ರೈಸಿಂಗ್ ಸ್ಟಾರ್ಸ್ ಏಷ್ಯಾಕಪ್: ಸೆಮಿಫೈನಲ್ಗೇರಿದ ಭಾರತ ಎ
ರೈಸಿಂಗ್ ಸ್ಟಾರ್ಸ್ ಏಷ್ಯಾಕಪ್: ಸೆಮಿಫೈನಲ್ಗೇರಿದ ಭಾರತ ಎ
Published on:
Copied
Follow Us
ದೋಹಾ: ಹರ್ಷ್ ದುಬೆ (53*ರನ್, 44 ಎಸೆತ, 7 ಬೌಂಡರಿ, 1 ಸಿಕ್ಸರ್, 30ಕ್ಕೆ 1 ವಿಕೆಟ್) ಆಲ್ರೌಂಡ್ ಆಟದ ಬಲದಿಂದ ಭಾರತ ಎ ತಂಡ ರೈಸಿಂಗ್ ಸ್ಟಾರ್ಸ್ ಏಷ್ಯಾಕಪ್ ಟಿ20 (Rising Stars Asia cup T20 cricket) ಟೂರ್ನಿಯ 3ನೇ ಹಾಗೂ ಕೊನೇ ಲೀಗ್ ಪಂದ್ಯದಲ್ಲಿ ಓಮನ್ ವಿರುದ್ಧ 6 ವಿಕೆಟ್ಗಳಿಂದ ಗೆಲುವು ದಾಖಲಿಸಿದೆ. ಈ ಮೂಲಕ ಬಿ ಗುಂಪಿನ 2ನೇ ತಂಡವಾಗಿ ಸೆಮಿಫೈನಲ್ಗೇರಿದೆ.
ವೆಸ್ಟ್ ಎಂಡ್ ಪಾರ್ಕ್ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ಗೆ ಇಳಿದ ಓಮನ್, ವಸೀಂ ಅಲಿ (54*) ಅರ್ಧಶತಕ ನಡುವೆಯೂ ಸ್ಪಿನ್ನರ್ ಸುಯಶ್ ಶರ್ಮ (12ಕ್ಕೆ 2) ಸಹಿತ ಇತರ ಬೌಲರ್ಗಳ ಸಂಘಟಿತ ದಾಳಿಗೆ ನಲುಗಿ 7 ವಿಕೆಟ್ಗೆ 135 ರನ್ಗಳ ಸಾಧಾರಣ ಮೊತ್ತ ಪೇರಿಸಿತು. ಪ್ರತಿಯಾಗಿ ಜಿತೇಶ್ ಶರ್ಮ ನೇತೃತ್ವದ ಭಾರತ ಎ ತಂಡ, 17.5 ಓವರ್ಗಳಲ್ಲಿ 4 ವಿಕೆಟ್ಗೆ 138 ರನ್ ಗಳಿಸಿ ಜಯಿಸಿತು.