ಅಂದಹಾಗೆ, 2016 ಮತ್ತು 2018ರ ನಡುವಿನ ಅವಧಿಯಲ್ಲಿ ಕೊಹ್ಲಿ ಸತತ ಏಕದಿನ ಶತಕಗಳನ್ನು ಸಿಡಿಸಿದ್ದರು. ಇದಾದ ಬಳಿಕ ಅವರ ಬ್ಯಾಟ್ನಿಂದ ಸತತವಾಗಿ ಶತಕಗಳು ಬಂದಿರಲಿಲ್ಲ. ಇದೀಗ ಬ್ಯಾಕ್ ಟು ಬ್ಯಾಕ್ 2 ಶತಕಗಳನ್ನು ಗಳಿಸಿದ್ದು, 11ನೇ ಬಾರಿ ಇದು ಮರುಕಳಿಸಿದೆ. ಏಕದಿನ ಸ್ವರೂಪದ ಇತಿಹಾಸದಲ್ಲೇ ಯಾವುದೇ ಓರ್ವ ಆಟಗಾರ ಇಷ್ಟೊಂದು ಶತಕಗಳನ್ನು ಗಳಿಸಿಲ್ಲ. ಏಕದಿನ ಶತಕಗಳ ಪಟ್ಟಿಯಲ್ಲಿ ಸಚಿನ್ ತೆಂಡೂಲ್ಕರ್‌ಗಿಂತ ನಾಲ್ಕು ಶತಕಗಳಲ್ಲಿ ಮುಂದಿದ್ದಾರೆ.