'ಫೆಸ್ಟಿವಲ್ ಆಫ್ ಡಿಸೆಬಿಲಿಟಿ ಕ್ರಿಕೆಟ್' ಸರಣಿಯ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಭಾರತ, ಅರ್ಜುನ್ ಗವಾರೆ, ಮೇಜರ್ ಮಗ್ರೆ ಹಾಗೂ ಸಾಯಿ ಆಕಾಶ್ ಅವರ ಬಿರುಸಿನ ಬ್ಯಾಟಿಂಗ್ ನೆರವಿನಿಂದ 4 ವಿಕೆಟ್ ನಷ್ಟಕ್ಕೆ 206 ರನ್‌ಗಳ ಮೊತ್ತ ಕಲೆಹಾಕಿತು. ಈ ಬೃಹತ್ ಗುರಿ ಬೆನ್ನಟ್ಟಿದ ಇಂಗ್ಲೆಂಡ್ ಬ್ಯಾಟರ್ಗಳು ಭಾರತೀಯ ಬೌಲರ್‌ಗಳ ಮಾರಕ ದಾಳಿಗೆ ತತ್ತರಿಸಿದರು. ಕೇವಲ 88 ರನ್‌ಗೆ ಆಲ್ಔಟ್ ಆದರು. ಈ ಮೂಲಕ 118 ರನ್‌ಗಳ ಭರ್ಜರಿ ಗೆಲುವು ದಾಖಲಿಸಿದ ಟೀಮ್ ಇಂಡಿಯಾ, ಒಟ್ಟು ಏಳು ಪಂದ್ಯಗಳ ಸರಣಿಯಲ್ಲಿ 4-3 ಅಂತರದಲ್ಲಿ ಗೆಲುವು ಕಂಡಿತು,(ಏಜೆನ್ಸೀಸ್).