ಮಹಿಳಾ ಟಿ20 ವಿಶ್ವಕಪ್: ಭಾರತಕ್ಕೆ ಇಂದು ದ. ಆಫ್ರಿಕಾ ಸವಾಲು; ಗೆದ್ದರೆ ಸೆಮೀಸ್​ ಹಾದಿ ಸುಗಮ!

ಮಹಿಳಾ ಟಿ20 ವಿಶ್ವಕಪ್: ಭಾರತಕ್ಕೆ ಇಂದು ದ. ಆಫ್ರಿಕಾ ಸವಾಲು; ಗೆದ್ದರೆ ಸೆಮೀಸ್​ ಹಾದಿ ಸುಗಮ!
ಮಹಿಳಾ ಟಿ20 ವಿಶ್ವಕಪ್: ಭಾರತಕ್ಕೆ ಇಂದು ದ. ಆಫ್ರಿಕಾ ಸವಾಲು; ಗೆದ್ದರೆ ಸೆಮೀಸ್​ ಹಾದಿ ಸುಗಮ!
Published on
ಮ್ಯಾಂಚೆಸ್ಟರ್​: ಸತತ ಎರಡು ಜಯದೊಂದಿಗೆ 10ನೇ ಆವೃತ್ತಿಯ ಮಹಿಳಾ ಟಿ20 ವಿಶ್ವಕಪ್​ನಲ್ಲಿ (ICC Women''s T20 World Cup) ಭರ್ಜರಿ ಆರಂಭ ಕಂಡಿರುವ ಭಾರತ ತಂಡ, ಕಳೆದ 2 ಆವೃತ್ತಿಯ ರನ್ನರ್​ಅಪ್​ ದ. ಆಫ್ರಿಕಾ ವಿರುದ್ಧ ಭಾನುವಾರ ಓಲ್ಡ್​ ಟ್ರಾಫರ್ಡ್​ನಲ್ಲಿ ಸೆಣಸಲಿದೆ. ಹರ್ಮಾನ್​ಪ್ರೀತ್​ ಕೌರ್​ ಪಡೆ ಗೆಲುವಿನ ಹ್ಯಾಟ್ರಿಕ್​ ಸಾಧಿಸಿದರೆ ಸೆಮಿಫೈನಲ್​ ಹಾದಿ ಸುಗಮವಾಗಲಿದೆ.
ಭಾರತ ಮೊದಲ 2 ಪಂದ್ಯಗಳಲ್ಲೂ ಬಲಿಷ್ಠ ಬ್ಯಾಟಿಂಗ್​ ನಿರ್ವಹಣೆ ತೋರಿದ್ದು, ಪಾಕ್​ ವಿರುದ್ಧ 64 ಮತ್ತು ನೆದರ್ಲೆಂಡ್​ ವಿರುದ್ಧ 95 ರನ್​ಗಳಿಂದ ಗೆಲುವು ಸಾಧಿಸಿದೆ. ಸ್ಮೃತಿ ಮಂದನಾ, ಶೆಫಾಲಿ ವರ್ಮ, ರಿಚಾ ಘೋಷ್​ ದಿಟ್ಟ ಬ್ಯಾಟಿಂಗ್​ನಿಂದ ಗಮನಸೆಳೆದಿದ್ದರೆ, ದೀಪ್ತಿ ಶರ್ಮ, ಶ್ರೀಚರಣಿ, ನಂದಿನಿ ಶರ್ಮ ಬೌಲಿಂಗ್​ನಲ್ಲಿ ಮಿಂಚಿದ್ದಾರೆ. ಕನ್ನಡತಿ ಶ್ರೇಯಾಂಕಾ ಪಾಟೀಲ್​ ಗಾಯದಿಂದ ಹೊರಬಿದ್ದಿರುವುದು ಹಿನ್ನಡೆಯಾಗಿದ್ದು, ಅವರ ಸ್ಥಾನವನ್ನು ರಾಧಾ ಯಾದವ್​ ತುಂಬುವ ನಿರೀಕ್ಷೆ ಇದೆ. ಏಕದಿನ ವಿಶ್ವಕಪ್​ ತಾರೆ ಜೆಮೀಮಾ ರೋಡ್ರಿಗಸ್​ (1, 19) ಮೊದಲ 2 ಪಂದ್ಯಗಳಲ್ಲಿ ರನ್​ಬರ ಎದುರಿಸಿದ್ದು, ಈ ಬಾರಿ ಲಯಕ್ಕೆ ಮರಳುವ ತವಕದಲ್ಲಿದ್ದಾರೆ.ಆ

ಮತ್ತೊಂದೆಡೆ ಲಾರಾ ವೊಲ್ವಾರ್ಡ್​ ಪಡೆ, ಆಸೀಸ್​ ವಿರುದ್ಧದ ಮೊದಲ ಪಂದ್ಯದಲ್ಲಿ ಸೋತರೂ, ಪಾಕ್​ ವಿರುದ್ಧದ 2ನೇ ಪಂದ್ಯದಲ್ಲಿ ಗೆದ್ದು ಲಯಕ್ಕೆ ಮರಳಿದೆ. ಹರಿಣಗಳಿಗೆ ಸೆಮೀಸ್​ ಆಸೆ ಜೀವಂತ ಉಳಿಸಿಕೊಳ್ಳಲು ಈ ಪಂದ್ಯದಲ್ಲಿ ಗೆಲುವು ಅಗತ್ಯವೆನಿಸಿದೆ.
*200: ಹರ್ಮಾನ್​ಪ್ರೀತ್​ ಕೌರ್​ಗೆ ಇದು 200ನೇ ಟಿ20 ಪಂದ್ಯವಾಗಿದೆ. ಅವರು ಪುರುಷ&ಮಹಿಳಾ ಕ್ರಿಕೆಟಿಗರಲ್ಲಿ ಈ ಸಾಧನೆ ಮಾಡಿದ ಮೊದಲಿಗರೆನಿಸಲಿದ್ದಾರೆ.
ಮುಖಾಮುಖಿ: 24
ಭಾರತ: 11
ದಣ ಆಫ್ರಿಕಾ: 10
ರದ್ದು: 3
*ಆರಂಭ: ರಾತ್ರಿ 7.00
*ನೇರಪ್ರಸಾರ: ಸ್ಟಾರ್​ ಸ್ಪೋರ್ಟ್ಸ್​, ಜಿಯೋ ಹಾಟ್​ಸ್ಟಾರ್​.
*ಇಂದಿನ ಇತರ ಪಂದ್ಯ
ಶ್ರೀಲಂಕಾ-ವೆಸ್ಟ್​ ಇಂಡೀಸ್​
ಆರಂಭ: ಮಧ್ಯಾಹ್ನ 3.00
ಎಲ್ಲಿ: ಬ್ರಿಸ್ಟಾಲ್​
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net