ಮತ್ತೊಂದೆಡೆ, ಗಾಲೆಯಲ್ಲಿ ನಡೆಯಲಿರುವ ಮೊದಲ ಟೆಸ್ಟ್ ಪಂದ್ಯಕ್ಕಾಗಿ ಭಾರತ ತಂಡದ ಸ್ಪಿನ್ ವಿಭಾಗದ ಆಯ್ಕೆಯೂ ತೀವ್ರ ಕುತೂಹಲ ಮೂಡಿಸಿದೆ. ತಂಡದಲ್ಲಿರುವ ನಾಲ್ವರು ಸ್ಪಿನ್ನರ್‌ಗಳು ತಮ್ಮದೇ ಆದ ಪ್ರತ್ಯೇಕ ವಿಶೇಷತೆಯನ್ನು ಹೊಂದಿದ್ದಾರೆ ಎಂದು ತಿಳಿಸಿರುವ ಬಹುತುಲೆ, ಅಂತಾರಾಷ್ಟ್ರೀಯ ಮಟ್ಟದಲ್ಲಿ ರವೀಂದ್ರ ಜಡೇಜಾ ಅಪಾರ ಅನುಭವ ಹೊಂದಿದ್ದರೆ, ಮಾನವ್ ಸುತಾರ್ ಹಾಗೂ ದೇಶೀಯ ಕ್ರಿಕೆಟ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿರುವ ಸಾರಾಂಶ ಜೈನ್ ಕೂಡ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಂಡು ಉತ್ತಮ ಬೌಲಿಂಗ್‌ನಿಂದ ಪ್ರಭಾವ ಬೀರುತ್ತಿದ್ದಾರೆ ಎಂದು ತಿಳಿಸಿದ್ದಾರೆ.