ಟಾಸ್ ಗೆದ್ದು ಬೌಲಿಂಗ್ ಆಯ್ದುಕೊಂಡ ಟೀಮ್ ಇಂಡಿಯಾ, ಜಿಂಬಾಬ್ವೆಗೆ ಬ್ಯಾಟ್ ಮಾಡುವಂತೆ ಆಹ್ವಾನಿಸಿತು. ಅಂತೆಯೇ, ಬೃಹತ್ ಸ್ಕೋರ್ ಮಾಡಲು ಕ್ರೀಸ್ಗಿಳಿದ ಆರಂಭಿಕ ಬ್ಯಾಟರ್ಗಳ ಪೈಕಿ ಬ್ರಿಯನ್ ಬೆನೆಟ್ ಶೂನ್ಯಕ್ಕೆ ಔಟ್ ಆಗುವ ಮೂಲಕ ತಂಡಕ್ಕೆ ದೊಡ್ಡ ಆಘಾತ ನೀಡಿದರು. ಅವರ ಬೆನ್ನಲ್ಲೇ ಬೆನ್ ಕರನ್ (10 ರನ್), ಡಿಯಾನ್ ಮೈರ್ಸ್ (6), ಕ್ಯಾಪ್ಟನ್ ಸಿಕಂದರ್ (4), ರಿಯಾನ್ ಬರ್ಲ್ (26) ಕೂಡ ಪೆವಿಲಿಯನ್ ಸೇರಿದರು.