ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡ ಜಿಂಬಾಬ್ವೆ, ಬ್ಯಾಟ್ ಮಾಡುವಂತೆ ಟೀಮ್ ಇಂಡಿಯಾಗೆ ತಿಳಿಸಿತು. ಅದರಂತೆಯೇ, ಬ್ಯಾಟಿಂಗ್ ಮಾಡಿದ ಭಾರತ, 20 ಓವರ್ಗಳಲ್ಲಿ 4 ವಿಕೆಟ್ ನಷ್ಟಕ್ಕೆ 256 ರನ್ಗಳ ಬೃಹತ್ ಸ್ಕೋರ್ ಕಲೆಹಾಕಿತು. ವಿಶೇಷ ಎಂದರೆ, ಟಿ20 ವಿಶ್ವಕಪ್ ಇತಿಹಾಸದಲ್ಲಿ ಇದು ಟೀಮ್ ಇಂಡಿಯಾದ ಗರಿಷ್ಠ ಸ್ಕೋರ್ ಆಗಿದೆ. ಮೊದಲ ಸ್ಥಾನದಲ್ಲಿ ಶ್ರೀಲಂಕಾ ತಂಡವಿದ್ದು, 2007ರ ವಿಶ್ವಕಪ್ನಲ್ಲಿ ಕೀನ್ಯ ವಿರುದ್ಧ 260 ರನ್ ದಾಖಲಿಸಿದೆ. ಅವರ ನಂತರದ ಸ್ಥಾನದಲ್ಲಿ ಇದೀಗ ಭಾರತವಿದೆ,(ಏಜೆನ್ಸೀಸ್).