ಪಾಕ್ ಎದುರು ಭಾರತ ಅಭಿಯಾನ ಶುರು: ವಿಂಡೀಸ್ ಸಾಧನೆ ಸರಿಗಟ್ಟುವುದೇ ಹರ್ಮಾನ್‌ಪ್ರೀತ್ ಪಡೆ?

ಪಾಕ್ ಎದುರು ಭಾರತ ಅಭಿಯಾನ ಶುರು:  ವಿಂಡೀಸ್ ಸಾಧನೆ ಸರಿಗಟ್ಟುವುದೇ ಹರ್ಮಾನ್‌ಪ್ರೀತ್ ಪಡೆ?
ಪಾಕ್ ಎದುರು ಭಾರತ ಅಭಿಯಾನ ಶುರು: ವಿಂಡೀಸ್ ಸಾಧನೆ ಸರಿಗಟ್ಟುವುದೇ ಹರ್ಮಾನ್‌ಪ್ರೀತ್ ಪಡೆ?
Published on
ಬರ್ಮಿಂಗ್‌ಹ್ಯಾಂ: ಕಳೆದ ವರ್ಷ ತವರಿನಲ್ಲಿ ಚೊಚ್ಚಲ ಬಾರಿ ಏಕದಿನ ವಿಶ್ವಕಪ್ ಪ್ರಶಸ್ತಿ ಗೆದ್ದ ಉತ್ಸಾಹದಲ್ಲಿರುವ ಭಾರತ ತಂಡ ಐಸಿಸಿ ಮಹಿಳೆಯರ ಟಿ20 ವಿಶ್ವಕಪ್‌ನಲ್ಲಿ ಭಾನುವಾರ ತನ್ನ ಅಭಿಯಾನ ಆರಂಭಿಸಲಿದೆ. ಹರ್ಮಾನ್‌ಪ್ರೀತ್ ಕೌರ್ ಪಡೆ ಎ ಗುಂಪಿನ ತನ್ನ ಮೊದಲ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ಸವಾಲು ಎದುರಿಸಲಿದ್ದು, ಶುಭಾರಂಭದ ತವಕದಲ್ಲಿದೆ.
2024ರ ವಿಶ್ವಕಪ್‌ನಲ್ಲಿ ಪಾಕ್ ಆರು ವಿಕೆಟ್‌ಗಳಿಂದ ಗೆದ್ದ ದಾಖಲೆ ಜತೆಗೆ ಈ ಬಾರಿ ಸಮತೋಲನದಿಂದ ಕೂಡಿರುವ ಭಾರತ ತಂಡ ಗೆಲುವಿನ ಫೇವರಿಟ್ ಎನಿಸಿದೆ. ಐಸಿಸಿ ಟೂರ್ನಿಗೆ ಮುನ್ನ ಇಂಗ್ಲೆಂಡ್ ವಿರುದ್ಧ ಟಿ20 ಸರಣಿ ಸೋತ ಹಿನ್ನಡೆ ಎದುರಿಸಿರುವ ಭಾರತಕ್ಕೆ ಸ್ಮತಿ ಮಂದನಾ, ಶೆಫಾಲಿ ವರ್ಮ ಅವರಿಂದ ಹೆಚ್ಚಿನ ಕೊಡುಗೆ ಬೇಕಿದೆ. ಕಳೆದ ೆಬ್ರವರಿಯಲ್ಲಿ ಆಸ್ಟ್ರೇಲಿಯಾ ಎದುರು 82 ರನ್‌ಗಳಿಸಿದ ನಂತರದ ಆರು ಇನಿಂಗ್ಸ್‌ಗಳಲ್ಲಿ ಸ್ಮತಿ ಮಂದನಾ 13, 12, 37, 0, 32, 8 ರನ್ ಕಲೆಹಾಕಿದ್ದು, ಶೆಫಾಲಿ ಕಳೆದ 5 ಇನಿಂಗ್ಸ್‌ಗಳಲ್ಲಿ 9,4,2,22,11 ರನ್‌ಗಳಿಸಿದ್ದಾರೆ.
