2ನೇ ಟಿ20 ಪಂದ್ಯದಲ್ಲಿ ಡಿ ಕಾಕ್​ ಅಬ್ಬರ! ಟೀಮ್ ಇಂಡಿಯಾಗೆ 214 ರನ್ ಬೃಹತ್​​ ಗುರಿ | IND vs SA

IND vs SA 2nd T20
IND vs SA 2nd T20
Published on

ಪ್ರಮುಖ ಮುಖ್ಯಾಂಶಗಳು

  • 2ನೇ ಟಿ20, ಟಾಸ್​ ಗೆದ್ದ ಭಾರತ
  • ಮೊದಲ ಇನ್ನಿಂಗ್ಸ್​ ಮುಕ್ತಾಯ
  • 20 ಓವರ್ ಅಂತ್ಯಕ್ಕೆ 213 ರನ್​
  • ಟೀಮ್​ ಇಂಡಿಯಾ 214 ರನ್​ ಗುರಿ
ನವದೆಹಲಿ: ಇಂದು (ಡಿ.11) ಮುಲ್ಲನ್‌ಪುರದ ನ್ಯೂ ಪಿಸಿಎ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಐದು ಪಂದ್ಯಗಳ ಟಿ20 ಸರಣಿಯ ಎರಡನೇ ಪಂದ್ಯದ ಮೊದಲ ಇನ್ನಿಂಗ್ಸ್ ಮುಕ್ತಾಯಗೊಂಡಿದೆ.
ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡ ಭಾರತ, ದಕ್ಷಿಣ ಆಫ್ರಿಕಾ ತಂಡಕ್ಕೆ ಬ್ಯಾಟಿಂಗ್ ಮಾಡುವಂತೆ ಆಹ್ವಾನಿಸಿತು. ಅಂತೆಯೇ, ಬ್ಯಾಟ್​ ಮಾಡಲು ಕಣಕ್ಕಿಳಿದ ಹರಿಣರ ಪಡೆಯ ಬ್ಯಾಟರ್​ಗಳು ಟೀಮ್ ಇಂಡಿಯಾ ವೇಗಿಗಳಿಗೆ ಬೆವರಿಳಿಸಿದರು. ತಂಡದ ಪರ ಕ್ವಿಂಟನ್​ ಡಿಕಾಕ್ ಸ್ಫೋಟಕ ಪ್ರದರ್ಶನ ( 46 ಎಸೆತ​, 93 ರನ್​) ತಂಡದ ಮೊತ್ತವನ್ನು 200ರ ಗಡಿದಾಟಿಸಲು ಸಹಾಯ ಮಾಡಿತು. 20 ಓವರ್​ ಅಂತ್ಯಕ್ಕೆ 4 ವಿಕೆಟ್​ ಕಳೆದುಕೊಂಡ ದಕ್ಷಿಣ ಆಫ್ರಿಕಾ, 213 ರನ್​ ಕಲೆಹಾಕಿದೆ. ಈ ಬೃಹತ್ ಗುರಿಯನ್ನು ಭಾರತ ಸುಲಭವಾಗಿ ತಲುಪಲಿದೆಯೇ​ ಎಂಬುದನ್ನು ಕಾದು ನೋಡಬೇಕಿದೆ.    

ಭಾರತ ತಂಡ

ಅಭಿಷೇಕ್ ಶರ್ಮ, ಶುಭಮನ್ ಗಿಲ್, ಸೂರ್ಯಕುಮಾರ್ ಯಾದವ್ (ನಾಯಕ), ತಿಲಕ್ ವರ್ಮ, ಜಿತೇಶ್ ಶರ್ಮ (ವಿಕೆಟ್​ ಕೀಪರ್​), ಹಾರ್ದಿಕ್ ಪಾಂಡ್ಯ, ಶಿವಂ ದುಬೆ, ಅಕ್ಷರ್ ಪಟೇಲ್, ಅರ್ಷದೀಪ್ ಸಿಂಗ್, ವರುಣ್ ಚಕ್ರವರ್ತಿ, ಜಸ್ಪ್ರಿತ್ ಬುಮ್ರಾ

ದಕ್ಷಿಣ ಆಫ್ರಿಕಾ

ಕ್ವಿಂಟನ್ ಡಿ ಕಾಕ್, ರೀಜಾ ಹೆಂಡ್ರಿಕ್ಸ್, ಐಡೆನ್ ಮಾರ್ಕ್ರಾಮ್ (ಕ್ಯಾಪ್ಟನ್​), ಡೆವಾಲ್ಡ್ ಬ್ರೆವಿಸ್, ಡೇವಿಡ್ ಮಿಲ್ಲರ್, ಡೊನೊವನ್ ಫೆರೇರಾ, ಜಾರ್ಜ್ ಲಿಂಡೆ, ಮಾರ್ಕೊ ಜಾನ್ಸೆನ್, ಲುಥೋ ಸಿಪಾನ್ಲಾ, ಲುಂಗಿ ಎನ್‌ಗಿಡಿ, ಒಟ್ನೀಲ್ ಬಾರ್ಟ್‌ಮ್ಯಾನ್
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net