ಅಂಡರ್‌-19 ಏಷ್ಯಾಕಪ್ ಫೈನಲ್‌: ಪಾಕ್​ ಬ್ಯಾಟರ್​ಗಳ ಅಬ್ಬರ​, ಭಾರತಕ್ಕೆ 338 ರನ್​ಗಳ ಬೃಹತ್​ ಗುರಿ | IND vs PAK U-19

IND vs PAK U-19
ಅಂಡರ್‌-19 ಏಷ್ಯಾಕಪ್ ಫೈನಲ್‌: ಪಾಕ್​ ಬ್ಯಾಟರ್​ಗಳ ಅಬ್ಬರ ಬ್ಯಾಟಿಂಗ್​, ಭಾರತಕ್ಕೆ 338 ರನ್​ಗಳ ಬೃಹತ್​ ಗುರಿ | IND vs PAK U-19
Published on: 

ಓಮಾನ್​: ಪ್ರಸಕ್ತ ಅಲ್ ಅಮರತ್​ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಭಾರತ ಮತ್ತು ಪಾಕಿಸ್ತಾನ ನಡುವಿನ ಅಂಡರ್‌-19 ಏಷ್ಯಾಕಪ್ ಫೈನಲ್ ಪಂದ್ಯದ ಮೊದಲ ಇನ್ನಿಂಗ್ಸ್ ಇದೀಗ ಮುಕ್ತಾಯಗೊಂಡಿದೆ. 50 ಓವರ್ ಅಂತ್ಯಕ್ಕೆ 9 ವಿಕೆಟ್​ ಕಳೆದುಕೊಂಡು ಪಾಕಿಸ್ತಾನ 337 ರನ್​ಗಳ ಬೃಹತ್​ ಮೊತ್ತವನ್ನೇ ಕಲೆಹಾಕಿದೆ.

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ಪಾಕಿಸ್ತಾನ, ಟೀಮ್ ಇಂಡಿಯಾಗೆ ಬೌಲಿಂಗ್ ಮಾಡುವಂತೆ ಆಹ್ವಾನಿಸಿತು. ಅಂತೆಯೇ ಕಣಕ್ಕಿಳಿದ ಪಾಕಿಸ್ತಾನಿ ಆರಂಭಿಕ ಬ್ಯಾಟರ್​ಗಳಾದ ಉಸ್ಮಾನ್ ಖಾನ್ ಮತ್ತು ಅಬ್ದುಲ್ ಖಾದಿರ್ ಆಕ್ರಮಣಕಾರಿ ಬ್ಯಾಟಿಂಗ್‌ ನಡೆಸಿದರು. ಪವರ್​ಪ್ಲೇ ಸೇರಿದಂತೆ ಇನ್ನುಳಿದ ಓವರ್​ಗಳಲ್ಲೇ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದರು.

ನಂತರ ಕ್ರೀಸ್‌ಗೆ ಬಂದ ಅಬ್ದುಲ್ ಖಾದಿರ್ ಆರಂಭದಿಂದಲೇ ಆಕ್ರಮಣಕಾರಿ ಆಟ ಪ್ರದರ್ಶಿಸಿದರು. ಉಸ್ಮಾನ್ ಖಾನ್ ಜತೆಗೂಡಿ ರನ್ ವೇಗ ಹೆಚ್ಚಿಸಿದ ಅವರು, ಕೇವಲ 54 ಎಸೆತಗಳಲ್ಲಿ 80 ರನ್ ಸಿಡಿಸಿದರು. ಈ ಜೋಡಿ ಮಹತ್ವದ ರನ್‌ಗಳ ಜತೆಯಾಟವನ್ನೂ ನೀಡಿತು. ಉಸ್ಮಾನ್ ತಮ್ಮ ಶತಕದ ಮೂಲಕ ಪಾಕಿಸ್ತಾನದ ಇನ್ನಿಂಗ್ಸ್‌ಗೆ ಬಲ ತುಂಬಿದರು.

ಇನ್ನೊಂದೆಡೆ, ಪಾಕಿಸ್ತಾನದ ನಾಯಕ ಫರ್ಹಾನ್ ಯೂಸಫ್ ಅರ್ಧಶತಕದ ಕೊಡುಗೆ ನೀಡುವ ಮೂಲಕ ಕ್ಯಾಪ್ಟನ್ ಇನ್ನಿಂಗ್ಸ್ ತೋರಿದರು. ಅತ್ತ ಮೊದಲ 30 ಓವರ್​ಗಳಲ್ಲಿ ವಿಕೆಟ್​ ಪಡೆಯಲು ತೀರ ಪರದಾಡಿದ ಟೀಮ್ ಇಂಡಿಯಾ ಬೌಲರ್‌ಗಳು, ನಂತರದಲ್ಲಿ ಬ್ಯಾಕ್ ಟು ಬ್ಯಾಕ್​ ವಿಕೆಟ್​ಗಳನ್ನು ಕಬಳಿಸಿದರು. ಈ ಮೂಲಕ ಸುಲಭವಾಗಿ 300ರ ಗಡಿದಾಟಿದ್ದ ಪಾಕಿಸ್ತಾನವನ್ನು 350 ಸ್ಕೋರ್​ ದಾಟಲು ಬಿಡದಂತೆ ಕಟ್ಟಿಹಾಕಿದರು.

Also Read
ಎಸ್‌ಸಿ, ಎಸ್‌ಟಿ ಮೀಸಲಾತಿ ಹೆಚ್ಚಳಕ್ಕೆ ಸಂವಿಧಾನಾತ್ಮಕ ರಕ್ಷಣೆ ಕೋರಿ ಪ್ರಧಾನಿ, ಅಮಿತ್​ ಶಾಗೆ ಡಿಸಿಎಂ ಡಾ.ಜಿ. ಪರಮೇಶ್ವರ್​​ ಪತ್ರ
IND vs PAK U-19

ಇನ್ನು, ಟೀಮ್ ಇಂಡಿಯಾ ಪರ ಕಾವ್ಯಾ ಪಟೇಲ್ 4 ವಿಕೆಟ್​ ಪಡೆದು ಮಿಂಚಿದರೆ, ಚಿಗುರುಪತಿ ವೆಂಕಟ 3 ಮತ್ತು ಅರ್ಜುನ್ ರಾಜ್‌ಪುತ್ 1 ವಿಕೆಟ್ ಪಡೆದರು. ಮತ್ತೊಂದು ರನ್​ಔಟ್​ ಮೂಲಕ ಸಿಕ್ಕಿತು. ಈಗ ಪಾಕಿಸ್ತಾನ ನೀಡಿರುವ 338 ರನ್​ಗಳ ಬೃಹತ್ ಗುರಿಯನ್ನು ಭಾರತ ಸುಲಭವಾಗಿ ತಲುಪಲಿದೆಯಾ ಅಥವಾ ಪಂದ್ಯವನ್ನು ಕೊನೆಯವರೆಗೂ ಕೊಂಡೊಯ್ಯುವ ಮೂಲಕ ಟಫ್ ಫೈಟ್​ ನೀಡಲಿದೆಯಾ ಎಂಬುದನ್ನು ಕಾದು ನೋಡಬೇಕಿದೆ.