ಟೆಸ್ಟ್ ಸರಣಿ ಸೋಲುವ ಭಯದಲ್ಲಿ ಲಂಕಾ ಪಡೆ! ಇಂಜುರಿ ಸಮಸ್ಯೆಗಿಂತ ಆ ಒಬ್ಬ ಆಟಗಾರನ್ನದ್ದೇ ಭಯ | IND vs SL 2nd Test
IND vs SL 2ನೇ ಟೆಸ್ಟ್ ಪಂದ್ಯ
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಇಂದು ಶ್ರೀಲಂಕಾ ಮತ್ತು ಟೀಮ್ ಇಂಡಿಯಾ ನಡುವಿನ ಎರಡನೇ ಟೆಸ್ಟ್
ಕೊಲಂಬೊದ ಸಿಂಹಳೀಸ್ ಸ್ಪೋರ್ಟ್ಸ್ ಕ್ಲಬ್ನಲ್ಲಿ (SSC) ನಡೆಯುತ್ತಿರುವ ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ
ಭಾರತ ಎದುರು ಮಂಡಿಯೂರುವ ಭಯದಲ್ಲಿ ಶ್ರೀಲಂಕಾ ಪಡೆ
IND vs SL 2nd Test: ಕೊಲಂಬೊದ ಸಿಂಹಳೀಸ್ ಸ್ಪೋರ್ಟ್ಸ್ ಕ್ಲಬ್ನಲ್ಲಿ (SSC) ನಡೆಯುತ್ತಿರುವ ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಮೊದಲ ಪಂದ್ಯ ಗೆದ್ದು ಸರಣಿಯನ್ನು ವೈಟ್ವಾಶ್ ಮಾಡಲು ಕಾಯುತ್ತಿರುವ ಭಾರತಕ್ಕೆ ಭರ್ಜರಿ ಗೆಲುವು ಸನ್ನಿಹಿತವಾಗಿದೆ.
ಗಾಲೆಯಲ್ಲಿ ನಡೆದ ಮೊದಲ ಟೆಸ್ಟ್‌ನಲ್ಲಿ 165 ರನ್‌ಗಳ ಭರ್ಜರಿ ಜಯ ದಾಖಲಿಸಿರುವ ಟೀಮ್ ಇಂಡಿಯಾ ಇದೀಗ ಅದೇ ಗೆಲುವಿನ ಓಟ ಮುಂದುವರಿಸಿ ಸರಣಿಯನ್ನು 2-0 ಅಂತರದಲ್ಲಿ ಕ್ಲೀನ್ ಸ್ವೀಪ್ ಮಾಡುವ ಪಣತೊಟ್ಟಿದೆ. ಮತ್ತೊಂದೆಡೆ, ಮೊದಲ ಪಂದ್ಯದಲ್ಲಿ ಹೀನಾಯ ಸೋಲು ಕಂಡಿದ್ದ ಶ್ರೀಲಂಕಾ ಇನ್ನಷ್ಟು ಸಂಕಷ್ಟಕ್ಕೆ ಸಿಲುಕಿದೆ. ಸ್ಟಾರ್ ಬ್ಯಾಟರ್ಗಳಾದ ದಿನೇಶ್ ಚಾಂಡಿಮಲ್ ಮತ್ತು ಕುಸಾಲ್ ಮೆಂಡಿಸ್ ಇಬ್ಬರು ಗಾಯದಿಂದಾಗಿ ಸರಣಿಗೆ ಹೊರಗುಳಿದಿದ್ದಾರೆ. ಇನ್ ಫಾರ್ಮ್ ಪಾತುಮ್ ನಿಸ್ಸಾಂಕ ಕೂಡ ಅಲಭ್ಯರಾಗಿದ್ದಾರೆ.
