ಅಂದಹಾಗೆ, ಕುತ್ತಿಗೆ ಗಾಯದಿಂದಾಗಿ ಗಿಲ್, ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಮತ್ತು ಏಕದಿನ ಸರಣಿಯಿಂದ ಹೊರಗುಳಿದಿದ್ದು ನಿಮಗೆಲ್ಲರಿಗೂ ತಿಳಿದೇ ಇದೆ. ಆ ಸಮಯದಲ್ಲಿ, ಗಿಲ್ ಅವರು ಎರಡು ದಿನಗಳ ಕಾಲ ಆಸ್ಪತ್ರೆಯಲ್ಲಿ ಇರಬೇಕಾಯಿತು. ಟಿ20 ಸರಣಿಗೆ ಮುಂಚಿತವಾಗಿ ಅವರು ಫಿಟ್ನೆಸ್ ಮರಳಿ ಪಡೆದರು. ಆದಾಗ್ಯೂ, ಶುಭಮಾನ್ ಗಿಲ್ ಇದುವರೆಗೆ ದಕ್ಷಿಣ ಆಫ್ರಿಕಾ ವಿರುದ್ಧ ಆಡಿದ ಮೂರು ಪಂದ್ಯಗಳಲ್ಲಿ ರನ್ ಗಳಿಸಲು ವಿಫಲರಾಗಿದ್ದಾರೆ.