ಸರಣಿ ಸೋಲು ತಪ್ಪಿಸುವ ಒತ್ತಡದಲ್ಲಿ ಭಾರತ: ಗೆಲುವಿನ ಹುಡುಕಾಟದಲ್ಲಿ ಶ್ರೇಯಸ್-ಗಂಭೀರ್ ಜೋಡಿ!

ಸರಣಿ ಸೋಲು ತಪ್ಪಿಸುವ ಒತ್ತಡದಲ್ಲಿ ಭಾರತ: ಗೆಲುವಿನ ಹುಡುಕಾಟದಲ್ಲಿ ಶ್ರೇಯಸ್-ಗಂಭೀರ್ ಜೋಡಿ!
ಸರಣಿ ಸೋಲು ತಪ್ಪಿಸುವ ಒತ್ತಡದಲ್ಲಿ ಭಾರತ: ಗೆಲುವಿನ ಹುಡುಕಾಟದಲ್ಲಿ ಶ್ರೇಯಸ್-ಗಂಭೀರ್ ಜೋಡಿ!
Published on
ಬ್ರಿಸ್ಟಲ್: ಯುಕೆ ಪ್ರವಾಸದಲ್ಲಿ ಗೆಲುವಿನ ಖಾತೆ ತೆರೆಯಲು ಪರದಾಡುತ್ತಿರುವ ಭಾರತ ತಂಡ, ಇನ್ನೊಂದು ಸರಣಿ ಸೋಲು ತಪ್ಪಿಸುವ ಒತ್ತಡದಲ್ಲಿದೆ. ಶ್ರೇಯಸ್ ಅಯ್ಯರ್ ಪಡೆ ಗುರುವಾರ ಇಂಗ್ಲೆಂಡ್ ವಿರುದ್ಧ ನಾಲ್ಕನೇ ಟಿ20 ಪಂದ್ಯ ಆಡಲಿದ್ದು, ಸರಣಿ ಸಮಬಲ ಸಾಧಿಸುವ ಅವಕಾಶ ಜೀವಂತವಿರಿಸಲು ಗೆಲುವಿನ ಅನಿವಾರ‌್ಯತೆಯಲ್ಲಿದೆ.
ನಾಯಕನ ಸ್ಥಾನಕ್ಕೆ ಬಡ್ತಿ ಪಡೆದ ನಂತರ ಮೊದಲ ಗೆಲುವಿನ ಹುಡುಕಾಟದಲ್ಲಿರುವ ಶ್ರೇಯಸ್ ಅಯ್ಯರ್ ನಿರ್ಧಾರಗಳ ಜತೆಗೆ ಮುಖ್ಯ ಕೋಚ್ ಗಂಭೀರ್ ಮತ್ತು ಮುಖ್ಯ ಆಯ್ಕೆಗಾರ ಅಜಿತ್ ಅಗರ್ಕರ್ ನೇತೃತ್ವದ ಆಯ್ಕೆ ಸಮಿತಿ ಹಲವು ಟೀಕೆ ಎದುರಿಸುತ್ತಿವೆ. ಮೂರು ಪಂದ್ಯಗಳ ವೈಲ್ಯದ ನಂತರ ಹನ್ನೊಂದರ ಬಳಗದಿಂದ ಸಂಜು ಸ್ಯಾಮ್ಸನ್‌ರನ್ನು ಹೊರಗಿಟ್ಟ ನಂತರ, ಉಪನಾಯಕ ತಿಲಕ್ ವರ್ಮರನ್ನೂ ಕೈಬಿಡಬೇಕೆಂಬ ಅಭಿಪ್ರಾಯ ವ್ಯಕ್ತವಾಗಿದೆ.
2012ರ ನಂತರ ಇಂಗ್ಲೆಂಡ್ ವಿರುದ್ಧ ಟಿ20 ಸರಣಿ ಸೋಲದ ಅಜೇಯ ದಾಖಲೆಯನ್ನು ಉಳಿಸಿಕೊಳ್ಳಲು ಭಾರತಕ್ಕೆ ಗೆಲುವು ಅನಿವಾರ್ಯ ಎನಿಸಿದೆ. ವೈಭವ್ ಸೂರ್ಯವಂಶಿ, ಅಭಿಷೇಕ್ ಶರ್ಮ ಆರಂಭಿಕರಾಗಿ ಮುಂದುವರಿಯಲಿದ್ದು, ವಿಕೆಟ್ ಕೀಪರ್-ಬ್ಯಾಟರ್ ಆಗಿ ಇಶಾನ್ ಕಿಶನ್ ಮೇಲೆ ಹೆಚ್ಚಿನ ನಿರೀಕ್ಷೆ ಇದೆ. ತಿಲಕ್ ವರ್ಮ ರನ್‌ಗಳಿಸಲು ಪರದಾಡುತ್ತಿರುವುದು ಮಧ್ಯಮ ಕ್ರಮಾಂಕದಲ್ಲಿ ಸಮಸ್ಯೆ ಎನಿಸಿದೆ. ಬೌಲಿಂಗ್ ವಿಭಾಗದಲ್ಲಿಯೂ ವರುಣ್ ಚಕ್ರವರ್ತಿ ಆಡಿರುವ 2ರಲ್ಲಿ ಏಳು ಓವರ್ ಬೌಲಿಂಗ್ ನಡೆಸಿ, 1 ವಿಕೆಟ್ ಮಾತ್ರ ಕಬಳಿಸಿದ್ದಾರೆ.
ಆರಂಭ: ರಾತ್ರಿ 10.00
ನೇರಪ್ರಸಾರ: ಸೋನಿ ಸ್ಪೋರ್ಟ್ಸ್ ನೆಟ್‌ವರ್ಕ್
2026ರ ಟಿ20 ವಿಶ್ವಕಪ್ ಫೈನಲ್ ನಂತರ ಭಾರತ ತಂಡ ಸ್ಥಿತ್ಯಂತರದ ಹಾದಿಯಲ್ಲಿದ್ದು, ಹಿಂದಿನ ಸಾಧನೆಗಳ ಪುನರಾವರ್ತನೆಗೆ ಸ್ಪಲ್ಪ ಸಮಯ ಹಿಡಿಯಲಿದೆ. ಯಕೆ ಪ್ರವಾಸದಲ್ಲಿನ ಸೋಲುಗಳಿಗೆ ಆಟದ ಅರಿವಿನ ಕೊರತೆ ಮತ್ತು ಪರಿಸ್ಥಿತಿಗಳನ್ನು ಅರ್ಥಮಾಡಿಕೊಳ್ಳುವಲ್ಲಿನ ವೈಫಲ್ಯ ಕಾರಣ.
ಗೌತಮ್ ಗಂಭಿರ್, ಟೀಮ್ ಇಂಡಿಯಾ ಕೋಚ್.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net