ಹಿರಿಯ ಆಟಗಾರರ ಅಲಭ್ಯತೆಯಿಂದ ಯುವ ಆಟಗಾರರಾದ ಸಹನ್ ಅರಾಚ್ಚಿ ಮತ್ತು ಕಮಿಲ್ ಮಿಶ್ರಾಗೆ ತಂಡದ ಮಿಡಲ್ ಆರ್ಡರ್ನಲ್ಲಿ ಆಡುವ ಜವಾಬ್ದಾರಿಯನ್ನು ವಹಿಸಲಾಗಿದೆ. ಮೊದಲ ಟೆಸ್ಟ್‌ನಲ್ಲಿ ಭಾರತ ಗೆಲುವು ಸಾಧಿಸಿದ್ದರೂ, ಎಡಗೈ ಸ್ಪಿನ್ ಎದುರು ಆಡುವುದು ಕ್ಯಾಪ್ಟನ್ ಶುಭಮನ್ ಗಿಲ್‌ಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ಲಂಕಾ ಪಡೆಯ ಪ್ರಭಾತ್ ಜಯಸೂರ್ಯ ಅವರಿಗೆ ವಿಕೆಟ್ ಒಪ್ಪಿಸಿದ ಗಿಲ್, ರವೀಂದ್ರ ಜಡೇಜಾ ಮತ್ತು ಮಾನವ್ ಸುತಾರ್ ವಿರುದ್ಧ ನೆಟ್ ಪ್ರಾಕ್ಟೀಸ್ ನಲ್ಲಿ ಗಂಟೆಗಟ್ಟಲೆ ಶ್ರಮಿಸಿದ್ದಾರೆ.
ಈ ಮೂಲಕ ಇಂದು (ಆ.23) ನಡೆಯಲಿರುವ ಎರಡನೇ ಟೆಸ್ಟ್‌ನಲ್ಲಿ ಆದರೂ ಟೀಮ್ ಇಂಡಿಯಾ ನಾಯಕನಿಂದ ದೊಡ್ಡ ಇನ್ನಿಂಗ್ಸ್ ಬರಬಹುದು ಎಂಬ ನಿರೀಕ್ಷೆಯಲ್ಲಿ ಕ್ರಿಕೆಟ್ ಪ್ರೇಮಿಗಳು ನಿರೀಕ್ಷಿಸುತ್ತಿದ್ದಾರೆ. ಮೊದಲ ಟೆಸ್ಟ್ ಪಂದ್ಯದಲ್ಲಿ ದೇವದತ್ ಪಡಿಕ್ಕಲ್ ಭರ್ಜರಿ ಶತಕ ಸಿಡಿಸಿದ್ದು, ಸ್ಪಿನ್ನರ್ ಮಾನವ್ ಸುತಾರ್ 10 ವಿಕೆಟ್ ಕಬಳಿಸುವ ಮೂಲಕ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಇದೀಗ ಎರಡನೇ ಟೆಸ್ಟ್ನಲ್ಲಿಯೂ ಲಂಕಾ ಬ್ಯಾಟರ್ಗಳಿಗೆ ಮಾನವ್ ಸುತಾರ್ ದುಸ್ವಪ್ಪವಾಗಿ ಕಾಡಲಿರುವುದು ಖಚಿತ ಎಂದೇ ಹೇಳಲಾಗಿದೆ.
ಟೆಸ್ಟ್‌ನಲ್ಲಿ ಭಾರತ ಮತ್ತು ಶ್ರೀಲಂಕಾ ದಾಖಲೆಗಳನ್ನು ಗಮನಿಸಿದರೆ, ಭಾರತ ಸ್ಪಷ್ಟ ಮುನ್ನಡೆ ಸಾಧಿಸಿದೆ. ಉಭಯ ತಂಡಗಳ ನಡುವೆ ಇದುವರೆಗೆ 47 ಟೆಸ್ಟ್ ಪಂದ್ಯಗಳು ನಡೆದಿದ್ದು, ಟೀಮ್ ಇಂಡಿಯಾ 23 ಪಂದ್ಯ ಗೆದ್ದಿದೆ. ಲಂಕಾ ಕೇವಲ 7 ಮ್ಯಾಚ್ಗಳನ್ನು ಗೆದ್ದಿದ್ದರೆ, 17 ಡ್ರಾದಲ್ಲಿ ಅಂತ್ಯಗೊಂಡಿವೆ.