ಅಭಿಷೇಕ್, ಪಾಂಡ್ಯ​ ಅರ್ಧಶತಕ... ಟೀಮ್​ ಇಂಡಿಯಾ ದಾಖಲೆಯ ಸ್ಕೋರ್​​! ಜಿಂಬಾಬ್ವೆಗೆ 257 ರನ್​ಗಳ ಬೃಹತ್​ ಗುರಿ | IND vs ZIM

ಭಾರತ ಮತ್ತು ಜಿಂಬಾಬ್ವೆ ಸೂಪರ್​-8 ಪಂದ್ಯ
ಭಾರತ ಮತ್ತು ಜಿಂಬಾಬ್ವೆ ಸೂಪರ್​-8 ಪಂದ್ಯ
Published on

ಪ್ರಮುಖ ಮುಖ್ಯಾಂಶಗಳು

  • ಚೆನ್ನೈ ಕ್ರೀಡಾಂಗಣದಲ್ಲಿ ಜಿಂಬಾಬ್ವೆ-ಭಾರತ ನಡುವೆ ಸೂಪರ್​-8 ಪಂದ್ಯ
  • ಟಾಸ್​ ಗೆದ್ದು ಮೊದಲು ಬೌಲಿಂಗ್ ಆಯ್ದುಕೊಂಡ ಜಿಂಬಾಬ್ವೆ
  • ಮೊದಲ ಇನ್ನಿಂಗ್ಸ್ ಅಂತ್ಯ, ಜಿಂಬಾಬ್ವೆಗೆ 257 ರನ್​ಗಳ ಬೃಹತ್ ಗುರಿ

ದಾಖಲೆಯ ಸ್ಕೋರ್​

ಟಾಸ್​ ಗೆದ್ದು ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡ ಜಿಂಬಾಬ್ವೆ, ಬ್ಯಾಟ್​ ಮಾಡುವಂತೆ ಟೀಮ್ ಇಂಡಿಯಾಗೆ ತಿಳಿಸಿತು. ಅದರಂತೆಯೇ, ಬ್ಯಾಟಿಂಗ್ ಮಾಡಿದ ಭಾರತ, 20 ಓವರ್​ಗಳಲ್ಲಿ 4 ವಿಕೆಟ್​ ನಷ್ಟಕ್ಕೆ 256 ರನ್​ಗಳ ಬೃಹತ್​ ಸ್ಕೋರ್​ ಕಲೆಹಾಕಿತು. ವಿಶೇಷ ಎಂದರೆ, ಟಿ20 ವಿಶ್ವಕಪ್​ ಇತಿಹಾಸದಲ್ಲಿ ಇದು ಟೀಮ್ ಇಂಡಿಯಾದ ಗರಿಷ್ಠ ಸ್ಕೋರ್​ ಆಗಿದೆ. ಮೊದಲ ಸ್ಥಾನದಲ್ಲಿ ಶ್ರೀಲಂಕಾ ತಂಡವಿದ್ದು, 2007ರ ವಿಶ್ವಕಪ್​ನಲ್ಲಿ ಕೀನ್ಯ ವಿರುದ್ಧ 260 ರನ್​ ದಾಖಲಿಸಿದೆ. ಅವರ ನಂತರದ ಸ್ಥಾನದಲ್ಲಿ ಇದೀಗ ಭಾರತವಿದೆ.  
ತಂಡದ ಪರ ಆರಂಭಿಕ ಬ್ಯಾಟರ್​ ಅಭಿಷೇಕ್ ಶರ್ಮ ಅರ್ಧಶತಕ (55 ರನ್​) ಸಿಡಿಸಿದರೆ, ಸಂಜು ಸ್ಯಾಮ್ಸನ್ (24​)​, ಇಶಾನ್ ಕಿಶನ್ ​(38), ಸೂರ್ಯಕುಮಾರ್ ಯಾದವ್ (33)​, ಹಾರ್ದಿಕ್​ ಪಾಂಡ್ಯ (50) ಮತ್ತು ತಿಲಕ್​ ವರ್ಮಾ (44) ಸ್ಫೋಟಕ ಇನ್ನಿಂಗ್ಸ್​ ನೀಡಿದ್ದು ವಿಶೇಷ ಹಾಗೂ ಗಮನಾರ್ಹ. ಬ್ಯಾಟರ್​ಗಳ ಪೈಕಿ ತಿಲಕ್​ ಮತ್ತು ಪಾಂಡ್ಯ ಅಜೇಯರಾಗಿ ಉಳಿದರು.  
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net