T20 Cricket: ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ಭಾರತದ ಮಹಿಳೆಯರಿಗೆ ಮತ್ತೆ ಸೋಲು

T20 Cricket: ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ಭಾರತದ ಮಹಿಳೆಯರಿಗೆ ಮತ್ತೆ ಸೋಲು
T20 Cricket: ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ಭಾರತದ ಮಹಿಳೆಯರಿಗೆ ಮತ್ತೆ ಸೋಲು
Published on
ಬೆನೋನಿ: ಬ್ಯಾಟಿಂಗ್​ ವಿಭಾಗದ ವೈಫಲ್ಯದಿಂದಾಗಿ ಭಾರತ ತಂಡ ಮಹಿಳೆಯರ ಟಿ20 ಸರಣಿಯಲ್ಲಿ ಆತಿಥೇಯ ದಕ್ಷಿಣ ಆಫ್ರಿಕಾ ವಿರುದ್ಧದ 5ನೇ ಹಾಗೂ ಅಂತಿಮ ಪಂದ್ಯದಲ್ಲೂ 23 ರನ್​ಗಳಿಂದ ಪರಾಭವಗೊಂಡಿದೆ. ಇದರೊಂದಿಗೆ ಭಾರತದ ಸರಣಿ ಸೋಲಿನ ಅಂತರ 1-4ಕ್ಕೆ ಹಿಗ್ಗಿದೆ.

ವಿಲ್ಲೋಮೂರ್​ ಪಾರ್ಕ್​ನಲ್ಲಿ ಸೋಮವಾರ ನಡೆದ ಅಂತಿಮ ಪಂದ್ಯದಲ್ಲಿ ಟಾಸ್​ ಗೆದ್ದು ಮೊದಲು ಬ್ಯಾಟಿಂಗ್​ಗೆ ಇಳಿದ ದ. ಆಫ್ರಿಕಾ ತಂಡ ನಾಯಕಿ ಲಾರಾ ವೊಲ್ವಾರ್ಡ್​ (92*ರನ್​, 56 ಎಸೆತ, 11 ಬೌಂಡರಿ, 2 ಸಿಕ್ಸರ್​) ಆಸರೆಯಲ್ಲಿ 6 ವಿಕೆಟ್​ಗೆ 155 ರನ್​ ಕಲೆಹಾಕಿತು. ರೇಣುಕಾ ಸಿಂಗ್​ (21ಕ್ಕೆ 2), ಶ್ರೀಚರಣಿ (22ಕ್ಕೆ 2), ದೀಪ್ತಿ ಶರ್ಮ (37ಕ್ಕೆ 2) ಹರಿಣಗಳಿಗೆ ನಿಯಂತ್ರಣ ಹೇರಿದರು. ಪ್ರತಿಯಾಗಿ ಭಾರತ 38 ರನ್​ಗಳಿಗೆ 3 ವಿಕೆಟ್​ ಕಳೆದುಕೊಂಡು ಆರಂಭಿಕ ಆಘಾತ ಎದುರಿಸಿತು. ನಂತರ ನಾಯಕಿ (
Harmanpreet Kaur) ಹರ್ಮಾನ್​ಪ್ರೀತ್​ ಕೌರ್​ (22), ಭಾರತಿ ಫುಲ್ಮಲಿ (40), ರಿಚಾ ಘೋಷ್​ (25*) ಹೋರಾಟದ ಹೊರತಾಗಿಯೂ 8 ವಿಕೆಟ್​ಗೆ 132 ರನ್​ ಗಳಿಸಲಷ್ಟೇ ಶಕ್ತಗೊಂಡಿತು.

ಸರಣಿಯಲ್ಲಿ ಒಟ್ಟು 330 ರನ್​ ಬಾರಿಸಿದ ವೊಲ್ವಾರ್ಡ್​ ಪಂದ್ಯಶ್ರೇಷ್ಠ ಪ್ರಶಸ್ತಿಯೊಂದಿಗೆ ಸರಣಿಶ್ರೇಷ್ಠ ಪ್ರಶಸ್ತಿಯನ್ನೂ ಬಾಚಿಕೊಂಡರು. ಸ್ಮೃತಿ ಮಂದನಾ ಕೊನೇ ಪಂದ್ಯದಿಂದಲೂ ವಿಶ್ರಾಂತಿ ಪಡೆದರು. ಭಾರತದ ಮಹಿಳೆಯರು ಇನ್ನು ಟಿ20 ವಿಶ್ವಕಪ್​ಗೆ ಪೂರ್ವಭಾವಿಯಾಗಿ ಮೇ 28ರಿಂದ ಇಂಗ್ಲೆಂಡ್​ನಲ್ಲಿ 3 ಪಂದ್ಯಗಳ ಟಿ20 ಸರಣಿ ಆಡಲಿದ್ದಾರೆ.

ದ. ಆಫ್ರಿಕಾ: 6 ವಿಕೆಟ್​ಗೆ 155 (ವೊಲ್ವಾರ್ಡ್​ 92*, ಲುಸ್​ 23, ಬ್ರಿಟ್ಸ್​ 2, ಟೆಯಾನ್​ 12, ಸಿನಾಲೊ 16*, ರೇಣುಕಾ 21ಕ್ಕೆ 2, ಶ್ರೀಚರಣಿ 22ಕ್ಕೆ 2, ದೀಪ್ತಿ 37ಕ್ಕೆ 2). ಭಾರತ: 8 ವಿಕೆಟ್​ಗೆ 132(ಶೆಫಾಲಿ 4, ಅನುಷ್ಕಾ 17, ಜೆಮೀಮಾ 1, ಹರ್ಮಾನ್​ಪ್ರೀತ್​ 22, ಭಾರತಿ 40, ದೀಪ್ತಿ 8, ರಿಚಾ 25*, ಡಿ ಕ್ಲರ್ಕ್​ 26ಕ್ಕೆ 2, ಮ್ಲಾಬಾ 15ಕ್ಕೆ 2).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net