ಶ್ರೀಲಂಕಾ ಎದುರಿನ ಟೆಸ್ಟ್​ ಸರಣಿಯಲ್ಲಿ ಭಾರತಕ್ಕೆ 'ಕಿಂಗ್​ ಆಫ್​ ಗಾಲೆ' ಸವಾಲು!

ಶ್ರೀಲಂಕಾ ಎದುರಿನ ಟೆಸ್ಟ್​ ಸರಣಿಯಲ್ಲಿ ಭಾರತಕ್ಕೆ 'ಕಿಂಗ್​ ಆಫ್​ ಗಾಲೆ' ಸವಾಲು!
ಶ್ರೀಲಂಕಾ ಎದುರಿನ ಟೆಸ್ಟ್​ ಸರಣಿಯಲ್ಲಿ ಭಾರತಕ್ಕೆ 'ಕಿಂಗ್​ ಆಫ್​ ಗಾಲೆ' ಸವಾಲು!
Published on

ಗಾಲೆ: ಕಳೆದ 2 ವರ್ಷಗಳಲ್ಲಿ ಭಾರತ ತಂಡ ತವರು ನೆಲದಲ್ಲೇ ಪ್ರವಾಸಿ ನ್ಯೂಜಿಲೆಂಡ್​, ದಕ್ಷಿಣ ಆಫ್ರಿಕಾ ತಂಡಗಳ ಸ್ಪಿನ್​ ದಾಳಿಯನ್ನು ಸಮರ್ಥವಾಗಿ ಎದುರಿಸಲಾಗದೆ ಮುಗ್ಗರಿಸಿತ್ತು. ಇದೀಗ ಶ್ರೀಲಂಕಾ ನೆಲದಲ್ಲಿ ಟೆಸ್ಟ್​ ಸರಣಿ ಆಡಲು ಸಜ್ಜಾಗುತ್ತಿರುವ ಭಾರತ ತಂಡಕ್ಕೆ ಆತಿಥೇಯರ ಪ್ರಮುಖ ಸ್ಪಿನ್​ ಅಸ್ತ್ರದ ಸವಾಲು ಎದುರಾಗುವ ಸಾಧ್ಯತೆ ಇದೆ.

ಲಂಕಾ ಸ್ಪಿನ್​ ವಿಭಾಗದ ಪ್ರಮುಖ ಬೌಲರ್​ ಪ್ರಭಾತ್​ ಜಯಸೂರ್ಯ (

Prabath Jayasuriya

) ಗಾಲೆಯಲ್ಲಿ ಬಲಿಷ್ಠವಾದ ದಾಖಲೆ ಹೊಂದಿದ್ದು, "ಕಿಂಗ್​ ಆಫ್​ ಗಾಲೆ' (

King of Galle

) ಎಂಬ ಬಣ್ಣನೆಗೂ ಒಳಗಾಗಿದ್ದಾರೆ. 2022ರ ಜುಲೈನಲ್ಲಿ ಇದೇ ಮೈದಾನದಲ್ಲಿ ಟೆಸ್ಟ್​ ಕ್ರಿಕೆಟ್​ಗೆ ಪದಾರ್ಪಣೆ ಮಾಡಿದ್ದ ಪ್ರಭಾತ್​, ಇಲ್ಲಿ ಇದುವರೆಗೆ ಆಡಿರುವ 11 ಟೆಸ್ಟ್​ಗಳಲ್ಲಿ 81 ವಿಕೆಟ್​ ಕಬಳಿಸಿ, ಪ್ರವಾಸಿ ತಂಡಗಳನ್ನು ಕಾಡಿದ್ದಾರೆ. 34 ವರ್ಷದ ಪ್ರಭಾತ್​ ಒಟ್ಟಾರೆ 23 ಟೆಸ್ಟ್​ಗಳಲ್ಲಿ 125 ವಿಕೆಟ್​ ಕಬಳಿಸಿದ್ದಾರೆ. ಅಂದರೆ ಅವರು ಬೇರೆಡೆ ಆಡಿದ 12 ಟೆಸ್ಟ್​ಗಳಲ್ಲಿ 44 ವಿಕೆಟ್​ ಮಾತ್ರ ಪಡೆದಿದ್ದಾರೆ.


ಐಸಿಸಿ ವಿಶ್ವ ಟೆಸ್ಟ್​ ಚಾಂಪಿಯನ್​ಷಿಪ್​ನಲ್ಲೂ ಪ್ರಭಾತ್​ ಲಂಕಾದ ಗರಿಷ್ಠ ವಿಕೆಟ್​ ಸಾಧಕರಾಗಿದ್ದು, 20 ಟೆಸ್ಟ್​ಗಳಲ್ಲಿ 100 ವಿಕೆಟ್​ ಗಳಿಸಿದ್ದಾರೆ. ಪ್ರಭಾತ್​ಗೆ ಭಾರತದ ವಿರುದ್ಧ ಇದು ಮೊದಲ ಟೆಸ್ಟ್​ ಆಗಿರಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net