2ನೇ ಏಕದಿನ ಪಂದ್ಯಕ್ಕೆ ಸಿರಾಜ್​ ಎಂಟ್ರಿ? ಸರಣಿ ಗೆಲ್ಲಲು ಕಣ್ಣಿಟ್ಟಿರುವ ಟೀಮ್ ಇಂಡಿಯಾದಲ್ಲಿ ಕೊಂಚ ಬದಲಾವಣೆ! | IND vs WI ODI

ಈ ಪಂದ್ಯ ಗೆದ್ದರೆ ಭಾರತ ಒಂದು ಪಂದ್ಯ ಬಾಕಿ ಇರುವಂತೆಯೇ ಸರಣಿ ಕೈವಶ ಮಾಡಿಕೊಳ್ಳಲಿದೆ ಎಂಬುದು ಚಿತ್ರಣ. ಮೊದಲ ಏಕದಿನ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಮತ್ತು ಶುಭಮನ್ ಗಿಲ್ ಶತಕದಾಟದ ನೆರವಿನಿಂದ ಭಾರತ ಕೇವಲ 41.4 ಓವರ್‌ಗಳಲ್ಲಿ 295 ರನ್‌ಗಳ ಗುರಿಯನ್ನು ತಲುಪಿತು
IND vs WI ODI
2ನೇ ಏಕದಿನ ಪಂದ್ಯಕ್ಕೆ ಸಿರಾಜ್​ ಎಂಟ್ರಿ? ಸರಣಿ ಗೆಲ್ಲಲು ಕಣ್ಣಿಟ್ಟಿರುವ ಟೀಮ್ ಇಂಡಿಯಾದಲ್ಲಿ ಕೊಂಚ ಬದಲಾವಣೆ! | IND vs WI ODI
Published on: 
  • ವೆಸ್ಟ್ ಇಂಡೀಸ್​ ವಿರುದ್ಧದ 2ನೇ ಏಕದಿನ ಪಂದ್ಯಕ್ಕೆ ಟೀಮ್ ಇಂಡಿಯಾ ಸಜ್ಜು

  • ಮೊದಲ ಪಂದ್ಯವನ್ನು 8 ವಿಕೆಟ್‌ಗಳಿಂದ ಗೆದ್ದ ಭಾರತ

  • ಏಕದಿನ ಸರಣಿ ವಶಪಡಿಸಿಕೊಳ್ಳಲು ಕಣ್ಣಿಟ್ಟಿರುವ ಟೀಮ್ ಇಂಡಿಯಾದಲ್ಲಿ ಕೊಂಚ ಬದಲಾವಣೆ

IND vs WI ODI: ಪ್ರಸಕ್ತ ತವರಿನಲ್ಲೇ ನಡೆಯುತ್ತಿರುವ ವೆಸ್ಟ್ ಇಂಡೀಸ್ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಮೊದಲ ಪಂದ್ಯವನ್ನು ಗೆದ್ದು ಬೀಗಿರುವ ಟೀಮ್​ ಇಂಡಿಯಾ, ಇಂದು ಗುವಾಹಟಿಯಲ್ಲಿ ನಡೆಯಲಿರುವ ಎರಡನೇ ಪಂದ್ಯವನ್ನೂ ಗೆದ್ದು ಸರಣಿ ವಶಪಡಿಸಿಕೊಳ್ಳಲು ಮುಂದಾಗಿದೆ. ಇದೇ ಸಮಯದಲ್ಲಿ ತಂಡದಲ್ಲಿ ಕೊಂಚ ಬದಲಾವಣೆಗಳನ್ನು ಮಾಡಿಕೊಂಡಿದೆ ಎಂದು ಕ್ರಿಕೆಟ್​ ಮೂಲಗಳು ತಿಳಿಸಿವೆ.

