ಭಾರತ vs ದಕ್ಷಿಣ ಆಫ್ರಿಕಾ ಮೊದಲ ಟೆಸ್ಟ್​: ಜಡೇಜಾ ದಾಳಿಗೆ ಹರಿಣಗಳು ದಿಕ್ಕಾಪಾಲು | IND vs SA

ಸ್ಪಿನ್ನರ್​ ರವೀಂದ್ರ ಜಡೇಜಾ ವಿಕೆಟ್​ ಪಡೆದ ನಂತರ ಸಂಭ್ರಮಿಸುತ್ತಿರುವ ಕ್ಷಣ Ravindra Jadeja celebrates
ಸ್ಪಿನ್ನರ್​ ರವೀಂದ್ರ ಜಡೇಜಾ ವಿಕೆಟ್​ ಪಡೆದ ನಂತರ ಸಂಭ್ರಮಿಸುತ್ತಿರುವ ಕ್ಷಣ Ravindra Jadeja celebrates
Published on
ಕೋಲ್ಕತ್ತಾ: ಕೋಲ್ಕತ್ತಾದಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ(IND vs SA) ವಿರುದ್ಧದ 2 ನೇ ದಿನದಾಟದಲ್ಲಿ ಭಾರತ ಮೆಲುಗೈ ಸಾಧಿಸಿದೆ. ಅಲ್ಲದೆ, ಎರಡನೇ ಇನ್ನಿಂಗ್ಸ್‌ನಲ್ಲಿ ಹರಿಣಗಳು 93 ರನ್​ಗಳಿಗೆ 7 ವಿಕೆಟ್​ ಕಳೆದುಕೊಂಡಿದೆ.
ಎರೆಡನೇಯ ದಿನದಲ್ಲಿ ಬ್ಯಾಟಿಂಗ್​ ಬಂದ ಕೆ.ಎಲ್​ ರಾಹುಲ್(39 ರನ್) ಮತ್ತು ವಾಷಿಂಗ್ಟನ್ ಸುಂದರ್ 29ರನ್​ ಗಳಿಸಿ ವಿಕೆಟ್​ ಒಪ್ಪಿಸಿದರು. ನಂತರ ಬಂದ ನಾಯಕ ಶುಭ್ಮನ್​ ಗಿಲ್​ 4 ರನ್​ ರಿಟೈರ್​ ಹಾರ್ಟ್ ಆಗಿ ಹೊರನಡೆದರು. ಮಧ್ಯಮಾ ಕ್ರಮಂಕದಲ್ಲಿ ಬ್ಯಾಟಿಂಗ್​ ಮಾಡಲು ಬಂದ ಪಂತ್​ 27 ರನ್​, ರವೀಂದ್ರ ಜಡೇಜಾ 27, ಧ್ರುವ್ ಜುರೆಲ್ 14 ರನ್​ಗಳಿಸಿ ತಂಡದ ದಿಢೀರ್​ ಕುಸಿತಕ್ಕೆ ಕಾರಣರಾದರು.
ಬೌಲಿಂಗ್​ನಲ್ಲಿ ಹರಿಣಗಳ ಪರವಾಗಿ ಮಾರ್ಕೊ ಜಾನ್ಸೆನ್​ 3 ವಿಕೆಟ್​ ಪಡೆದುಕೊಂಡರು. ಸ್ಪಿನ್ನರ್​ಗಳಾದ ಹಾರ್ಮರ್ 4 ವಿಕೆಟ್​ ಕಬಳಿಸಿದರೆ, ಕೇಶವ್​ ಮಹಾರಾಜ್​ 3 ವಿಕೆಟ್​ ಕಿತ್ತು ಭಾರತ 189 ರನ್​ಗಳಿಗೆ ಅಲೌಟ್​ ಆಗುವಂತೆ ಮಾಡಿದರು.
ಭಾರತ ಇನ್ನಿಂಗ್ಸ್​ ಮುಗಿದ ನಂತರ 2 ನೇಯ ಇನ್ನಿಂಗ್ಸ್​ ಆರಂಭಿಸಿದ ದಕ್ಷಿಣ ಆಫ್ರಿಕಾವು ಆರಂಭಿಕ ಆಟಗಾರ ರಿಕಲ್ಟನ್ 11 ರನ್​ಗಳಿಸಿ ಕುಲ್ದೀಪ್ ಯಾದವ್​ಗೆ ವಿಕೆಟ್​ ಒಪ್ಪಿಸಿದರು. ನಂತರ ಬಂದ ಬ್ಯಾಟರ್​ ಜಡೇಜಾ ಸ್ಪಿನ್​ ದಾಳಿಗೆ ಐಡೆನ್ ಮಾರ್ಕ್ರಾಮ್ 4 ರನ್, ವಿಯಾನ್ ಮುಲ್ಡರ್ 11 ರನ್​, ಟೋನಿ ಡಿ ಜೋರ್ಜಿ 2 ರನ್​ ಮತ್ತು ಟ್ರಿಸ್ಟಾನ್ ಸ್ಟಬ್ಸ್ 5 ರನ್​ಗಳಿಸಿ ಪೇವಿಯನ್​ ಸೇರಿಕೊಂಡರು.
ಎರೆಡನೇ ದಿನದಾಟದ ಅಂತ್ಯಕ್ಕೆ ದಕ್ಷಿಣ ಆಫ್ರಿಕಾ 93 ರನ್​ 7 ಕಳೆದುಕೊಂಡಿದೆ. ಭಾರತದ ಪರವಾಗಿ, ರವೀಂದ್ರ ಜಡೇಜಾ 4 ವಿಕೆಟ್​, ಕುಲದೀಪ್ ಯಾದವ್ 2 ವಿಕೆಟ್​ ಮತ್ತು ಅಕ್ಷರ್ ಪಟೇಲ್ 1 ವಿಕೆಟ್ ಪಡೆದಿದ್ದಾರೆ. ಹರಿಣಗಳ ನಾಯಕ ಟೆಂಬಾ ಬವುಮಾ 29 ರನ್​ ಗಳಿಸಿ ಮೂರನೇ ದಿನಕ್ಕೆ ಬ್ಯಾಟಿಂಗ್​ ಕಾಯ್ದುಕೊಂಡಿದ್ದಾರೆ,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net