ಐಪಿಎಲ್‌ನಲ್ಲಿ ತಂಡದ ಆಟಗಾರರ ಅನುಭವವು ಜಿಂಬಾಬ್ವೆ ವಿರುದ್ಧದ ಪ್ರವಾಸದಲ್ಲಿ ಉಪಯುಕ್ತವಾಯಿತು. ಒಬ್ಬ ನಾಯಕನಾಗಿ, ಆಟಗಾರರು ಒತ್ತಡಕ್ಕೆ ಒಳಗಾಗದಂತೆ ನೋಡಿಕೊಳ್ಳುವುದು ನನ್ನ ಜವಾಬ್ದಾರಿಯಾಗಿತ್ತು. ಕಠಿಣ ಸಮಯದಲ್ಲಿ ಆಟಗಾರರು ತೆಗೆದುಕೊಂಡ ತಾಳ್ಮೆ, ಜವಾಬ್ದಾರಿ ತಂಡವನ್ನು ಗೆಲುವಿನತ್ತ ಕೊಂಡೊಯ್ದಿತು. ಭವಿಷ್ಯದಲ್ಲಿ ಸವಾಲುಗಳು ಇನ್ನಷ್ಟು ಕಠಿಣವಾಗಬಹುದು. ಆದ್ರೆ, ಆಟಗಾರರಲ್ಲಿ ಇದೇ ಧೈರ್ಯ ಮುಂದುವರಿದರೆ, ಮುಂದಿನ ದಿನಗಳಲ್ಲಿ ಯಾವುದೇ ತಂಡವನ್ನು ಬೇಕಾದರೂ ಮಣಿಸಬಹುದು ಎಂಬ ವಿಶ್ವಾಸ ನನಗಿದೆ" ಎಂದರು,(ಏಜೆನ್ಸೀಸ್).