ರಾಧಾ ಯಾದವ್ ಸಾರಥ್ಯದ ಭಾರತ ತಂಡ ಟೂರ್ನಿಯ ಮೊದಲ ಪಂದ್ಯದಲ್ಲಿ ಯುಎಇ ವಿರುದ್ಧ ಆಘಾತಕಾರಿ ಸೋಲು ಅನುಭವಿಸಿದ ಹಿನ್ನಡೆ ಹೊಂದಿದ್ದರೆ, ಪಾಕಿಸ್ತಾನ ತಂಡ ಮೊದಲ ಪಂದ್ಯದಲ್ಲಿ ನೇಪಾಳ ವಿರುದ್ಧ ಗೆಲುವು ಸಾಧಿಸಿದ ವಿಶ್ವಾಸದಲ್ಲಿದೆ. ಭಾರತ ತಂಡಕ್ಕೆ ಸೆಮಿಫೈನಲ್ ಹಂತಕ್ಕೇರುವ ಆಸೆ ಜೀವಂತವಿಡುವ ನಿಟ್ಟಿನಲ್ಲಿ ಈ ಪಂದ್ಯದಲ್ಲಿ ಗೆಲುವು ದಾಖಲಿಸುವ ಅನಿವಾರ್ಯತೆಯೂ ಇದೆ.
ಮೊದಲ ಪಂದ್ಯದಲ್ಲಿ ಬ್ಯಾಟಿಂಗ್ ವಿಭಾಗದಲ್ಲಿ ವೈಫಲ್ಯ ಕಂಡಿದ್ದ ಭಾರತೀಯ ಮಹಿಳೆಯರು ಈ ಬಾರಿ ಪುಟಿದೇಳುವ ನಿರೀಕ್ಷೆ ಇದೆ.