ನವದೆಹಲಿ: ಆತಿಥೇಯ ಭಾರತ ತಂಡ ಚೊಚ್ಚಲ ಆವೃತ್ತಿಯ ಅಂಧ ಮಹಿಳೆಯರ ಟಿ20 ವಿಶ್ವಕಪ್ (blind womens t20 cricket worldcup) ಟೂರ್ನಿಯಲ್ಲಿ ಆಸ್ಟ್ರೆಲಿಯಾವನ್ನು 209 ರನ್ಗಳಿಂದ ಮಣಿಸಿದೆ. ಭಾರತಕ್ಕೆ ಇದು ಸತತ 2ನೇ ಗೆಲುವಾಗಿದೆ.
ಬುಧವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ಗೆ ಇಳಿದ ಭಾರತ 4 ವಿಕೆಟ್ಗೆ 292 ರನ್ಗಳ ಬೃಹತ್ ಮೊತ್ತ ಕಲೆಹಾಕಿತು. ನಾಯಕಿ ಹಾಗೂ ಕನ್ನಡತಿ ದೀಪಿಕಾ ಟಿ.ಸಿ. 58 ಎಸೆತಗಳಲ್ಲಿ 91 ರನ್ ಬಾರಿಸಿದರೆ, ುಲಾ ಸರೆನ್ 22 ಎಸೆತಗಳಲ್ಲೇ ಅಜೇಯ 54 ರನ್ ಸಿಡಿಸಿದರು. ಆಸೀಸ್ 52 ಇತರ ಮತ್ತು 26 ಪೆನಾಲ್ಟಿ ರನ್ ಬಿಟ್ಟುಕೊಟ್ಟಿತು. ಪ್ರತಿಯಾಗಿ ಆಸ್ಟ್ರೆಲಿಯಾ 19.3 ಓವರ್ಗಳಲ್ಲಿ ಕೇವಲ 57 ರನ್ಗಳಿಗೆ ಆಲೌಟ್ ಆಗಿ ಶರಣಾಯಿತು.
ಆಲ್ರೌಂಡ್ ನಿರ್ವಹಣೆ ತೋರಿದ ದೀಪಿಕಾ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.