'ರೋಕೊ' ಜೋಡಿ ಆಡದಿರುವುದೇ... ಮೊದಲ ಟಿ20 ಪಂದ್ಯಕ್ಕೂ ಮುನ್ನ ಐಡೆನ್ ಮಾರ್ಕ್ರಾಮ್ ಹೇಳಿಕೆ ವೈರಲ್
IND vs SA ಮೊದಲ ಟಿ20 ಪಂದ್ಯ
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಇಂದು ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟಿ20 ಪಂದ್ಯ
ಕಟಕ್ನಲ್ಲಿ ನಡೆಯಲಿದೆ ಮೊದಲ ಟಿ20
ಹರಿಣರ ಪಡೆಯ ಕ್ಯಾಪ್ಟನ್ ಐಡೆನ್ ಮಾರ್ಕ್ರಾಮ್ ಹೇಳಿಕೆ ವೈರಲ್
ನವದೆಹಲಿ: ಇಂದು ಕಟಕ್ ಕ್ರೀಡಾಂಗಣದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟಿ20 ಪಂದ್ಯ ನಡೆಯಲಿದ್ದು, ಟೀಮ್ ಇಂಡಿಯಾ ಶುಭಾರಂಭಕ್ಕೆ ಎದುರುನೋಡುತ್ತಿದೆ. ಇತ್ತೀಚೆಗಷ್ಟೇ, ಏಕದಿನ ಸರಣಿಯಲ್ಲಿ 2-1 ಅಂತರದಲ್ಲಿ ಭಾರತ ಸರಣಿ ಗೆದ್ದು ಬೀಗಿದ್ದು, ತಂಡದ ಉತ್ಸಾಹವನ್ನು ಇನ್ನೊಂದು ಹಂತಕ್ಕೆ ಕೊಂಡೊಯ್ದಿದೆ. ಇದರಲ್ಲಿ, ಎರಡನೇ ಮಾತಿಲ್ಲ. ಈಗ ಮೊದಲ ಪಂದ್ಯಕ್ಕೆ ಎರಡು ತಂಡಗಳು ಭರ್ಜರಿ ತಯಾರಿಗಳನ್ನು ಮಾಡಿಕೊಂಡಿದ್ದು, ಹರಿಣರ ಕ್ಯಾಪ್ಟನ್ ಐಡೆನ್ ಮಾರ್ಕ್ರಾಮ್ ನೀಡಿದ ಹೇಳಿಕೆ ಸದ್ಯ ಜಾಲತಾಣಗಳಲ್ಲಿ ಹರಿದಾಡಿದೆ.
ಪಂದ್ಯ ಆರಂಭಕ್ಕೂ ಒಂದು ದಿನದ ಮೊದಲು ಸುದ್ದಿಗಾರರೊಂದಿಗೆ ಮಾತನಾಡಿದ ದಕ್ಷಿಣ ಆಫ್ರಿಕಾ ತಂಡದ ನಾಯಕ, "ಟಿ20 ಸರಣಿಗೆ ನಾವು ಸಿದ್ಧವಾಗಿದ್ದೇವೆ. 20 ಓವರ್ ಫಾರ್ಮೆಟ್ನಲ್ಲಿ ಟೀಮ್ ಇಂಡಿಯಾ ಒಂದು ಬಲಿಷ್ಠ ತಂಡವಾಗಿದೆ. ಖುಷಿ ವಿಷಯ ಏನೆಂದರೆ, ಟಿ20 ತಂಡದಲ್ಲಿ ರೋಹಿತ್ ಶರ್ಮ ಮತ್ತು ವಿರಾಟ್ ಕೊಹ್ಲಿ ಇಲ್ಲದಿರುವುದು. ಆದರೂ ಭಾರತ ತಂಡ ಬಲಿಷ್ಠವಾಗಿದೆ" ಎಂದರು.
"ನಮಗೆ ಇಂತದ್ದೇ, ಅಂತದ್ದೇ ಅಂತ ಯಾವುದೇ ನಿರ್ದಿಷ್ಟ ಪ್ಲ್ಯಾನ್ಗಳು ಇಲ್ಲ. ಇದು ಟಿ20 ಕ್ರಿಕೆಟ್ ಆಗಿರುವುದರಿಂದ ಖಂಡಿತ ಆಟದಲ್ಲಿ ಮಜಾವಿರಲಿದೆ. ಇಲ್ಲಿ ಆಟಗಾರರು ತಮ್ಮನ್ನು ತಾವು ಸಂಪೂರ್ಣವಾಗಿ ತೊಡಗಿಸಿಕೊಳ್ಳಬೇಕು ಮತ್ತು ಆಟವನ್ನು ಆನಂದಿಸಿ, ತಮ್ಮ ಅತ್ಯುತ್ತಮ ಕೌಶಲ್ಯಗಳನ್ನು ಪ್ರದರ್ಶಿಸಬೇಕು. ಪಿಚ್ ನಮ್ಮ ಪರವಿದ್ದರೆ ಸೂಕ್ತ ಎಂಬ ಭಾವನೆ ನಮ್ಮಲ್ಲಿ ಮೂಡುತ್ತದೆ. ಕಾರಣ, ಹೆಚ್ಚುವರಿ ರನ್ಗಳನ್ನು ಕಲೆಹಾಕಬಹದು ಎಂದು. ಅಕಸ್ಮಾತ್ ಇಲ್ಲವಾದರೆ, ಆಟದ ನಡುವೆಯೇ ಪಿಚ್ಗೆ ಹೊಂದಿಕೊಳ್ಳುತ್ತೇವೆ" ಎಂದು ಹೇಳಿದ್ದಾರೆ,(ಏಜೆನ್ಸೀಸ್).