್ಘಕಾಲೀನ ಬದ್ಧತೆಯನ್ನು ಬಲಪಡಿಸುತ್ತದೆ. ಇದಲ್ಲದೆ, ಇಂಡಿಯಾಸ್ ನೆಕ್ಸ್ಟ್ ಡಕಾರ್ ಹೀರೋ ಕಾರ್ಯಕ್ರಮವು, ಭಾರತದಲ್ಲಿ ಅನ್ವೇಷಿಸಲು ಮತ್ತು ಪೋಷಿಸಲು ಕಾಯುತ್ತಿರುವ ಅಪಾರವಾದ ಮೋಟಾರ್- ಸ್ಪೋರ್ಟ್ಸ್ ಪ್ರತಿಭೆಗಳಿವೆ ಎಂಬ ನಮ್ಮ ನಂಬಿಕೆಯನ್ನು ಪ್ರತಿಬಿಂಬಿಸುತ್ತದೆ.