ಾತಿಮಾ ಸನಾ ನೇತೃತ್ವದ ಪಾಕಿಸ್ತಾನ ಎದುರು ಭಾರತ ಬ್ಯಾಟಿಂಗ್ ವಿಭಾಗಕ್ಕೆ ಸವಾಲು ಎದುರಾಗಲಿದೆ. ಜೆಮೀಮಾ ರೋಡ್ರಿಗಸ್, ಹರ್ಮಾನ್‌ಪ್ರೀತ್ ಅಭ್ಯಾಸ ಪಂದ್ಯಗಳಲ್ಲಿ ಉತ್ತಮ ಲಯದಲ್ಲಿರುವುದು ಸಾಬೀತುಪಡಿಸಿದ್ದಾರೆ.
ಬೌಲಿಂಗ್‌ನಲ್ಲಿ ಅರುಂಧತಿ ರೆಡ್ಡಿ, ಕನ್ನಡತಿ ಶ್ರೇಯಾಂಕಾ ಪಾಟೀಲ್, ಶ್ರೀಚರಣಿ ಜತೆಗೆ ಆಲ್ರೌಂಡರ್ ದೀಪ್ತಿ ಶರ್ಮ ಬಲ ತುಂಬಲಿದ್ದಾರೆ.ಫಾತಿಮಾ ಸನಾ ಇತ್ತೀಚೆಗೆ ಜಿಂಬಾಬ್ವೆ ಎದುರು ವೇಗದ ಅರ್ಧಶತಕ (15 ಎಸೆತಗಳಲ್ಲಿ) ಸಾಧಕಿ ಎಂಬ ದಾಖಲೆ ಬರೆದಿದ್ದಾರೆ.
ಮುಖಾಮುಖಿ: 16
ಭಾರತ: 13
ಪಾಕ್: 3
ಟಿ20 ವಿಶ್ವಕಪ್‌ನಲ್ಲಿ
ಮುಖಾಮುಖಿ: 8
ಭಾರತ: 6
ಪಾಕಿಸ್ತಾನ: 2
ಆರಂಭ: ರಾತ್ರಿ 7.00
ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್, ಜಿಯೋ ಹಾಟ್‌ಸ್ಟಾರ್
ವಿಂಡೀಸ್ ಸಾಧನೆ ಸರಿಗಟ್ಟುವರೇ ಮಹಿಳೆಯರು?
ಭಾನುವಾರ ಅಭಿಯಾನ ಆರಂಭಿಸಲಿರುವ ಹರ್ಮಾನ್‌ಪ್ರೀತ್ ಕೌರ್ ಪಡೆ ಈ ಬಾರಿ ಪ್ರಶಸ್ತಿ ಗೆದ್ದರೆ, ಭಾರತ ಒಂದೇ ವರ್ಷ ಪುರುಷ-ಮಹಿಳಾ ಟಿ20 ವಿಶ್ವಕಪ್ ಗೆದ್ದ 2ನೇ ತಂಡವೆನಿಸಲಿದೆ. 2016ರಲ್ಲಿ ಭಾರತದ ಆತಿಥ್ಯದಲ್ಲಿ ನಡೆದಿದ್ದ ಟೂರ್ನಿಯಲ್ಲಿ ವೆಸ್ಟ್ ಇಂಡೀಸ್ ಪುರುಷರ ಹಾಗೂ ಮಹಿಳಾ ತಂಡಗಳು ಪ್ರಶಸ್ತಿ ಜಯಿಸಿ ದಾಖಲೆ ಬರೆದಿದ್ದವು. ಕಳೆದ ಆವೃತ್ತಿಯಲ್ಲೂ ಈ ಸಾಧನೆ ಸರಿಗಟ್ಟುವ ಅವಕಾಶ ಹರ್ಮಾನ್‌ಪ್ರೀತ್ ಪಡೆ ಮುಂದಿತ್ತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net