ಭಾರತ ತಂಡವು ಬಲಿಷ್ಠ ಬ್ಯಾಟಿಂಗ್ ಲೈನ್ ಅಪ್ ಮತ್ತು ಬಲಿಷ್ಠ ಬೌಲಿಂಗ್ ದಾಳಿಯೊಂದಿಗೆ ಫೈನಲ್ ಪ್ರವೇಶಿಸಿದ್ದು, ನ್ಯೂಜಿಲೆಂಡ್ ವಿರುದ್ಧ ಸಂಘಟಿತ ದಾಳಿ ನಡೆಸಿದರೆ ಖಂಡಿತವಾಗಿ ಭಾರತ ಗೆಲ್ಲಲಿದೆ. ಆದರೆ ನ್ಯೂಜಿಲೆಂಡ್ನ ಬ್ಯಾಟರ್ಗಳಾದ ಫಿನ್ ಅಲೆನ್ ಮತ್ತು ಡೆವೊನ್ ಕಾನ್ವೇ ಉತ್ತಮ ಫಾರ್ಮನಲ್ಲಿದ್ದು ಇವರು ಉತ್ತಮ ಪ್ರದರ್ಶನ ನೀಡಿದರೆ ಭಾರತಕ್ಕೆ ಗೆಲುವು ಕಷ್ಟಕರವಾಗಬಹುದು. ಹಾಗೆಯೇ ಸೆಮಿ ಫೈನಲ್ನಲ್ಲಿ ಇಂಗ್ಲೆಂಡ್ ವಿರುದ್ಧ ಭಾರತದ ಬೌಲಿಂಗ್ ಕಳಪೆ ಮಟ್ಟದಲ್ಲಿದ್ದು, ಅದೇ ರೀತಿ ಫೈನಲ್ ಪಂದ್ಯದಲ್ಲಿ ಮಾಡಿದರೆ ಚಾಂಪಿಯನ್ ಪಟ್ಟ ಕಳೆದುಕೊಳ್ಳಬಹುದು,(ಏಜನ್ಸೀಸ್).