ನಾಳೆ ಭಾರತ-ಆಫ್ಘನ್ ಸೆಮಿಫೈನಲ್: ಗೆದ್ದವರಿಗೆ ಇಂಗ್ಲೆಂಡ್ ಎದುರಾಳಿ

ನಾಳೆ ಭಾರತ-ಆಫ್ಘನ್ ಸೆಮಿಫೈನಲ್: ಗೆದ್ದವರಿಗೆ ಇಂಗ್ಲೆಂಡ್ ಎದುರಾಳಿ
ನಾಳೆ ಭಾರತ-ಆಫ್ಘನ್ ಸೆಮಿಫೈನಲ್: ಗೆದ್ದವರಿಗೆ ಇಂಗ್ಲೆಂಡ್ ಎದುರಾಳಿ
Published on
ಹರಾರೆ: ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ಸಂಘಟಿತ ಪ್ರದರ್ಶನ ನೀಡಿ ಅಜೇಯವಾಗಿರುವ ಐದು ಬಾರಿಯ ಚಾಂಪಿಯನ್ ಭಾರತ ತಂಡ 19 ವಯೋಮಿತಿ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯ ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಬುಧವಾರ ಅಫ್ಘಾನಿಸ್ತಾನ ತಂಡದ ಸವಾಲು ಎದುರಿಸಲಿದೆ.
ಟೂರ್ನಿ ಇತಿಹಾಸದಲ್ಲಿ ಅತ್ಯಂತ ಯಶಸ್ವಿ ತಂಡ ಎನಿಸಿರುವ ಭಾರತ ತಂಡ ದಾಖಲೆಯ ಆರನೇ ಬಾರಿಗೆ ಪ್ರಶಸ್ತಿ ಜಯಿಸುವ ತವಕದಲ್ಲಿದೆ. ಇದುವರೆಗೆ ಆಡಿರುವ ಐದು ಪಂದ್ಯಗಳಲ್ಲೂ ಗೆಲುವು ಒಲಿಸಿಕೊಂಡಿರುವ ಆಯುಷ್ ಮಹಾತ್ರೆ ಪಡೆ ಸೂಪರ್ ಸಿಕ್ಸ್ ಹಂತದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು ಮಣಿಸಿದ ಆತ್ಮವಿಶ್ವಾಸ ಹೊಂದಿದೆ. ಆದರೆ, ಸೆಮೀಸ್‌ನಲ್ಲಿ ಅಫ್ಘಾನಿಸ್ತಾನ ತಂಡದಿಂದ ನಿಕಟ ಪೈಪೋಟಿ ನಿರೀಕ್ಷೆ ಇದೆ.
ವಿಕೆಟ್ ಕೀಪರ್ ಹಾಗೂ ಎಡಗೈ ಬ್ಯಾಟರ್ ಅಭಿಜ್ಞಾನ್ ಕುಂಡು ಭಾರತದ ಪ್ರಮುಖ ತಾರೆ ಎನಿಸಿದ್ದು, ಐದು ಇನಿಂಗ್ಸ್‌ಗಳಲ್ಲಿ 2 ಅರ್ಧಶತಕ ಸಹಿತ 199 ರನ್ ಕಲೆಹಾಕಿದ್ದಾರೆ. ಬಿಗ್ ಹಿಟ್ಟರ್ ವೈಭವ್ ಸೂರ್ಯವಂಶಿ (196) ಉತ್ತಮ ಆರಂಭವನ್ನು ದೊಡ್ಡ ಮೊತ್ತವನ್ನಾಗಿಸುವಲ್ಲಿ ವಿಲರಾಗಿದ್ದಾರೆ. ನಾಯಕ ಆಯುಷ್ ಮಹಾತ್ರೆ ಬ್ಯಾಟಿಂಗ್ ರನ್‌ಬರ ಎದುರಿಸಿದ್ದು, ಅರೆಕಾಲಿಕ ಬೌಲರ್ ಆಗಿ ಮಿಂಚಿದ್ದಾರೆ. ಇದುವರೆಗೆ 99 ರನ್ ಮಾತ್ರಗಳಿಸಿದ್ದಾರೆ. ಆಲ್ರೌಂಡರ್ ವಿಹಾನ್ ಮಲ್ಹೋತ್ರಾ (172) ಸಹ ಮಧ್ಯಮ ಕ್ರಮಾಂಕದಲ್ಲಿ ಬಲ ತುಂಬಲಿದ್ದು, ಆರಂಭಿಕ ಆರನ್ ಜಾರ್ಜ್‌ ಫಾರ್ಮ್ ಹಿನ್ನಡೆ ತಂದಿದೆ. ಬೌಲಿಂಗ್‌ನಲ್ಲಿ ಹೆನಿಲ್ ಪಟೇಲ್, ಆರ್‌ಎಸ್ ಅಂಬರೀಷ್ ತಲಾ 11 ವಿಕೆಟ್ ಪಡೆದು, ಉತ್ತಮ ಲಯದಲ್ಲಿದ್ದಾರೆ.
ಆರಂಭ:ಮಧ್ಯಾಹ್ನ 1
ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್, ಜಿಯೋ ಹಾಟ್‌ಸ್ಟಾರ್
10: ಭಾರತ ಗೆದ್ದರೆ ಕಿರಿಯರ ವಿಶ್ವಕಪ್‌ನಲ್ಲಿ ಸತತ 6ನೇ ಮತ್ತು ಒಟ್ಟಾರೆ 10ನೇ ಬಾರಿ ಫೈನಲ್‌ಗೇರಲಿದೆ. ಸತತ 2ನೇ ಬಾರಿ ಸೆಮಿಫೈನಲ್ ಆಡುತ್ತಿರುವ ಅಫ್ಘಾನಿಸ್ತಾನ ಗೆದ್ದರೆ ಮೊಟ್ಟಮೊದಲ ಬಾರಿ ಪ್ರಶಸ್ತಿ ಸುತ್ತಿಗೇರಲಿದೆ.
ಮುಖಾಮುಖಿ: 12
ಭಾರತ: 10
ಅ್ಘಾನಿಸ್ತಾನ: 2
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net