ಈ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಆಲ್ರೌಂಡರ್ ಆಗಿ ಹೆಚ್ಚಿನ ವಿಕೆಟ್ ಮತ್ತು ರನ್ಗಳನ್ನು ಕಲೆಹಾಕಿರುವುದೇ ಅಕ್ಸರ್ ಪಟೇಲ್. ತಂಡದ ಉಪನಾಯಕನಾಗಿ ಕಣಕ್ಕಿಳಿಯುವ ಅಕ್ಸರ್ರನ್ನು ದಕ್ಷಿಣ ಆಫ್ರಿಕಾ ಪಂದ್ಯದಿಂದ ಕೈಬಿಟ್ಟಿದ್ದೇ ಟೀಮ್ ಮ್ಯಾನೇಜ್ಮೆಂಟ್ ಮಾಡಿದ ಮೊದಲ ಮಿಸ್ಟೇಕ್. ಅಲ್ಲಿಂದ, ಅವರ ಸ್ಥಾನಕ್ಕೆ ವಾಷಿಂಗ್ಟನ್ ಸುಂದರ್ ಆಡುವುದೇ ಬೆಸ್ಟ್ ಎಂದು ಭಾವಿಸಿ, ಅಕ್ಸರ್ ಸ್ಥಾನಕ್ಕೆ ಆಡಿಸಿದ್ದು ನಿಜಕ್ಕೂ ದುರಂತ. ದಕ್ಷಿಣ ಆಫ್ರಿಕಾ ವಿರುದ್ಧ ಉತ್ತಮ ರೆಕಾರ್ಡ್ ಇರುವುದೇ ಅಕ್ಸರ್ ಪಟೇಲ್ ಹೆಸರಿನಲ್ಲಿ. ಹೀಗಿದ್ದಮೇಲೆ, ಒಬ್ಬ ತಂಡದ ಉಪನಾಯಕ ಹಾಗೂ ಅತ್ಯುತ್ತಮ ಆಲ್ರೌಂಡರ್ ಅನ್ನು ಕೂರಿಸಿ, ಸುಂದರ್ರನ್ನು ಆಡಿಸಿದ್ದು ಹೀನಾಯ ಸೋಲಿಗೆ ಒಂದು ಮುಖ್ಯ ಕಾರಣವಾಯಿತು ಎಂಬುದರಲ್ಲಿ ಅನುಮಾನವಿಲ್ಲ.