ಮೊದಲ ಏಕದಿನ ಪಂದ್ಯವನ್ನು ಗೆದ್ದು 1-0 ಅಂತರದಲ್ಲಿ ಮುನ್ನಡೆ ಸಾಧಿಸಿರುವ ಭಾರತ ತಂಡ ಬುಧವಾರ ಗುವಾಹಟಿಯಲ್ಲಿ ನಡೆಯಲಿರುವ ಎರಡನೇ ಏಕದಿನ ಪಂದ್ಯವನ್ನು ಗೆಲ್ಲುವ ಗುರಿಯೊಂದಿಗೆ ಮೈದಾನಕ್ಕಿಳಿಯಲಿದೆ. ಈ ಪಂದ್ಯ ಗೆದ್ದರೆ ಭಾರತ ಒಂದು ಪಂದ್ಯ ಬಾಕಿ ಇರುವಂತೆಯೇ ಸರಣಿ ಕೈವಶ ಮಾಡಿಕೊಳ್ಳಲಿದೆ ಎಂಬುದು ಚಿತ್ರಣ. ಮೊದಲ ಏಕದಿನ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಮತ್ತು ಶುಭಮನ್ ಗಿಲ್ ಶತಕದಾಟದ ನೆರವಿನಿಂದ ಭಾರತ ಕೇವಲ 41.4 ಓವರ್‌ಗಳಲ್ಲಿ 295 ರನ್‌ಗಳ ಗುರಿಯನ್ನು ತಲುಪಿತು.

ಮೊಹಮ್ಮದ್ ಸಿರಾಜ್ ಎರಡನೇ ಏಕದಿನ ಪಂದ್ಯಕ್ಕೆ ಲಭ್ಯವಾಗುವ ಸಾಧ್ಯತೆ ಇದೆ ಎಂಬ ಸುದ್ದಿಗಳು ಹೊರಬಿದ್ದಿದ್ದು, ಮೊದಲ ಪಂದ್ಯದಲ್ಲಿ ಅವಕಾಶ ಮಿಸ್​ ಮಾಡಿಕೊಂಡ ಸಿರಾಜ್​ಗೆ ಅಂತಿಮ ತಂಡದಲ್ಲಿ ಸ್ಥಾನ ನೀಡಿದ್ದರೆ, ಕನ್ನಡಿಗ ಪ್ರಸಿದ್ಧ್​ ಕೃಷ್ಣ ಅವರಿಗೆ ವಿಶ್ರಾಂತಿ ನೀಡಿ ನಮನ್​ ಧೀರ್​ಗೆ ಅವಕಾಶ ಕೊಡಲಾಗಿದೆ ಎಂದು ಹೇಳಲಾಗಿದೆ. ಉಳಿದ ತಂಡದಲ್ಲಿ ಇನ್ಯಾಬುದೇ ಬದಲಾವಣೆಗಳು ಇಲ್ಲ ಎನ್ನಲಾಗಿದೆ. ಎಂದಿನಂತೆ ಈ ಬಾರಿಯೂ ರೋಹಿತ್ ಶರ್ಮಾ ಮತ್ತು ಶುಭಮನ್ ಗಿಲ್ ಮತ್ತೊಮ್ಮೆ ಆರಂಭಿಕರಾಗಿ ಕಣಕ್ಕಿಳಿಯಲಿದ್ದಾರೆ.

Also Read
ಅಜಿತ್​ ಅಗರ್ಕರ್ ಎಕ್ಸಿಟ್​ ಬೆನ್ನಲ್ಲೇ ಮುಖ್ಯ ಆಯ್ಕೆಗಾರ ಸ್ಥಾನಕ್ಕೆ ಮಾಜಿ ಸ್ಪಿನ್ನರ್ ಆಯ್ಕೆ! ಆದರೆ, ಇಲ್ಲೊಂದು ಕ್ಯಾಚ್​ ಇದೆ | Chief Selector
IND vs WI ODI

ಭಾರತದ ಪ್ಲೇಯಿಂಗ್​ 11 (ಇನ್ನೂ ಅಂತಿಮವಲ್ಲ)

ರೋಹಿತ್ ಶರ್ಮಾ, ಶುಭಮನ್ ಗಿಲ್, ವಿರಾಟ್ ಕೊಹ್ಲಿ, ರುತುರಾಜ್ ಗಾಯಕ್ವಾಡ್, ರವೀಂದ್ರ ಜಡೇಜಾ, ಕೆ.ಎಲ್. ರಾಹುಲ್, ನಮನ್​ ಧೀರ್​, ನಿತೀಶ್ ಕುಮಾರ್ ರೆಡ್ಡಿ, ಕುಲದೀಪ್ ಯಾದವ್, ಮೊಹಮ್ಮದ್ ಸಿರಾಜ್, ಗುರ್ನೂರ್ ಬ್ರಾರ್,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net