ಲಂಕಾ ಪಡೆಗೆ ಬೆವರಿಳಿಸಿದ ಗಿಲ್, ಪಡಿಕ್ಕಲ್​! 2ನೇ ಟೆಸ್ಟ್ ಮ್ಯಾಚ್​ನಲ್ಲೂ ಶತಕ ಬಾರಿಸಿದ ಕನ್ನಡಿಗ | IND vs SL 2nd Test

IND vs SL 2ನೇ ಟೆಸ್ಟ್​, ದೇವದತ್ತ ಪಡಿಕಲ್​
IND vs SL 2ನೇ ಟೆಸ್ಟ್​, ದೇವದತ್ತ ಪಡಿಕಲ್​
Published on

ಪ್ರಮುಖ ಮುಖ್ಯಾಂಶಗಳು

  • ಕೊಲಂಬೊದ ಸಿಂಹಳೀಸ್ ಸ್ಪೋರ್ಟ್ಸ್ ಕ್ಲಬ್​ನಲ್ಲಿ ನಡೆಯುತ್ತಿರುವ ಭಾರತ-ಶ್ರೀಲಂಕಾ 2ನೇ ಟೆಸ್ಟ್
  • 2ನೇ ಟೆಸ್ಟ್​ ಪಂದ್ಯದಲ್ಲೂ ಎರಡನೇ ಶತಕ ಬಾರಿಸಿದ ಕನ್ನಡಿಗ ದೇವದತ್ತ ಪಡಿಕ್ಕಲ್​
  • ಪಡಿಕ್ಕಲ್​ಗೆ ಅರ್ಧಶತಕ ಬಾರಿಸುವ ಮೂಲಕ ಸಾಥ್​ ನೀಡಿದ ನಾಯಕ ಶುಭಮನ್ ಗಿಲ್​
IND vs SL 2nd Test: ಕೊಲಂಬೊದ ಸಿಂಹಳೀಸ್ ಸ್ಪೋರ್ಟ್ಸ್ ಕ್ಲಬ್​ನಲ್ಲಿ (SSC) ನಡೆಯುತ್ತಿರುವ ಭಾರತ ಮತ್ತು ಶ್ರೀಲಂಕಾ ನಡುವಿನ ಟೆಸ್ಟ್ ಸರಣಿಯ ಎರಡನೇ ಪಂದ್ಯ ಮೊದಲ ದಿನದಾಟ ಇದೀಗ ಮುಕ್ತಾಯಗೊಂಡಿದೆ.
ಟಾಸ್​ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ಟೀಮ್ ಇಂಡಿಯಾ, ಮೊದಲ ಇನಿಂಗ್ಸ್‌ನಲ್ಲಿ 3 ವಿಕೆಟ್ ನಷ್ಟಕ್ಕೆ 187 ರನ್ ಕಲೆಹಾಕಿತು. ತಂಡದ ಪರ ತಂಡದ ನಾಯಕ ಶುಭ್‌ಮನ್ ಗಿಲ್ ಭರ್ಜರಿ ಪ್ರದರ್ಶನ ತೋರಿದ್ದಾರೆ. 108 ಎಸೆತಗಳಲ್ಲಿ 6 ಬೌಂಡರಿ ಸಹಾಯದಿಂದ ಅರ್ಧಶತಕ (50) ಗಳಿಸಿದ ಗಿಲ್​, ಟೀ ಬ್ರೇಕ್​ಗೆ ಹೊರಡುವ ಸಮಯದಲ್ಲೇ ಅಸಿತ ಫೆರ್ನಾಂಡೊ ಬೌಲಿಂಗ್‌ನಲ್ಲಿ ಕೀಪರ್‌ಗೆ ಕ್ಯಾಚ್​ ಕೊಟ್ಟು ಪೆವಿಲಿಯನ್ ಸೇರಿದರು.
ಇನ್ನು, ಮತ್ತೊಂದೆಡೆ ಕ್ಯಾಪ್ಟನ್​ಗೆ ಸಖತ್ ಸಾಥ್ ನೀಡಿದ ಕನ್ನಡಿಗ ದೇವದತ್ ಪಡಿಕಲ್​, 3ನೇ ವಿಕೆಟ್‌ಗೆ 120 ರನ್‌ಗಳ ಉತ್ತಮ ಪಾರ್ಟ್​ನರ್​ಶಿಪ್​ ನೀಡುವುದರ ಜತೆಗೆ ಎರಡನೇ ಬಾರಿ ಭರ್ಜರಿ ಶತಕ ದಾಖಲಿಸಿದರು. 193 ಎಸೆತಗಳಲ್ಲಿ 12 ಬೌಂಡರಿ ಬಾರಿಸುವ ಮೂಲಕ 117 ರನ್​ ಸಿಡಿಸಿದರು. ಉಳಿದಂತೆ ಯಶಸ್ವಿ ಜೈಸ್ವಾಲ್​ (45), ಕೆ.ಎಲ್​. ರಾಹುಲ್​ (18), ರವೀಂದ್ರ ಜಡೇಜಾ (ಅಜೇಯ 43), ಧ್ರುವ್ ಜ್ಯುರೆಲ್​ (ಅಜೇಯ 7) ಗಳಿಸಿ ಪೆವಿಲಿಯನ್​ ಹಾದಿ ಹಿಡಿದರು. ಇನ್ನು ರಿಟೈಡ್​ ಹರ್ಟ್​ ಅಡಿ ಹೊರಹೋಗಿರುವ ರಿಷಬ್​​ ಪಂತ್, ಖಾತೆ ತೆರೆಯಬೇಕಿದೆ. ​

ಭಾರತ ಪ್ಲೇಯಿಂಗ್ 11 ತಂಡ

ಯಶಸ್ವಿ ಜೈಸ್ವಾಲ್, ಕೆ.ಎಲ್. ರಾಹುಲ್, ದೇವದತ್ ಪಡಿಕ್ಕಲ್, ಶುಭಮನ್ ಗಿಲ್ (ನಾಯಕ), ರಿಷಬ್​ ಪಂತ್ (ವಿಕೆಟ್ ಕೀಪರ್), ರವೀಂದ್ರ ಜಡೇಜಾ, ಧ್ರುವ ಜುರೆಲ್, ಸರನ್ಶ್ ಜೈನ್, ಮಾನವ್ ಸುತಾರ್, ಮೊಹಮ್ಮದ್ ಸಿರಾಜ್, ಪ್ರಸಿದ್ಧ್ ಕೃಷ್ಣ.
ಶ್ರೀಲಂಕಾ: ಲಹಿರು ಉದಾರ, ಕಮಿಲ್ ಮಿಶ್ರಾ, ಪಸಿಂದು ಸೂರಿಯಬಂಡಾರ, ಕಮಿಂದು ಮೆಂಡಿಸ್, ಧನಂಜಯ ಡಿ ಸಿಲ್ವಾ (ನಾಯಕ), ಸೋನಾಲ್ ದಿನುಶಾ, ನಿರೋಶನ್ ಡಿಕ್ವೆಲ್ಲಾ (ವಿಕೆಟ್ ಕೀಪರ್), ಕೇಶರ ನುವಾಂತ, ಪ್ರಭಾತ್ ಜಯಸೂರ್ಯ, ಲಹಿರು ಕುಮಾರ, ಅಸಿತ ಫೆರ್ನಾಂಡೊ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net