ಪಾಂಡ್ಯ, 'ಅಭಿ' ಬ್ಯಾಟಿಂಗ್​ ಅಬ್ಬರ! ಅರ್ಷದೀಪ್​ ಸಿಂಗ್​ ಕಮಾಲ್... ಜಿಂಬಾಬ್ವೆ ವಿರುದ್ಧ ಭಾರತಕ್ಕೆ 72 ರನ್​ಗಳ ಭರ್ಜರಿ ಜಯ | IND vs ZIM

ಭಾರತ ಮತ್ತು ಜಿಂಬಾಬ್ವೆ ಸೂಪರ್​-8 ಪಂದ್ಯ
ಭಾರತ ಮತ್ತು ಜಿಂಬಾಬ್ವೆ ಸೂಪರ್​-8 ಪಂದ್ಯ
Published on

ಪ್ರಮುಖ ಮುಖ್ಯಾಂಶಗಳು

  • ಚೆನ್ನೈ ಕ್ರೀಡಾಂಗಣದಲ್ಲಿ ಜಿಂಬಾಬ್ವೆ-ಭಾರತ ನಡುವೆ ಸೂಪರ್​-8 ಪಂದ್ಯ
  • 257 ರನ್​ಗಳ ಗುರಿ ತಲುಪಲು ಜಿಂಬಾಬ್ವೆ ವಿಫಲ
  • ರನ್​ಗಳಿಂದ ಪಂದ್ಯ ಗೆದ್ದು ಬೀಗಿದ ಟೀಮ್ ಇಂಡಿಯಾ
ಚೆನ್ನೈ: ಇಂದು (ಫೆ.26) ಚೆನ್ನೈನ ಚೆಪಾಕ್​ ಕ್ರೀಡಾಂಗಣದಲ್ಲಿ ನಡೆದ ಭಾರತ ಮತ್ತು ಜಿಂಬಾಬ್ವೆ ನಡುವಿನ ನಿರ್ಣಾಯಕ ಟಿ20 ವಿಶ್ವಕಪ್​ನ ಸೂಪರ್​-8 ಪಂದ್ಯದಲ್ಲಿ ರನ್​ಗಳಿಂದ ಟೀಮ್ ಇಂಡಿಯಾ ಭರ್ಜರಿ ಗೆಲುವು ಸಾಧಿಸಿತು. 

ದಾಖಲೆಯ ಸ್ಕೋರ್​

ಟಾಸ್​ ಗೆದ್ದು ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡ ಜಿಂಬಾಬ್ವೆ, ಬ್ಯಾಟ್​ ಮಾಡುವಂತೆ ಟೀಮ್ ಇಂಡಿಯಾಗೆ ತಿಳಿಸಿತು. ಅದರಂತೆಯೇ, ಬ್ಯಾಟಿಂಗ್ ಮಾಡಿದ ಭಾರತ, 20 ಓವರ್​ಗಳಲ್ಲಿ 4 ವಿಕೆಟ್​ ನಷ್ಟಕ್ಕೆ 256 ರನ್​ಗಳ ಬೃಹತ್​ ಸ್ಕೋರ್​ ಕಲೆಹಾಕಿತು. ಈ ಗುರಿಯನ್ನು ಬೆನ್ನತ್ತಿದ ಜಿಂಬಾಬ್ವೆ ಪಡೆಗೆ ಬೆನೆಟ್​ರಿಂದ (97* ರನ್​) ಸ್ಫೋಟಕ ಇನ್ನಿಂಗ್ಸ್​ ಸಿಕ್ಕಿದ್ದೇ ಆದರೂ ತಂಡದ ಇತರೆ ಬ್ಯಾಟರ್​ಗಳಿಂದ ಉತ್ತಮ ಸಾಥ್ ಸಿಗಲಿಲ್ಲ. ಇದೇ ಸೋಲಿಗೆ ಮುಖ್ಯ ಕಾರಣವಾಯಿತು.
ಇನ್ನು ತಂಡದ ಪರ ಉತ್ತಮ ಬೌಲಿಂಗ್ ಮಾಡಿದ ಅರ್ಷದೀಪ್ ಸಿಂಗ್, ಮೂರು ವಿಕೆಟ್​ ಕಬಳಿಸಿದರೆ, ಅಕ್ಷರ್​ ಪಟೇಲ್, ಶಿವಂ ದುಬೆ​ ಮತ್ತು ವರುಣ್​ ಚಕ್ರವರ್ತಿ ತಲಾ ಒಂದು ವಿಕೆಟ್ ಪಡೆಯುವ ಮೂಲಕ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಈ ಪಂದ್ಯದಲ್ಲಿ ವಿಶೇಷ ಎಂದರೆ, ಟಿ20 ವಿಶ್ವಕಪ್​ ಇತಿಹಾಸದಲ್ಲಿ ಇದು ಟೀಮ್ ಇಂಡಿಯಾದ ಗರಿಷ್ಠ ಸ್ಕೋರ್​ ಆಗಿದೆ. ಮೊದಲ ಸ್ಥಾನದಲ್ಲಿ ಶ್ರೀಲಂಕಾ ತಂಡವಿದ್ದು, 2007ರ ವಿಶ್ವಕಪ್​ನಲ್ಲಿ ಕೀನ್ಯ ವಿರುದ್ಧ 260 ರನ್​ ದಾಖಲಿಸಿದೆ. ಅವರ ನಂತರದ ಸ್ಥಾನದಲ್ಲಿ ಈಗ ಭಾರತವಿದೆ.  
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net