ಈ ತ್ರಿಕೋನ ಸರಣಿಯಲ್ಲಿ ವೈಭವ್ ಸೂರ್ಯವಂಶಿ ಅವರು ಆಡಿರುವ ನಾಲ್ಕೂ ಪಂದ್ಯಗಳಲ್ಲಿ ನಿರೀಕ್ಷಿತ ಪ್ರದರ್ಶನ ನೀಡಲು ವಿಫಲರಾಗಿದ್ದು, 4 ಇನಿಂಗ್ಸ್‌ಗಳಿಂದ ಕೇವಲ 109 ರನ್ ಗಳಿಸಲಷ್ಟೇ ಶಕ್ತರಾಗಿದ್ದಾರೆ. ಟೂರ್ನಿಯಲ್ಲಿ ಅವರ ವೈಯಕ್ತಿಕ ಸ್ಕೋರ್‌ಗಳು ಕ್ರಮವಾಗಿ 14, 44, 21 ಮತ್ತು 38 ರನ್ ಆಗಿದ್ದು, ಇದರಲ್ಲಿ 44 ಮತ್ತು 38 ರನ್‌ಗಳನ್ನು ಕೊಂಚ ದುರ್ಬಲವಾಗಿರುವ ಅಫ್ಘಾನಿಸ್ತಾನ 'ಎ' ತಂಡದ ವಿರುದ್ಧ ಗಳಿಸಿದ್ದಾರೆ, ಆದರೆ ಬಲಿಷ್ಠ ಬೌಲಿಂಗ್ ವಿಭಾಗವನ್ನು ಹೊಂದಿರುವ ಆತಿಥೇಯ ಶ್ರೀಲಂಕಾ 'ಎ' ತಂಡದ ವಿರುದ್ಧದ ಪಂದ್ಯಗಳಲ್ಲಿ ಕೇವಲ 14 ಮತ್ತು 21 ರನ್‌ಗಳಿಗೆ ಔಟ್ ಆಗಿದ್ದಾರೆ. ಹೀಗಾಗಿ, ಜೂನ್ 21ರ ಮಹತ್ವದ ಫೈನಲ್ ಪಂದ್ಯದಲ್ಲೂ ವೈಭವ್ ಬ್ಯಾಟಿಂಗ್‌ನಲ್ಲಿ ವಿಫಲರಾದರೆ, ಅವರು ಕೇವಲ ಐಪಿಎಲ್ ಸ್ನೇಹಿ ಪಿಚ್‌ಗಳು ಹಾಗೂ ದುರ್ಬಲ ಬೌಲಿಂಗ್ ದಾಳಿಯ ಎದುರು ಮಾತ್ರ ಆಡಬಲ್ಲರು ಎಂಬ ಕಠಿಣ ವಿಮರ್ಶೆ ಮತ್ತು ಟೀಕೆಗಳನ್ನು ಎದುರಿಸಬೇಕಾಗುತ್ತದೆ.